Thursday, 30 May 2013

ಪ್ರಕೃತಿ ಮತ್ತು ಮನಸು

ಮುಗಿಲಿಗೂ ಕಡಲಿಗೂ ಎಲ್ಲೆ ಎಲ್ಲಿದೆ 
ಎತ್ತ ನೋಡಿದರೂ ನೀಲಿ ನೀಲಿ 

ಮನಸೂ ಒಂಥರ ಮುಗಿಲಂತೆ 
ತನ್ನಿಷ್ಟದಂತೆ ಹರಿಯುವುದು ಕಡಲಂತೆ 

ಪ್ರಕೃತಿಗೂ ಮನಸಿಗೂ ಹೇಳತೀರದ ಅನುಬಂಧ 
ಇರಬೇಕು  ಇಬ್ಬರ ನಡುವೆ ಸದಾ ಸವಿಬಂಧ 

ನಿಸರ್ಗದ ನರ್ತನವ ಅರ್ಥೈಸಿಕೊಂಡರೆ 
ಸಿಗುವುದು ಮನುಜನ ಮನಸಿಗೆ ಸಾಂತ್ವನ 

ಪ್ರಕೃತಿಯ ಪ್ರೀತಿಗೆ ಪಾತ್ರರಾದರೆ ಈ ಜೀವನ ಸುಂದರ 
ವಿಕೋಪಕ್ಕೆ ತುತ್ತಾದರೆ ಆಗುವುದು ಬದುಕು ಹರೋಹರ 

Tuesday, 28 May 2013

ದೂರ ಹೋಗದಿರು

ನೀನಿರದ ಬಾಳು ಊಹಿಸಲು ಆಗುತ್ತಿಲ್ಲ 
ಎಲ್ಲಿ ನೋಡಿದರೂ ಕಾಣುತ್ತಿರುವೆ ನೀನೆ ಎಲ್ಲ 

ಅಂದುಕೊಂಡ ಹಾಗೆ ಏನು ಆಗದು 
ಆಗುತ್ತಿರುವುದು ಏನು ಎಂದು ನನಗೆ ತಿಳಿಯದು 

ಈ ಜಗದಲ್ಲಿ ನನಗೆಂದು ಯಾರೂ ಇಲ್ಲ 
ಇದ್ದ ನೀನೊಬ್ಬನೇ ನನಗೆಲ್ಲ 

ಹೇಳದೆ ನನ್ನ ಬದುಕನ್ನು ಪ್ರವೇಶಿಸಿದೆ 
ಕೇಳದೆ ಮಾತ್ರ ದೂರ ಹೋಗಬೇಡ 

ಆಗದು ನನಗೆ ನಿನ್ನ ಅಗಲಿ ಇರಲು 
ಬೇಕೆನಗೆ ಕೊನೆವರೆಗೂ ನಿನ್ನ ಪ್ರೀತಿಯ ಸೂರು 

ನಿನ್ನ ನೆನಪಿನ ರಂಗೋಲಿಯೇ ಹರಿಯುತ್ತಿದೆ ಎದೆಯಲ್ಲಿ 
ಅದಕ್ಕೆ ಬಣ್ಣಗಳಿಂದ ಅಲಂಕರಿಸುವೆಯ ನಿನ್ನ ಕೈಯಲ್ಲಿ  Sunday, 26 May 2013

ನೆನಪುಗಳ ಮಾಯೆ

ನೆನಪುಗಳು ಹೀಗೇಕೆ 
ಬೇಡವೆಂದರೂ ಬಂದು ಕಾಡುವುದು 
ಬೇಕಾದಾಗ ಬಾರದೆ ಹೋಗುವುದು 
ಮೆದುಳಿಗೆ ಬೇಕಾದ ನೆನಪು 
ಮನಸಲ್ಲಿ ಅಳಿಯುವುದು 
ಮನಸಿಗೆ ಬೇಡವಾದ ನೆನಪು 
ತಲೆಯಲ್ಲಿಯೇ ಕೊರಿಯುವುದು 
ಕಿತ್ತು ಎಸೆಯಬೇಕಾದ ನೆನಪಿಗೆ 
ಇರುವ ಶಕ್ತಿ ಬೇಕಾದ ನೆನಪಿಗೆ ಏಕಿಲ್ಲ 
ಬದುಕೆಂದರೆ ಸಿಹಿ ಕಹಿ ನೆನಪುಗಳ ಮಿಶ್ರಣ 
ಆಗದಿರಿ ನೆನಪುಗಳಿಂದ ತಲ್ಲಣ 
ಓಡಿಸೋಣ ಕಹಿನೆನಪುಗಳನು ದೂರ 
ಕಟ್ಟೋಣ  ಸಿಹಿನೆನಪುಗಳ ಹಾರ 

Saturday, 18 May 2013

ನೆರಳು

ನೀ ಉರಿಯುವ ಬೆಂಕಿಯಾದರೆ 
ನಾ ಅದನು ತಣಿಸುವ ನೀರಾಗುವೆ 
ನೀ ಹರಿಯುವ ಕಡಲಾದರೆ 
ನಾ  ನಿನ್ನ ಸೇರುವ ನದಿಯಾಗುವೆ 
ನೀ ಫಲ ಕೊಡುವ ಧರೆಯಾದರೆ 
ನಾ ಸುರಿಯುವ ಮಳೆಯಾಗುವೆ 
ನೀ  ಹೇಗೆ ಇರು ಎಲ್ಲೇ ಇರು 
ಯಾವುದೇ ರೂಪದಲ್ಲಿದ್ದರೂ 
ನಾ ಸದಾ ನಿನ್ನ ಬೆಂಬಿಡದೆ ಕಾಯುವ 
ನೆರಳಾಗಿರುವೆ                     

Friday, 17 May 2013

ಮೌನ


ನೀ ಮೌನಿಯಾದರೆ ನಾ 
ಮರೆತುಬಿಡುವೆ ನನ್ನ ದನಿಯ 
ಕೊಲ್ಲದಿರು ನೀ ನನ್ನ ಮೌನದಲಿ 
ಕೋಪವಿದ್ದರೆ ಬೈದುಬಿಡು ನಿನ್ನ ದನಿಯಲ್ಲಿ

ಮೌನವಾಗಿರುವುದು ಚಂದವೆಂದು 
ತಿಳಿದು ಸುಮ್ಮನಿದ್ದೆ ನಾ ಅಂದು 
ಆದರೆ ಒಲವಿನ ಹುಡುಗ ಮೌನವಾದರೆ 
ಏನಾಗುವುದೆಂಬ ಅರಿವು ನನಗಾಯಿತು ಇಂದು 

ಭಾವನೆಯನ್ನೇ ಬಂಡವಾಳವನ್ನಾಗಿಸಿ 
ಬದುಕುತಿರುವೆ ನಾ ಪ್ರತಿಕ್ಷಣ 
ಎಂದಾದರೂ ಒಂದು ದಿನ ತಿಳಿಯುವೆಯ 
ನೀ ನನ್ನ ಮನಸಿನ ತಲ್ಲಣ 

ಬಳಿ ನೀ ಇದ್ದಾಗ ಹರಿಯುತ್ತಿತ್ತು 
ಚಂದದ ಪ್ರೀತಿಯ ಭಾವ 
ನೀ ದೂರಾದ ಕ್ಷಣದಿಂದ ಎಲ್ಲೇ 
ಮೀರಿ ಹರಿಯುತಿದೆ ವಿರಹದ ರಾಗ 

ಮನಬಿಚ್ಚಿ ಹೇಳುವೆ ಕಡೆಯ ಮಾತು ನಿನಗೆ 
ಈಗಲೇ ನೆನೆಪಿಸುಕೋ ನನ್ನ 
ಈ ಜಗವ ಬಿಟ್ಟು ಹೋಗುವ ಮುನ್ನ 
ನೀ ನೆನೆದರೆ ಎನ್ನ ಈ ಜೀವನ ಧನ್ಯ 

Wednesday, 15 May 2013

ಹಂಬಲ

ಕಾದು ಕಾದು ಸಾಕಾಯಿತು ನನಗೆ 
ಪೂರ್ವದ ದಿನಕರ ಪಶ್ಚಿಮಕ್ಕೆ ಸರಿಯುತ್ತಿದ್ದಾನೆ 
ಆದರೂ ನಿನ್ನ ಸುಳಿವಿಲ್ಲ 

ನೀನೀಗ ನನ್ನ ಬಳಿ ಇದ್ದಿದ್ದರೆ ನಾ ಹೆಣೆದ
ಹಾಡನ್ನು ನಿನ್ನಿಂದ ಹಾಡಿಸಿ ಆ ಇಂಪಾದ ದನಿಯೊಂದಿಗೆ
ಈ ತಂಪಾದ ಮುಸ್ಸಂಜೆಯ ಸವಿಯುತ್ತಿದ್ದೆ

ಈ ಹೃದಯದ ಒಂದು ಪುಟ್ಟ ಆಸೆಯನ್ನೂ
ಈಡೇರಿಸದೇ ಸತಾಯಿಸುತಿರುವೆ ಹೀಗೇಕೆ
ಇನ್ನೂ ಕಾಡುತಿದೆ ನಿನ್ನ ದನಿ ಕೇಳುವ ಹಂಬಲಿಕೆ

ಮುಂಜಾನೆಯಿಂದ ಮುಸ್ಸಂಜೆ ಆದರೂ ನಾ ಕಾಯುವೆ
ಕತ್ತಲಾಗುವ ಮುನ್ನ ಕೇಳಿಸಿಬಿಡು ನಿನ್ನ ದನಿಯೊಮ್ಮೆ
ಮತ್ತೆ ಮೋಸ ಮಾಡದೇ ಹಾರಿಹೋಗಬೇಡ ಓ ನನ್ನ ಕೋಗಿಲೆಯೇ

Tuesday, 14 May 2013

ನಾ ನಿನ್ನ ಸಹಚಾರಿಣಿ


ನನ್ನ ಮನ ಒಂದು ಶಿಲೆಯಂತೆ ಇರಲು

ಅದಕೆ ಭಾವನೆಯ ರೂಪವನ್ನು ಕೆತ್ತುವ ಶಿಲ್ಪಿಯಾದೆ ನೀನು 


ಆಗಸದಷ್ಟು ಅಗಲದ ನಿನ್ನ ಕಣ್ಣಲ್ಲಿ ಕೊಂಚವೇ 

ಮಿಂಚು ಕಂಡರೂ ಸಾಕು ಮಿಡಿಯುವುದು ನನ್ನ ಹೃದಯ 


ಹಕ್ಕಿಗಳಂತೆ ನನಗೂ ರೆಕ್ಕೆಗಳು ಇದ್ದಿದ್ದರೆ ಎಷ್ಟು ಚಂದ 

ಆಗ ಹಾರಾಡುತಿದ್ದೆ ಸದಾ ನಿನ್ನ ಮನಸೆಂಬ ಮೋಡದ ತುಂಬಾ 


ಸೂರ್ಯನ ಬೆಳಕಂತೆ ನಿನ್ನ ಒಲವಿನ ಕಿರಣಗಳು 

ಈ ಮನಸಲಿ ಬಿದ್ದರೆ ಕಂಗೊಳಿಸುವುದು ನನ್ನ ಹೃದಯವೆಂಬ ಧರೆಯು 


ನೀ ಶಿಲ್ಪಿಯಾದರೂ ಮಿಂಚಾದರೂ ಸೂರ್ಯನಾದರೂ 

ಏನೇ ಆದರೂ ಸದಾ ನಾನೇ ನಿನ್ನ ಸಹಚಾರಿಣಿಯಾಗಿರುವೆ

Monday, 13 May 2013

ಸ್ವೀಕಾರ


ನನಗಾಗಿ ಯಾರಿಲ್ಲ ಯಾರಿಗಾಗಿಯೂ ನಾನಿಲ್ಲ 
ನನಗೆ ನಾನೇ ಎಲ್ಲ ನಿನಗೆ ನೀನೆ ಎಲ್ಲ 
ಹೀಗಂದೆ ಬದುಕುವುದು  ಸರಿಯಲ್ಲ 

ಪ್ರೀತಿಯೋ ಸ್ನೇಹವೋ ಕೋಪವೋ ದ್ವೇಷವೋ 
ಏನಾದರಿಲಿ ಹೇಗಾದಿರಲಿ ಯಾರಿಗೂ ಯಾರಿಲ್ಲ 
ಎಂದುಕೊಳ್ಳಬೇಡ  ಅವರಿಗೆ ಅವರೇ ಎಲ್ಲ 

ಕವಿತೆಯೋ ಕವನವೋ ಕಥನವೋ ಅದಕ್ಕೆ 
ಕಲ್ಪನೆ ಭಾವನೆಯೇ ಎಲ್ಲ ಅದಕೆ ಒಳ್ಳೆಯ 
ಮನಸಿನ ಹೊರತು ಬೇರೇನೂ ಬೇಕಿಲ್ಲ 

ರಾಗವೋ ತಾಳವೋ ಭಾವವೋ ಅದಕ್ಕೆ 
ಆಲಿಸುವ ಶ್ರವಣಗಳೇ  ಎಲ್ಲ ಸಂಗೀತದ 
ಸ್ವರಗಳ  ಸಂಚಲನದ ಹೊರತು ಬೇರೇನೂ ಬೇಕಿಲ್ಲ 

ಇವುಗಳ ನಡುವೆ ಬದುಕುವ ಮನುಜರು ನಾವು 
ನಿಸರ್ಗದ ನಿಯಮಗಳ ಮೀರುವ ಹಾಗಿಲ್ಲ 
ಇರುವುದನ್ನು ಸ್ವೀಕರಿಸದ ಹೊರತು ಬೇರೆ ದಾರಿ ಇಲ್ಲ 

Thursday, 9 May 2013

ಭಾವನೆಯ ಚಿತ್ತಾರ


ನೀಲಿ ಆಕಾಶದಲಿ ಚಂದ ಚಂದ 
ಬೆಳ್ಳಿ ಮೋಡಗಳ ಚಿತ್ತಾರ 
ಖಾಲಿ ಮನಸಿನಲಿ ಬಣ್ಣ 
ಬಣ್ಣದ ಭಾವನೆಗಳ ಹಾರ 

ಕವಲೊಡೆದು ಹೋದವು 
ಆ ಮೋಡಗಳು ಎಲ್ಲೋ 
ಕರಗದೆ ಹೃದಯದಲಿ ನೆಲೆಸಿವೆ 
ಭಾವನೆಗಳು ಇಲ್ಲೇ 

ಮೋಡಗಳಷ್ಟು ಹಗುರಲ್ಲ ಭಾವನೆಗಳು 
ಗಾಳಿಗೆ ತೇಲಿ ಹೋಗಲು 
ಆಕಾಶದಂತೆ ಸುಂದರ ಶಾಶ್ವತ 
ಅವು ಎಂದೂ ದೂರಾಗಲಾರವು  

ನೀನೊಂದು ಕವಿತೆಯಂತೆ 
ಎಷ್ಟು ಬರೆದರೂ ಸಾಲದು ನಿನ್ನ ಬಗ್ಗೆ 
ಕಡಲ ಆಳದ ಒಳಗೆ ಇರುವ 
ಮುತ್ತಿಗೆ ಚಿಪ್ಪಿನ ಕಾವಲಿನಂತೆ 
ನಿನ್ನ ಪ್ರತಿ ಹೆಜ್ಜೆಗೂ ನೆರಳಾಗಿ ನಾನಿರುವೆ 
ಮುಗಿಲಿನ ಮೋಡಕ್ಕೆ ಕೈ ಚಾಚಿದರೆ 
ನಿನ್ನ ಪ್ರೀತಿಯ ಮಳೆಯೇ ಸುರಿಯುತ್ತದೆ 
ಎಲ್ಲಿದ್ದರೂ ಹೇಗಿದ್ದರೂ ಬಂದು ಬಿಡು ನೀ ಬೇಗ 
ಬಾನಿನ ಅಂಚಿಂದ ನೀ ಬರುತಿರುವ 
ಕ್ಷಣವ ಒಮ್ಮೆ ನೋಡುವ ಮಹದಾಸೆ ನನ್ನದು 
ಈ ಆಸೆಯ ಬೇಗನೆ ಪೂರೈಸುವ ಕರ್ತವ್ಯ ನಿನ್ನದು Friday, 3 May 2013

ಏಕೆ


ನೀ ಯಾರೋ ನಾ ಯಾರೋ 
ಎಲ್ಲಿಂದಲೋ ನೀ ಬಂದೆ ಹೊಸ ಭಾವ ತರಿಸಿದೆ 

ನಿನ್ನ ನೆನೆದು ಗೀಚಿದ ಪದಗಳೆಲ್ಲ 
ಹಾಡಿನಂತೆ ಹರಿಯುವುದೇಕೆ...??? 

ನಿನ್ನ ಕಂಡ ಕ್ಷಣಗಳೆಲ್ಲ 
ನನ್ನ ಮುಖ ತಾರೆಗಳಂತೆ ಮಿನುಗುವುದೇಕೆ...?? 

ನೀ ದೂರಾದ ಕ್ಷಣ ನನ್ನ 
ಕಣ್ಣಲ್ಲಿ ಕಂಬನಿ ಮಿಡಿಯುವುದೇಕೆ...???

ನೀ ಎದುರಿಗೆ ಬಂದಾಗ ನೂರಾರು ಮಾತುಗಳು 
ಹೊರಬರದೆ ಮೌನವಾಗುವುದೇಕೆ...???

ಈ ಏಕೆ ಅನ್ನುವ ಪ್ರಶ್ನೆಗಳಿಗೆ ಉತ್ತರ ಸಿಗದೇ 
ಸದಾ ಕಾಲ ನನ್ನ ಕಾಡುತ್ತಿದೆ ಹೀಗೇಕೆ...??

Thursday, 2 May 2013

ಕಪ್ಪು ಬಿಳುಪಿನ ಸಂಗಮ

ನಿನಗೆಂದೇ ನಾ ಗೀಚುತಿರುವೆ 
ಖಾಲಿ ಹಾಳೆಯಲಿ ಏನೇನೋ ಅಕ್ಷರಗಳ 

ಅದಕ್ಕೇನೆಂದು ನೀ ಕರೆಯುವೆ
ಕವಿತೆಯೋ ಕಾದಂಬರಿಯೋ ಕವನವೋ

ಬರೆದು ಬರೆದು ಬರಿದಾಯಿತು ಬಿಳಿಯ ಕಾಗದ
ಅಕ್ಷರಗಳ ಸೋರಿಸಿ ಖಾಲಿ ಆಯಿತು ಕಪ್ಪು ಶಾಹಿ

ಕಪ್ಪು ಬಿಳುಪಿನ ಸಂಗಮವಾಗಿ ಹರಿಯುತಿದೆ
ಈಗ ಬಣ್ಣ ಬಣ್ಣದ ಚಂದದ ಭಾವನೆಗಳು

ಆ ಭಾವನೆಯು ಕಾಯುತಿದೆ ಒಂದು ಪ್ರತಿಸ್ಪಂದನವ
ಅದು ಸಿಗುವವರೆಗೂ ನಾ ಗೀಚುವೆ ಪ್ರೇಮಪತ್ರವ