"ಅತಿರಿಕ್ತೆ" ಸುಧಾಮೂರ್ತಿ ಅವರು ಬರೆದ ಮೊದಲ ಕಾದಂಬರಿ,ಇದನ್ನು ಮುನ್ನುಡಿಯಲ್ಲಿ ಅವರೇ ಹೇಳಿದ್ದಾರೆ... ಇದು ಕೂಡ ಸಾಮಾಜಿಕ ಕಳಕಳಿಯ ಕುರಿತು ಬರೆದಿರುವ ಕೌಟುಂಬಿಕ ಕಾದಂಬರಿ. ಮನುಷ್ಯ ಮನುಷ್ಯರಲ್ಲಿ ಶಾಲಾ ಕಾಲೇಜಿನ ಹಂತದಿಂದ ಹಿಡಿದು ಉದ್ಯೋಗ ಅದರಲ್ಲೂ ಉನ್ನತ ಮಟ್ಟಕ್ಕೆ ಏರಲು ನಡೆಯುವ ಸ್ಪರ್ಧೆ, ಅದ್ಕಕಾಗಿ ಎಷ್ಟೇಲ್ಲಾ ತಾಕಲಾಟ!! ಇದೆ ಇಲ್ಲಿಯ ಕಥಾವಸ್ತು. ಮಾಧ್ಯಮ ವರ್ಗದ ಜನ ಉನ್ನತ ಮಟ್ಟಕ್ಕೆ ಹೋಗಲು ಪಡುವ ಶ್ರಮ ನಿಜಕ್ಕೂ ಗಮನಾಹ್ರ. ಈ ಎಲ್ಲ ಸ್ಪರ್ಧೆಗಳ ಮತ್ತು ವ್ಯಾವಹಾರಿಕ ಜಗತ್ತಿನಲ್ಲಿ ಮನುಷ್ಯ ಕಳೆದುಕೊಳ್ಳುವ ಮೌಲ್ಯಗಳು ಒಂದೆರಡಲ್ಲ, ವಿಪರ್ಯಾಸ ಎಂದರೆ ಮನುಷ್ಯ ಮನುಷ್ಯರಿಂದಲೇ ದೂರಾಗಿ ಒಂಟಿಯಾಗಿ ಬದುಕುವ ಯಾಂತ್ರಿಕತೆ ಇಲ್ಲಿ ಎದ್ದು ಕಾಣುತ್ತದೆ.
ಶ್ರೀಕಾಂತ, ಶ್ರೀಮತಿ ಇಲ್ಲಿಯ ನಾಯಕ ನಾಯಕಿ. ಅವರ ವೆಭವಗಳು ಬೇರೆ ಬೇರೆ , ನೆಚ್ಚಿನ ವಿಷಯಗಳು ಬೇರೆ ಬೇರೆ, ಶ್ರೀಮತಿ ಇತಿಹಾಸ ಪ್ರಿಯೆ, ಶ್ರೀಕಾಂತ ತಾಂತ್ರಿಕ ಜಗದಲ್ಲಿ ಸಾಧನೆ ಮಾಡಬೇಕೆಂಬ ಆಸೆಇರುವ ವ್ಯಕ್ತಿ. ಜೊತೆಗೆ ಇವರಿಬ್ಬರ ಕುಟುಂಬದವರೆಲ್ಲ ವಿಭಿನ್ನ ಮನಸ್ಥಿತಿಯ ವ್ಯಕ್ತಿಗಲು ಗಂಗಕ್ಕ ,ರಿಂದಕ್ಕ,ಕಮಲಾಬಾಯಿ ಮುಂತಾದವರು. ನಮ್ಮ ಸುತ್ತಮುತ್ತಲೇ ಇಂತಹ ಶ್ರೀಕಾಂತ ಶ್ರೀಮತಿಯರು ಬಹಳಷ್ಟು ಇದ್ದಾರೆ. ಗಂಡ ಹೆಂಡತಿಯರ ನಡುವೆ ಇರುವ ಪ್ರೀತಿ, ಕಾಳಜಿ , ಒಬ್ಬರ ಏಳಿಗೆಗಾಗಿ ಮತ್ತೊಬ್ಬರು ಮಾಡುವ ತ್ಯಾಗ, ಉನ್ನತ ಮಟ್ಟಕ್ಕೆ ಏರಿದಂತೆಲ್ಲ ಹಿಂದಿನ ದಾರಿಯ ಮರೆಯುವುದು, ಸ್ಪರ್ಧಾ ಜಗತ್ತಿನಲ್ಲಿ ಕುಟುಂಬವನ್ನು ಮರೆತು ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಿ ಅನುಭವಿಸೋ ಒಂಟಿತನ ಹೀಗೆ ಸುಮಾರು ವಾಸ್ತವದಲ್ಲಿ ನಡೆಯುವ ಘಟನೆಗಳು "ಅತಿರಿಕ್ತೆ"ಯಲ್ಲಿ ಮನಮುಟ್ಟುವಂತೆ ಚಿತ್ರಿತಗೊಂಡಿವೆ.
ನನ್ನ ಅನುಭವದಲ್ಲಿ ಹೇಳಬೇಕೆಂದರೆ ಸುಧಾಮೂರ್ತಿ ಅವರ ಕಾದಂಬರಿಗಳಲ್ಲಿ ಮನರಂಜನೆಗಿಂತ ಹೆಚ್ಚಾಗಿ ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ಎದ್ದು ಕಾಣುತ್ತದೆ. ಜೊತೆಗೆ ಪ್ರತಿಯೊಬ್ಬರೂ ಒಪ್ಪುವಂತಹ ಒಂದು ಅಮೂಲ್ಯವಾದ ಸಂದೇಶವೊಂದನ್ನು ಮನಸಿಗೆ ನಾಟುವಂತೆ ಸಾರಿರುತ್ತಾರೆ. ಇದೇ ನಾನು ಅವರ ಅಭಿಮಾನಿ ಆಗಿರುವುದಕ್ಕೆ ಮುಖ್ಯ ಕಾರಣ.
No comments:
Post a Comment