Thursday 30 June 2016

ಜೀವನ ಎಂದರೆ ಒಂದು ಪ್ರಯಾಣ 
ಅಲ್ಲಿರುವುದು ಸುಖ ದುಃಖಗಳೆಂಬ ನಿಲ್ದಾಣ 
ಸುಖ ಬಂದಾಗ ಹಿಗ್ಗಿ ನಿಲ್ಲುವೆ 
ದುಃಖ ಬಂದಾಗ ಕುಗ್ಗಿ ನಿಲ್ಲುವೆ 
ಹಾಗೆ ನಿಂತರೂ ಸ್ವಲ್ಪ ಹೊತ್ತು ಮಾತ್ರವೇ 
ಹೊರತು ಇಲ್ಯಾವುದು ಶಾಶ್ವತವಲ್ಲ 
ಹುಡುಕಿದರೆ ಸಿಗುವುವು  ನೂರಾರು ನೋವುಗಳು 
ಮಾಡಿದರೆ ಆಗುವುವು ಸಾವಿರಾರು ಸಾಧನೆಗಳು 
ಬಿಟ್ಟು ಸಾಧಿಸಿದರೆ ಎಲ್ಲರ ಮೇಲಿನ ನಿರೀಕ್ಷೆ 
ಇಡೀ ಜಗತ್ತೇ ಮಾಡುವುದು ನಿನ್ನ ಸಾಧನೆಗಳ ಸಮೀಕ್ಷೆ 

ನಿನ್ನ ನಗುವೆಂಬ ಹೂವನ್ನು ಮುಡಿಯುವಳು ನಾನೇ 
ಆ ಹೂವಿಗೆ ಭಾವಗಳ ದಾರವ ಕಟ್ಟುವವಳೂ ನಾನೇ 
ನಾ ಬರೆದ ಪದಗಳನ್ನೆಲ್ಲ ಪೋಣಿಸಿ ಹಾರವ ಮಾಡುವವನು ನೀನೇ 
ಆ ಹಾರದ ನಡುವೆ ನಾವಿಬ್ಬರೂ ಬಂಧಿಯಾದರೆ 
ಸಾಟಿಯಾಗದೂ ಯಾವ ಹೂವಿನ ಮಾಲೆಯೂ 
ಅಂತಹ ಪರಿಮಳ ಬೀರುವುದು ನನ್ನ ನಿನ್ನ ಒಲವಿನ ಹಾರವೂ 

Wednesday 29 June 2016

ಪುಸ್ತಕಗಳೆಂದೂ ಕೇವಲ ಪುಟ ಮತ್ತು ಶಬ್ಧಗಳಿಂದ ಮಾಡಲ್ಪಟ್ಟಿಲ್ಲ 
ಅವು ಹೊಸ ಕನಸು, ಭರವಸೆ ಮತ್ತು ಸಾಧ್ಯತೆಗಳಿಂದ ಕೂಡಿರುತ್ತವೆ
ಒಂದು ಛತ್ರಿಗೆ ಮಳೆಯನ್ನು ನಿಲ್ಲಿಸುವ ಶಕ್ತಿ ಇಲ್ಲದಿದ್ದರೂ 
ನಮ್ಮನ್ನು ಮಳೆಯಲ್ಲಿ ನಿಲ್ಲುವಂತೆ ಮಾಡುವುದು 
ಹಾಗೆ ವಿಶ್ವಾಸ ಎನ್ನುವುದು ಜೀವನದಲ್ಲಿ ಯಶಸ್ಸು ತರದಿದ್ದರೂ 
ಸವಾಲುಗಳನ್ನು ಎದುರಿಸಲು ಶಕ್ತಿ ಕೊಡುವುದು 

ಒಂದು ಛತ್ರಿಗೆ ಮಳೆಯನ್ನು ನಿಲ್ಲಿಸುವ ಶಕ್ತಿ ಇಲ್ಲದಿದ್ದರೂ 
ನಮ್ಮನ್ನು ಮಳೆಯಲ್ಲಿ ನಿಲ್ಲುವಂತೆ ಮಾಡುವುದು 
ಹಾಗೆ ವಿಶ್ವಾಸ ಎನ್ನುವುದು ಜೀವನದಲ್ಲಿ ಯಶಸ್ಸು ತರದಿದ್ದರೂ 
ಸವಾಲುಗಳನ್ನು ಎದುರಿಸಲು ಶಕ್ತಿ ಕೊಡುವುದು 

Monday 27 June 2016

ನಾ ನಿನ್ನ ಕಂಡ ಮೊದಲ ಕ್ಷಣ ಹೆದರಿದ್ದೆ ನಿನ್ನ ಭೇಟಿಗೆ 
ನಾ ನಿನ್ನ ಭೇಟಿಯಾದ ಮೊದಲ ಕ್ಷಣ ಹೆದರಿದ್ದೆ ನಿನ್ನ ಸ್ಪರ್ಶಕ್ಕೆ 
ನಾ ನಿನ್ನ ಸ್ಪರ್ಶಿಸಿದ ಮೊದಲ ಕ್ಷಣ ಹೆದರಿದ್ದೆ ನಿನ್ನ ಪ್ರೀತಿಗೆ 
ಆದರೀಗ ನಾ ನಿನ್ನ ಪ್ರೀತಿಸುತ್ತಿದರೂ ಬಳಲುತಿರುವೆ ನಾ 
ನಿನ್ನ ಕಳೆದುಕೊಳ್ಳುವೆನೋ ಏನೋ ಎಂಬ ಹೆದರಿಕೆಯಿಂದ 

ಪುಸ್ತಕಗಳು ಬುದ್ಧಿ ಎಂಬ ನಿಧಿಗೆ ಬೀಗದ ಕೈಯಂತೆ 
ಪುಸ್ತಕಗಳು ಸಂತೋಷವೆಂಬ ಭೂಮಿಗೆ ಬಾಗಿಲುಗಳಂತೆ 
ಪುಸ್ತಕಗಳು ಮೇಲ್ಮುಖವಾಗಿ ಬೆಳೆಯಲು ದಾರಿಯಿದ್ದಂತೆ 
ಪುಸ್ತಕಗಳು ಸ್ನೇಹಿತರಿದ್ದಂತೆ ಬನ್ನಿ ಅವುಗಳನು ಓದಿ ಬೆರೆಯೋಣ 
ನಾವು ಓದುತ್ತಾ ಪರರರಿಗೂ ಓದುವಂತೆ ಮಾಡೋಣ 
ಜ್ಞಾನದ ನಿಧಿಯ ಹಂಚಿಕೊಂಡು ಎಲ್ಲರೂ ಸಹಬಾಳ್ವೆಯ ನಡೆಸೋಣ

Friday 24 June 2016

ನೀ ಓದಿದ ಅಂಶವ ನೀನೇ ಪ್ರತಿಬಿಂಬಿಸದಿದ್ದರೆ 
ನೀ ತಿಂದ ಆಹಾರವ ನೀನೇ ಜೀರ್ಣಿಸಿಕೊಳ್ಳದಂತೆ 

ಕೇಳುತಿದೆ ನನಗೊಂದು ಕವಿವಾಣಿ 
ಆದ ಹೇಳುತಿದೆ ನನಗೊಬ್ಬ ಸಿಗುವನು ಸಂಗೀತ ಪ್ರೇಮಿ 
ಆತನ ಕವಿತೆಗೆ ನಾನಾಗಬೇಕಂತೆ ಹಿನ್ನಲೆ ದನಿ 
ಕವಿತೆ ಬರೆಯುವ ಕೈಗಳಿಗೆ ಗಾಯನದ ಯೋಗ ಸಿಕ್ಕರೆ 
ಆ ತಾಯಿ ಶಾರದೆ ಹರಸುವಳೇ ಈ ದನಿಯ 
ಆಶೀರ್ವಾದ ನೀಡದೆ ಬಿಡೆನು ನಾನು ಆ ವಾಣಿಯ 

Thursday 23 June 2016

ಜೀವನವೊಂದು ಪುಸ್ತಕದಂತೆ 
ಕೆಲವು ಅಧ್ಯಾಯ ದುಃಖದಿಂದಿದ್ದರೆ 
ಕೆಲವು ಅಧ್ಯಾಯ ಸಂತಸದಿಂದಿರುತ್ತವೆ 
ಸುಮಾರು ಉತ್ತೇಜಕವಾಗಿರುತ್ತವೆ 
ಆದರೆ ನೀನು ಪುಟಗಳನ್ನೇ ತಿರುವದಿದ್ದರೆ 
ನಿನಗೆಂದು ತಿಳಿಯದು ಮುಂದೇನಿದೆಯೆಂದು 
ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ 
ಪ್ರತೀ ಪುಟವೂ ನಿನ್ನದೇ ಎಂದು ನಡೆಸು ಜೀವನ 
ಆಗ ನಿನ್ನ ಹುಟ್ಟಾಗುವುದು ಪಾವನ 

Wednesday 22 June 2016

ಬಯಸುತಿದೆ ನನ್ನ ಮನವು ನನ್ನ ನಾ ಹುಡುಕಲು 
ನಿನ್ನ ವಿಶಾಲ ಹೃದಯದಲ್ಲಿ 
ಅದು ಭಾವನೆಗಳಿಂದ ಕೂಡಿದ ಕವಿತೆಯೋ 
ನಕ್ಷತ್ರಗಳಿಂದ ತುಂಬಿದ ಆಕಾಶವೋ 
ಅಥವಾ ನಿನ್ನ ಪ್ರೇಮಕಥೆಯನ್ನು ಪೂರ್ಣಗೊಳಿಸಲು 
ಹರಿದು ಬರುವ ಕೇವಲ ನನ್ನ ಒಲವೋ ನಾ ಅರಿಯೆ 
ನಿನ್ನಲ್ಲಿ ನಾ ಯಾವುದೇ ರೂಪದಲ್ಲಿದ್ದರೂ ಸರಿಯೇ 
ಇರದು ನನಗೆ ಯಾವುದೇ ವಿರಹದ ಬೇಸರ 
ಸದಾ ತುಂಬಿದೆ ನನ್ನ ಮನದಲ್ಲಿ ನಿನ್ನ ಸನಿಹವೆಂಬ ಕಾತರ 

Tuesday 21 June 2016

ನನ್ನ ಭಾವನೆಗಳ ಬತ್ತಳಿಕೆಯು  ಬರಿದಾಗುತ್ತಿದೆ 
ಅದಕೇ ಏನೋ ಕವನಗಳ ಕೆತ್ತನೆಯೂ ಕುಂದುತ್ತಿದೆ 
ಏನು ಮಾಡುವುದೋ ಕಾಣೆನು 
ಕವನ ಬರೆಯದೇ ನಾ ಬಾಳೆನು 
ದೂರ ಓಡದಿರು ಓ ನನ್ನ ಕವನ 
ನೀ ಇಲ್ಲವಾದರೆ ಸಾಗದು ನನ್ನ ಜೀವನ 

Friday 17 June 2016


ಸಮಸ್ಯೆ ಎನ್ನುವುದು ನಿರೀಕ್ಷೆ ಮತ್ತು ವಾಸ್ತವಗಳ ನಡುವಿನ ಅಂತರ 
ಅದಕೇ ಕಡಿಮೆ ನಿರೀಕ್ಷಿಸಿ ವಾಸ್ತವವನ್ನು ಸ್ವೀಕರಿಸು 
ಅಥವಾ ಅತೀ ನಿರೀಕ್ಷೆಯನ್ನು ಕೆಚ್ಛೆದೆಯಿಂದ ವಾಸ್ತವವನ್ನಾಗಿ ಪರಿವರ್ತಿಸು 

Wednesday 15 June 2016

ಭಾವನೆಗಳನು ಕವನದಲ್ಲಿ ಬಂಧಿಸುವ 
ಕಲೆ ಮಾತ್ರ ಇರುವಳು ನಾನು 
ನಿನ್ನ ಭಾವನೆಗಳ ಜೊತೆಗೆ ನನ್ನ ಮನಸನ್ನು 
ಕೆತ್ತುವ ಮಹಾ ಚಿತ್ರಕಾರ ನೀನು 

Saturday 4 June 2016

ಓದಿನ ಹಸಿವನ್ನು ತಣಿಸಲು ಇಲ್ಲಿದೆ ಒಂದು ಉಪಹಾರ ಭವನ 
ಅದೇ ಕನ್ನಡ ಕಾದಂಬರಿ ಕೂಟವೆಂಬ ಜ್ಞಾನದ ಭವನ 
ಸಿಗುತ್ತೆ ಇಲ್ಲಿ ಹತ್ತಾರು ಬರಹಗಾರರ ನೂರಾರು ಪುಸ್ತಕಗಳು 
ಬೇಕಾದನ್ನು ಆರಿಸಿ ಮೆದುಳು ಮನಸನ್ನು ತುಂಬಿಸಿ ಆನಂದಿಸಿ 
ಕರಗುವುದಿಲ್ಲ ಇಲ್ಲಿ ತಿಂದ ಆಹಾರ 
ಜೊತೆಗೆ ಮುಗಿಯುವುದೂ ಇಲ್ಲ ಓದಿನ ದಾಹ 
ಓದುತ್ತಲೇ ಇರುವೆವು ನಾವು ಈ ವೇದಿಕೆಯಲ್ಲಿ 
ಅದಕ್ಕೆಂದೇ ಬೀಗುತಿಹುದು ಈ ಭವನ ಸಾರ್ಥಕತೆಯಲ್ಲಿ 

Friday 3 June 2016

ಮನಸಿನಾಳದ ನೋವಿಗಿಂತ ಬದುಕಿನಾಳದ ನಂಬಿಕೆ ಮುಖ್ಯ 
ನೋವನ್ನು ಹಿಮ್ಮೆಟ್ಟಿ ಛಲದಿಂದ ಬದುಕಿದರೆ ನಾಚುವುದು ಆ ಸ್ವರ್ಗ 
ಸದಾ ನಗು ನಗುತಾ ಇರುವುದು ನಿನ್ನ ನೋಡಿ ಬಾಳಿನ ನಿಸರ್ಗ