Sunday, 28 April 2013

ನಂದಾದೀಪ


ನೋಡೋ ನೋಟಕ್ಕಿಂತ ಚಂದ 
ನಿನ್ನ ನಿರ್ಮಲವಾದ  ಹೃದಯದ ಬಡಿತ 
ಅರಳಿದ ಹುಣ್ಣಿಮೆಗಿಂತ  ಹೊಳಪು 
ನಿನ್ನ ಮನಸಿನ ಬೆಳಕು
  
ನಾ ನುಡಿಯುವ ವೀಣೆಯಾದರೆ 
ನನ್ನ ನುಡಿಸುವ ವೈಣಿಕ ನೀನಾಗಬೇಕು 
ಆಗ ಹರಿಯುವುದು ನನ್ನ ಬಾಳಲ್ಲಿ 
ಮಧುರ  ಸುಮಧುರ ಸಂಗೀತ  

ಒಲವೆಂಬ ಎಣ್ಣೆಯಲ್ಲಿ ನಿನ್ನ ನಗುವೆಂಬ 
ಬತ್ತಿಯ ಮಾಡಿ ಪ್ರೀತಿಯ ದೀಪವ ಹಚ್ಚಿ 
ಆ ಬೆಳಕಲ್ಲಿ ನನ್ನ ಬದುಕನ್ನು ನಂದಾದೀಪವಾಗಿ 
ಬೆಳಗಿಸಿ ನಿನ್ನ ಸಂಗಾತಿಯಾಗಿ ಬಾಳಿಸು ನನ್ನ 

Friday, 26 April 2013

ಬಾಳೊಂದು ಸಂಗೀತ


ಬಾಳೊಂದು ಸಂಗೀತದಂತೆ 
ಕೆಲವೊಮ್ಮೆ ಮಧುರವಾಗಿ ಸಾಗುವುದು 
ಮತ್ತೊಮ್ಮೆ ಕರ್ಕಶವಾಗಿ ಕೇಳುವುದು  
ಪಲ್ಲವಿಯನ್ನೇ ಸರಿಯಾಗಿ ಬರೆಯದೆ 
ಚರಣವನ್ನು ಸುಂದರವಾಗಿಸಲು ಹೊರಟರೆ 
ಒಂದು ಚಂದದ ಗೀತೆಯಾಗಲು ಸಾದ್ಯವೇ 
ಜೀವನದ ಬುನಾದಿಯನ್ನೇ ಸರಿಯಾಗಿ ತೆಗೆಯದೆ 
ಕನಸಿನ ಅರಮನೆಯನ್ನು ಕಟ್ಟಲು ಸಾದ್ಯವೇ 
ಸುಂದರ ಹಾಡಿಗೆ ಪಲ್ಲವಿ ಚರಣದ ಅನುಬಂಧದಂತೆ 
ಬದುಕಲ್ಲಿ  ಪ್ರೀತಿ ಸ್ನೇಹದ ಅನುಬಂಧ ಅನುರಾಗದಲ್ಲಿ 
ಅರಿತು ಬೆರೆತರೆ ಆಗುವುದು ಬಾಳೊಂದು ಭಾವಗೀತೆ
ಅದಕ್ಕೆಂದೇ ನಾ ಬರೆದೆ ಈ ಕವಿತೆ 
 
ನೋವು


ಜೀವನವೇ ಹೀಗಲ್ಲವೇ ಬಯಸುವುದು ಎಂದೂ ಸಿಗದು 
ಪಾಲಿಗೆ ಬಂದದ್ದು ಎಂದೂ ಮನವು ಒಪ್ಪದು 

ಹೋಗು ಮನಸೇ ನೀ ದೂರ ಹೋಗು ಆಸೆಗಳಿಂದ 
ಆಗ ನಿನಗೆ  ಸಿಗುವುದು ಮುಕ್ತಿ ನಿರಾಸೆಗಳಿಂದ 

ನೋವಲ್ಲೆ ಬೆರೆತರೆ ಹೇಗೆ ಸಾಗುವುದು ಜೀವನ
ಬಾ ಮನಸೇ ನೀ ಎಲ್ಲ ನೋವಿಂದ ಆಚೆಗೆ 

ಕಟ್ಟಿದ ಕನಸಿನ ಆಶಾಗೋಪುರ ಕಳಚಿ ಬೀಳುವ ಮುನ್ನ 
ಸೇರಿಬಿಡು ಮನವೇ ಬೇಗನೆ ನೀ ನನಸಾಗಿಸುವ ಗುರಿಯನ್ನ 

Wednesday, 24 April 2013

ಗೊಂಬೆಯಾಟವಯ್ಯ


ಮುದ್ದಾದ ಗೊಂಬೆಯ ನೋಡಿ ಮನಸೋತ ಮನವು 
ಅದನ್ನು ಪಡೆಯುವ ಹುಮ್ಮಸ್ಸಿನಲ್ಲಿ ಹೆಣೆಯಿತೊಂದು ಭಾವನೆಯ 
ಹೆಣೆದ ಭಾವಕ್ಕೆ ಬೆಸೆಯಿತೊಂದು ಸುಂದರ ಒಲವು 
ಮನದ  ಬಯಕೆಯ ಅರಿತ ಭಾವನೆಯು ಚೆಲ್ಲಿತೊಂದು ನಗುವು 
ಬೆರೆತು ಹೋದವು ಎರಡೂ ಒಲವಿನ ಬಂಧನದಲಿ 
ಆದರೆ ಆ ಮುದ್ದಾದ ಗೊಂಬೆಗೂ ಮನಸಿದೆ ಭಾವನೆಯಿದೆಯೆಂದು 
ಅರಿಯದೆ ಹೋಯಿತು ಆ  ಮನವು ಸಾಕಾಯಿತು ಅದಕೆ 
ಆ ಗೊಂಬೆಯ ಒಡನಾಟ ಅದಕ್ಕೆಂದು ನಡೆಸಿತು 
ಮತ್ತೊಂದು ಮನಸಿನ ಹುಡುಕಾಟ 
ಗೊಂಬೆಯ ಪ್ರೀತಿಸಿದ ಮನ ಮತ್ತೊಂದು ಮನದೊಂದಿಗೆ ಸಂತೋಷವಾಗಿದೆ 
ಆ ಮನವೇ ತನ್ನ ಪ್ರಾಣ ಎಂದು ನಂಬಿದ ಗೊಂಬೆ ಗೊಂಬೆಯಾಗೆ ಬಿದ್ದಿದೆ 

Tuesday, 16 April 2013

ಹೂವು ಮುಳ್ಳಿನ ಒಲವು


ಎಲ್ಲಿಂದಲೋ ನೀ ಬಂದೆ 
ಪ್ರೀತಿಯೆಂಬ ಹೊಸ ಅಲೆಯ ಎಬ್ಬಿಸಿದೆ 
ಆ ಅಲೆಯ ರಭಸಕ್ಕೆ ನಿನ್ನ ನೆನಪೆಂಬ ಸುಳಿಯಲ್ಲಿ 
ಕೊಚ್ಚಿ ಹೋಗುತಿದೆ ನನ್ನ ಬದುಕು 

ಜೀವಕ್ಕೂ ಜೀವನಕ್ಕೂ ನೀನೆ ಉಸಿರೆಂದು ನಂಬಿದೆ 
ಕೊಂಚವೂ ಕರುಣೆಯಿಲ್ಲದೆ ಆ ನಂಬಿಕೆಯ ನೀ ಕೊಂದೆ 
ಹೇಗೆಂದು ಅರ್ಥೈಸಲಿ ನನ್ನ ನೋವು ನಿನಗೆ 
ಬದುಕಿನ ಪ್ರತಿಕ್ಷಣವೂ ನರಕವೇ ಆಗುತಿದೆ ನನಗೆ 

ಹೂವು ಮುಳ್ಳಿನಂತೆ ಆಗಿದೆ ನಿನ್ನೊಲವ ಹಾದಿ 
ಒಮ್ಮೆ ಮುಟ್ಟಿದರೆ ನೋವು ಮತ್ತೊಮ್ಮೆ ಅಪ್ಪಿದರೆ ನಲಿವು 
ಬೇಡವೆಂದರೂ ಬರುತಿರುವೆ ನೀ ನನ್ನ ಮನಸಲಿ 
ಬಂದು ದಿನವೂ ಕೊಲ್ಲುತಿರುವೆ ನನ್ನ ಕನಸಲಿ 

ನಾ ನಿನಗೆ ಬೇಡವೆಂದರೆ  ಹೇಳಿಬಿಡು ನಿನ್ನಿಂದ 
ಶಾಶ್ವತವಾಗಿ ದೂರಾಗಿ ಹೋಗುವೆ 
ಬೇಕೆಂದರೆ ಒಮ್ಮೆ ಕರೆದುಬಿಡು ನಿನ್ನೊಲವಿನ ಕರೆಗೆ 
ಖುಷಿಯಿಂದ ಜನ್ಮಪೂರ್ತಿ ನಿನಗಾಗಿ ಕಾಯುವೆ 

Monday, 15 April 2013

ಯುಗಾದಿ


ಕಳೆಯಿತು ಯುಗಾದಿ 
ಶುರುವಾಗಿದೆ ನವವರ್ಷದ ಆದಿ 
ಖುಷಿಯಿಂದ ನಲಿಯೋಣ ಎಲ್ಲರೂ ಕೂಡಿ 
ಬಯಸೋನ ಎಲ್ಲರಿಗೂ ಸಿಗಲೆಂದು 
ಜೀವನಕ್ಕೆ ಸಂತೋಷ ತುಂಬಿದ ಭದ್ರ ಬುನಾದಿ 
ಕಹಿನೆನಪನು ಅಳಿಸಿ ಸಿಹಿ ನೆನಪನು ಬೆರೆಸಿ 
ಒಬ್ಬರನ್ನೊಬ್ಬರನ್ನು ಹರಿಸಿ ಖುಷಿಯಿಂದ 
ಬಾಳೋಣ ನಾವು ಸುಂದರ ಜಗವನು ನಿರ್ಮಿಸಿ 

Tuesday, 9 April 2013

ಬಾಳೆಂಬ ರಥಕ್ಕೆ ಬೇಕೊಬ್ಬ ಸಾರಥಿ 
ಬಾಳೆಂಬ ನೌಕೆಗೆ ಬೇಕೊಬ್ಬ ನಾವಿಕ 
ಬಾಳೆಂಬ ಗುಡಿಗೆ ಬೇಕೊಬ್ಬ ದೇವರು 
ನನ್ನ ಬಾಳು ರಥವಾದರೂ ನೌಕೆಯಾದರೂ 
ಗುಡಿಯಾದರೂ  ಏನೇ ಆದರೂ 
ಸಾರಥಿ ನಾವಿಕ ದೇವರು 
ಇವರಿಗಿಂತ ಮಿಗಿಲಾದ ನಿನ್ನ ಪ್ರೀತಿಯ ತೇರು 
ನನ್ನ ಬದುಕನ್ನು ಬೆಳಗುವ ನೆಮ್ಮದಿಯ ಸೂರು 

Monday, 8 April 2013

ಪ್ರೀತಿಯ ಬೀಜ

ನನ್ನೆದೆಯ ಗೂಡಲ್ಲಿ ಬಚ್ಚಿಟ್ಟ ಪ್ರೀತಿಯ 
ಕಿತ್ತಿಟ್ಟು ಇಡಬೇಕೆನಿಸಿದೆ ನಿನ್ನ ಹೃದಯದಲ್ಲಿ 

ನೀನೆಲ್ಲಿದ್ದರೂ ಹೇಗಿದ್ದರೂ ನನ್ನೆದೆಯ 
ಭಾವನೆಯ ಬೆಳಕಲ್ಲಿ ಫಳ ಫಳ ಹೊಳೆಯುವೆ 

ಬರಿದಾದ ಕಣ್ಣಲ್ಲಿ ನವಿರಾದ ಕನಸು ತುಂಬಿದೆ 
ಭಾವನೆಗಳಿಲ್ಲದ ಮನಸಲ್ಲಿ ಪ್ರೀತಿ ತುಂಬಿದೆ 

ಒಲವಿನ  ಬೀಜವ ಬಿತ್ತಿ ಹೋದರೆ  ಸಾಕೇ 
ಅದಕ್ಕೆ  ಪ್ರೀತಿಯ ನೀರೆರೆಯಬಾರದೇ 

ನೀನೇ  ಬಿತ್ತಿದ ಈ ಪ್ರೀತಿಯ ಬೀಜವ ನಾ ಬೆಳೆಸುವೆ 
ಮರವಾದ ಮೇಲೆ ನಿನಗೆಂದೇ ಸದಾ ನೆರಳಾಗಿರುವೆ