ಬಾಳೊಂದು ಸಂಗೀತದಂತೆ
ಕೆಲವೊಮ್ಮೆ ಮಧುರವಾಗಿ ಸಾಗುವುದು
ಮತ್ತೊಮ್ಮೆ ಕರ್ಕಶವಾಗಿ ಕೇಳುವುದು
ಪಲ್ಲವಿಯನ್ನೇ ಸರಿಯಾಗಿ ಬರೆಯದೆ
ಚರಣವನ್ನು ಸುಂದರವಾಗಿಸಲು ಹೊರಟರೆ
ಒಂದು ಚಂದದ ಗೀತೆಯಾಗಲು ಸಾದ್ಯವೇ
ಜೀವನದ ಬುನಾದಿಯನ್ನೇ ಸರಿಯಾಗಿ ತೆಗೆಯದೆ
ಕನಸಿನ ಅರಮನೆಯನ್ನು ಕಟ್ಟಲು ಸಾದ್ಯವೇ
ಸುಂದರ ಹಾಡಿಗೆ ಪಲ್ಲವಿ ಚರಣದ ಅನುಬಂಧದಂತೆ
ಬದುಕಲ್ಲಿ ಪ್ರೀತಿ ಸ್ನೇಹದ ಅನುಬಂಧ ಅನುರಾಗದಲ್ಲಿ
ಅರಿತು ಬೆರೆತರೆ ಆಗುವುದು ಬಾಳೊಂದು ಭಾವಗೀತೆ
ಅದಕ್ಕೆಂದೇ ನಾ ಬರೆದೆ ಈ ಕವಿತೆ
1 comment:
ಬದುಕಿನ ನಿಜ ಸಾರ ಸಂಗ್ರಹ ಈ ಕವನ.
Post a Comment