Friday, 26 February 2016

ಪ್ರೀತಿ ಬೆಳಗ್ಗೆ ಹುಟ್ಟಿ ಸಂಜೆ ಸಾಯುವ ವಸ್ತುವಲ್ಲ 
ಅವಶ್ಯಕತೆ ಇಲ್ಲದಾಗ ಶುರುವಾಗಿ ತುಂಬಾ 
ಪರಿತಪಿಸುವಾಗ ದೂರಾವಗೋ ಮಾಯಾವಿ 

Monday, 22 February 2016

ನಾನು ನೀನು ಒಟ್ಟಿಗೆ ತೆಗೆಸಿದ ಭಾವಚಿತ್ರಗಳನ್ನೆಲ್ಲ 
ಒಂದುಗೂಡಿಸಿದಾಗ ನನ್ನ ಅಂದಕ್ಕಿಂತ 
ನಿನ್ನ ಕಣ್ಣಲ್ಲಿ ಹೊಳೆವ ಒಲವೇ ಹೆಚ್ಚು ಮಿಂಚುವುದು 
ಅದಕ್ಕೆಂದೇ ನನಗೂ ಹೊಟ್ಟೆಕಿಚ್ಚಾಗುವುದು 

Friday, 19 February 2016

ಕಲ್ಪನೆಯ ಚಿತ್ರಕ್ಕೂ ಬಿಡಿಸಿದ ಚಿತ್ರಕ್ಕೂ 
ಆದ ವ್ಯತ್ಯಾಸವನ್ನೇ ತಡೆಯಾಲಾಗದ ಮನಸು 
ಜೀವನದಲ್ಲಿ ಕಂಡ ಕನಸಿಗೂ ವಾಸ್ತವದ ಸ್ಥಿತಿಯಲ್ಲಿ 
ಆಗುವ ಬದಲಾವಣೆಗಳ ಸಹಿಸುವುದೇ 
ಜೀವನದ ಚಿತ್ರವ ಸುಂದರವಾಗಿ ಕೆತ್ತುವ ಬದಲು 
ಇರುವ ವಾಸ್ತವವನ್ನು ಸ್ವಚ್ಛ ಮನದಿಂದ ಒಪ್ಪಿಕೊಂಡರೆ 
ಬದುಕೆಂಬ ಚಿತ್ರಪಟವು ಆಕಾಶದೆತ್ತರಲ್ಲಿ ಹಾರಾಡುವುದು 

Wednesday, 17 February 2016

ನಿನ್ನ ಕಡಲಂತ ಕಂಗಳಲಿ ನನ್ನ ರೂಪವೊಂದೇ ಕಾಣಲಿ 
ಎಂದು ಬಯಸುವ ಸ್ವಾರ್ಥಿ ನಾನಲ್ಲ 
ಮುಗಿಲಂತ ಮನದಿಂದ ನನಗೆ  ಮಾತ್ರ ಪ್ರೀತಿ ಸುರಿಸು 
ಎಂದು ಹೇಳುವ ದುರಾಸೆಯೂ ಎನಗಿಲ್ಲ 
ಈ ಮನಸು ಬಯಸುವುದೊಂದೇ 
ನೀ ಕಡಲಲ್ಲೇ ಮುಳುಗಿರು ಮುಗಿಲಲ್ಲೇ ಅವಿತಿರು 
ನನ್ನ ನಿಷ್ಕಲ್ಮಷ ಪ್ರೇಮ ನಿನ್ನ ಮನಸಿಗೆ ಮುಟ್ಟಿದರೆ ಸಾಕು 
ಉಸಿರಿರುವವರೆಗೂ ನಿನಗಾಗಿ ಕಾಯುವ ಸುಖವೊಂದೇ ಬೇಕು 
ಬೇರೇನೂ ಬಯಸದು ಈ ಮನಸು ನಿನ್ನ ಪ್ರೇಮದ ಹೊರತು 

Monday, 15 February 2016

ಜೀವನವೊಂದು ಜೇಡರ ಬಲೆಯಂತೆ ವೃತ್ತಾಕಾರದಲ್ಲಿದೆ 
ಅಲ್ಲಿ ತುಂಬಿರುವುದು ಸುಖ ದುಃಖ ನೋವು ನಲಿವುಗಳು 
ಒಂದೊಂದೇ ಎಳೆಯನ್ನು ಪ್ರೀತಿ ವಿಶ್ವಾಸಗಳಿಂದ ಹೆಣೆದು 
ಕಟ್ಟಿದರೆ ಸುಖವು ಕಟ್ಟಿಟ್ಟ ಬುಟ್ಟಿ ಆಗ ನೀ ಹೆಣೆದ ಬಲೆಯಲ್ಲಿ 
ನೀನೆ ಬಿದ್ದರೂ ಕೇಡಿಲ್ಲ ಪರರು ಬಿದ್ದರೂ ಕೇಡಿಲ್ಲ 
ಪರರ ಅಳಿಸಲು ನೀ ಹೆಣೆದರೆ ನಿನ್ನ ಉಳಿಸಲು ಮತ್ಯಾರು ಬರಲ್ಲ 
ಇದೇ ಜೇಡರ ಬಲೆಯಂತಿರುವ ಜೀವನದ ಕಹಿ ಸತ್ಯ 
ಎಲ್ಲರೂ ನನ್ನವರೇ ಎಂದು ನಂಬಿ ಮೋಸ ಹೋದ ಮನಸೊಂದು 
ಸಾಯಲು ಹೊರಟಿತಂತೆ ಆದರೆ ದೇಹವ ಏನು ಮಾಡುವುದು 
ಜೀವ ತೆಗೆಯುವ ಶಕ್ತಿ ಜೀವ ಕೊಟ್ಟ ದೇವರಿಗೇ ಎಂದು ಅರಿತು 
ಹಿಂದೆ ತಿರುಗಿದರೆ ಮತ್ತೂ ಮೋಸ ಮಾಡಿದವರನ್ನೇ ನೋಡುತಿರಬೇಕು 
ಏನು ಮಾಡಲೂ ಆ ನೊಂದ ಮನಸಿಗೆ ತೋಚದಾಯಿತು 
ಕೊನೆಗೊಂದು ತಿಳಿಯಿತು ಸತ್ಯ ನನ್ನವರೆಲ್ಲರೂ ಮಿಥ್ಯ 
ಇಲ್ಯಾರು ನಿನಗಿಲ್ಲ ನಿನಗೆ ನೀನೆ ಎಲ್ಲ 
ಬಿಟ್ಟು ಬಿಡು ಎಲ್ಲರೂ ನನ್ನವರೆಂಬ ಭ್ರಮೆಯ ಮಾಡಿಬಿಡು ನಿರ್ಲಕ್ಷ 
ಆಗ ಓಡಿ ಬರುವುದು ಛಲವು ನಿನ್ನದಾಗಿಸಲು ಬದುಕಿನ ಗೆಲುವು 

Sunday, 7 February 2016

ಬಾಳೊಂದು ಸುಂದರ ಗಣಿತ 
ಪ್ರೀತಿ ವಿಶ್ವಾಸಗಳ ಸಂಕಲನ 
ದ್ವೇಷ ಹೊಟ್ಟೆಕಿಚ್ಚುಗಳ ವ್ಯವಕಲನ 
ಸ್ನೇಹ ಪ್ರೀತಿಗಳನು ಗುಣಿಸಿ 
ಕೋಪ ಕ್ರೌರ್ಯಗಳಿಂದ ಭಾಗಿಸಿದರೆ 
ಉಳಿಯುವ ಶೇಶವೇ ಬದುಕಿನ ತಕಧಿಮಿತ 


Friday, 5 February 2016

ಪದಗಳಲ್ಲೇ ಎಷ್ಟೆಂದು ಬಿಂಬಿಸಲಿ ಈ ಭಾವನೆಗಳನು 

ಖಾಲಿಯಾದವೇನೋ ಎಂಬ ದುಗುಡ ನನ್ನ ಮನದಲ್ಲಿ 
ಶಬ್ದಗಳನ್ನೇ ಹುಚ್ಚಿಯಂತೆ ಹುಡುಕುತಿರುವೆ ಭಂಡಾರದಲ್ಲಿ 

ನವ ಪದಗಳ ಸೃಷ್ಟಿಸಲು ಕೊಟ್ಟಿಲ್ಲ ಶಕ್ತಿ ಎನಗೆ ಶಾರದೆಯು 
ಹುಡುಕಾಟದಲ್ಲೇ ಸೋತು ಸುಣ್ಣವಾದೇ ನಾ ಇಂದು 

ಚಿತ್ರವಾದರೂ ಬರೆಯೋಣ ಎಂದೆನಿಸುತ್ತಿದೆ ಈ ಮನಕೆ 
ಪದಗಳಲಿ ಪೋಣಿಸುವ ಕಲೆಯು ಬಣ್ಣಗಳ ಲೋಕದಲ್ಲೂ 
ಕೈಹಿಡಿವುದೇ ಎಂಬ ಅನುಮಾನ ಒಂದು ಕಡೆ 
ಹೊಸದೇನಾದರೂ ಕಲಿಯುವ ಆಸೆ ಮತ್ತೊಂದು ಕಡೆ 

ಯಾರಿಗೆ ಗೊತ್ತು ತಾಯಿ ನಿನ್ನ ಲೀಲೆ 
ಈ  ಮಗಳಿಂದು ಬೇಡುತಿಹಳು ನಿನ್ನ ಕೃಪೆಯ 
ಹರಸಮ್ಮ ನನ್ನ ಸಿಗಲೆಂದು  ಚಿತ್ರಬಿಡಿಸುವ ಕಲೆಯ 

Monday, 1 February 2016

ನನ್ನೊಡಲಲ್ಲಿ ಉರಿಯುತಿರುವ ನಿರಾಸೆಯ ಬೆಂಕಿ ಆರಲು 
ಕುಡಿಯಬೇಕಾಗಿದೆ ಯಶಸ್ಸಿನ ನೀರನು 
ಆ ನೀರಿಗಾಗಿ  ಸೇರಿಸಬೇಕು ನಾ ಪರಿಶ್ರಮವೆಂಬ ಹನಿಗಳನ್ನು 
ಕಷ್ಟಪಟ್ಟರೆ ತಾನೇ ಸುಖದ ಬಾಗಿಲು ತೆರೆಯುವುದು 
ಮುಚ್ಚಿರುವ ಕದವ ತೆರೆಯಲು ಸುರಿಸಬೇಕು ಬೆವರಿನ ಶ್ರಮವ 
ಅರಿಯಲು ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹಿರಿಯರ ನುಡಿಯ 
ಪ್ರಯತ್ನವೆಂಬ ಬತ್ತಿಗೆ ಶ್ರಮವೆಂಬ ಎಣ್ಣೆಯ ಕೂಡಿಸಿ ದೀಪ ಹಚ್ಚುವಾಸೆ 
ಬೆಳಗಲು ಯಶಸ್ಸೆಂಬ ಜ್ಯೋತಿಯ ಇಲ್ಲದೇ ಯಾವುದೇ ದುರಾಸೆ