Thursday, 28 March 2013

ಹಾರಾಡುವ ಹಕ್ಕಿಯಂತೆ ನಾನಿದ್ದೆ 
ಬೆಳ್ಳಿ ಮೋಡದಂತೆ ತೇಲುತಿದ್ದೆ 
ಪ್ರೀತಿ ಪ್ರೇಮದ ಬಂಧನಕ್ಕೆ ಸಿಲುಕದೆ 
ಸ್ವಚ್ಚಂದವಾಗಿ ಸಂಚರಿಸುತ್ತಿದ್ದೆ 
ಏನು ಮೋಡಿ ಮಾಡಿದೆಯೋ ನೀನು 
ನಿನ್ನ ಒಲವಿನ ಬಲೆಯಲ್ಲಿ ಬಂಧಿಯಾದೆ ನಾನು 
ನನ್ನ ಜೀವ ಮತ್ತು  ಜೀವನದ  ಪ್ರತಿಕ್ಷಣಕ್ಕೂ 
ಉಸಿರಾಗುತ್ತಾ ಮೈಮನಗಳ ಆವರಿಸಿದೆ ನೀನು 

 

ನಿನ್ನ ನಗು


ನೀ ನಕ್ಕಾಗ ಆ ಸುಂದರ ಮೊಗವ 
ನೋಡಲು ಸಾಲದೆನಗೆ ಎರಡು ಕಂಗಳು  
ನೀ ಸುಳಿದಾಗ ಆ ಚಂದದ ಪುಳಕವ 
ವರ್ಣಿಸಲು ಅಸಾಧ್ಯ ನನಗೆ 

ನೀ ಸ್ಪರ್ಶಿಸಿದರೆ ನನ್ನ ಆಗುವುದು 
ರೋಮಾಂಚನ ನನ್ನ ಮೈ ಮನ   
ನಿನ್ನ ಅಂದದ ಮೊಗದ ಚಂದದ ನಗುವಿಗೆ 
ಸೋತುಹೋಗಿದೆ ನನ್ನ ಮನ 

ನೀ ನನ್ನ ಬಳಿಯಿದ್ದರೆ 
ಹಗಲಲಿ ಶಶಿಯ ಬೆಳದಿಂಗಳ ಕಾಣುವೆ 
ಇರುಳಲಿ ರವಿಯ ಬೆಳಕ ಕಾಣುವೆ 
ಪ್ರತಿಕ್ಷಣವೂ ಮಂದಹಾಸ ಬೀರುವೆ 

Wednesday, 27 March 2013

ನೆನಪಿನಿಂದ ಮುಕ್ತಿ


ಮರೆಯಬೇಕೆಂದಿರುವೆ ನಿನ್ನ ನೆನಪನು 
ಬೇಡವೆಂದರೂ  ಹರಿದು ಬರುತಿದೆ ಆ  ನೆನಪಿನ ಅಲೆಗಳು 

ನಾ ಅಂದು ತಿಳಿದಿದ್ದೆ ನೀನು ಸವಿನೆನಪಿನ ಕಡಲೆಂದು 
ಆದರೆ ಇಂದು ಗೊತ್ತಯಿತು ನೀನು ಕಹಿನೆನಪಿನ ಸುಳಿಯೆಂದು 

ಸುಳಿಯಲಿ ಸಿಕ್ಕಿ ಒದ್ದಾಡಿ ಸಾಕಾಗಿದೆ ನನಗೆ 
ಖುಷಿಯ ಕಡಲಲ್ಲಿ ಈಜಬೇಕೆಂದು ಅನಿಸುವುದಿಲ್ಲವೇ ನಿನಗೆ 

ದಿನದಿಂದ ದಿನಕ್ಕೆ ಕೊರಗುತ್ತಲೇ ಕರಗುತಿದೆ  ನನ್ನ ಶಕ್ತಿ 
ಬೇಕೆನಗೆ ನಿನ್ನ ನೆನಪೆಂಬ ಹಿಂಸೆಯಿಂದ ಮುಕ್ತಿ 

Tuesday, 26 March 2013

ನನಗಾಗಿ ನಾ ಏನು ಬೇಡೆನು 
ನಿನಗೆ ಓ ದೇವರೇ 
ಸಾಕಾಗಿ ಹೋಗಿದೆ ನೀ 
ಕೊಡುತಿರೋ ಉಡುಗೊರೆ 
ಬೇಗನೆ ತೆರೆದು ಬಿಡು ಈ 
ಜೀವನವೆಂಬ ನಾಟಕದ ತೆರೆ 
ಕೊಟ್ಟುಬಿಡು ನನಗೆ ನಿನ್ನ 
ಪ್ರೀತಿಯೆಂಬ ಸೆರೆ

Saturday, 23 March 2013

ನನ್ನ ನಿನ್ನ ನಡುವಿನ ಅಂತರ


ಕೈ ಹಿಡಿದು ನಡೆಸಿದೆ ನಿನ್ನ ಜೊತೆಯಲಿ 
ನಗುವೆಂಬ ಹೂವ ನೀ ಇಟ್ಟೆ ನನ್ನ ಮುಡಿಯಲಿ 
ಕಮರಿದ ಮೊಗಕೆ  ಬಂದಿತು ಅಂದ 
ನೀ  ನನಗೆ ಮುಡಿಸಿದ ಆ ಹೂವಿಂದ 
   
ಭೂಮಿಯ ನೀರು ಅವಿಯಾದಾಗಲೇ 
ಬಾನಲಿ ಆಗುವುದು ಮೋಡ 
ಬಾನಲಿರುವ ಮೋಡ ಕರಗಿದರೆ 
ಸುರಿಯುವುದು ಮಳೆ ಧರೆಗೆ 

ಬಾನು ಭೂಮಿಯ ಬಂಧ ಬಿಡಿಸಲಾಗದ ಸವಿಬಂಧ 
ಲೆಕ್ಕವಿಲ್ಲ ಅವುಗಳಿಗೆ ಮದ್ಯದಲ್ಲಿರುವ ಅಂತರ 
ಹಾಗೆ ನಾನು ನೀನು ಬೇರೆಯಾಗಿ ಬದುಕಿದರೂ 
ಮನಸೆರಡೂ ಬೆರೆತು ಬಾಳುತಿವೆ ಹತ್ತಿರ 

ಕಣ್ಣೀರ ಕೋಡಿಯಲಿ ಕೊಚ್ಚಿ ಹೋಗುತಿದ್ದೆ ನಾನು 
ಪ್ರೀತಿಯ ಪನ್ನೀರಲಿ ತೇಲುವಂತೆ ಮಾಡಿದೆ ನೀನು 
ಹೇಗೆ ಕೊಂಡಾಡಲಿ ನಿನ್ನ ಉಪಕಾರವ 
ಏನೆಂದು ಬಣ್ಣಿಸಲಿ ನೀ ಸುರಿಸಿದ ಒಲವ  


Friday, 22 March 2013

ಚಂಚಲತೆ


ಏನಾಗಿದೆಯೋ ಈ ಮನಸಿಗೆ ನಾ ಅರಿಯೆ 
ಆಗದಿರುವುದನ್ನೇ ಸದಾ ಪರಿತಪಿಸುತಿದೆ 

ಇರುವ ಭಾಗ್ಯವ ಒಪ್ಪದೇ ಬರದಿರುವ 
ಅದೃಷ್ಟವ ನೆನೆದರೆ ಸಿಗುವುದೇ ನೆಮ್ಮದಿ 
ಕಟ್ಟಲಾಗುವುದೇ  ಈ ಬದುಕಿಗೆ ಬುನಾದಿ 

ಓ ಹುಚ್ಹು ಮನವೇ ಓಡಬೇಡ ಯಾರ ಹಿಂದೆ 
ಬರುವುದನ್ನು ಸ್ವೀಕರಿಸು ನಿನ್ನ ಮುಂದೆ 

ಇದ್ದರೆ ನಿನಗೆ ನಿನ್ನ ಮೇಲೆ ಹಿಡಿತ 
ಹಾಕಲಾಗದು ಯಾರಿಗೂ ನಿನ್ನ ಮೇಲೆ ತುಡಿತ 

ಜೀವನದ ಅರ್ಥ ಅರಿತರೆ ಬಾಳುವೆ ನೀ ಹಾಯಾಗಿ 
ಚಂಚಲವಾದರೆ ಹೋಗುವೆ ನೀ ಹಾಳಾಗಿ 

ನೋವು

ಪ್ರತಿ ಕ್ಷಣ ನೋವಲ್ಲೇ ಬೇಯುತಿರುವೆ 
ಏನು ತಪ್ಪು ಮಾಡಿರುವೆನೋ ಗೊತ್ತಿಲ್ಲ 

ಆದರೂ ಕಾಡುತಿದೆ  ಚಿಂತೆ ಒಂದು 
ನಾ ಮಾಡಿದ ಪಾಪವಾದರೂ ಏನೆಂದು 

ತಾಳಲಾಗುತ್ತಿಲ್ಲ ನನಗೆ ಈ ನೋವು 
ಬೇಗನೆ ಬರಬಾರದೇ ನನಗೆ ಆ ಸಾವು 

ಎಷ್ಟು ಯೋಚಿಸಿದರೂ ಸಿಗುತ್ತಿಲ್ಲ ನನಗೆ ಉತ್ತರ 
ಅದಕೆಂದೇ ಬಯಸುತ್ತಿರುವೆ ನನ್ನ ಸಾವು ಬರಲಿ ಹತ್ತಿರ 

ಹರಿಯುವ ಪ್ರೀತಿ


ಹರಿಯುವ ನದಿಯಂತೆ ಸದಾ 
ಹರಿಯುತಿದೆ ನಿನ್ನ ಪ್ರೀತಿ 
ನಿಂತ ನೀರಂತೆ ನಿನ್ನಲ್ಲೇ ಇದ್ದರೆ 
ನನಗಿಲ್ಲ ಯಾವುದೇ ಭೀತಿ 

ಬಾಳೆಂಬ ಈ ಬಂಧನದಲ್ಲಿ ನೀನೆ ನನ್ನ ಜಗತ್ತು 
ನಿನ್ನ ಬಿಟ್ಟು ಬೇರಾರು  ಇಲ್ಲ ನನ್ನ ತಾಕತ್ತು 

ನೀ  ನುಡಿವ ಮಾತೆಲ್ಲವ ಮುತ್ತುಗಳಿಂದ ಪೋಣಿಸಿ 
ಮಧುರ ಸಂಗೀತವಾಗಿ  ಪರಿವರ್ತಿಸುವ ಆಸೆ ಎನಗೆ 

ನಿನ್ನ ಪ್ರೀತಿಯ ಉಯ್ಯಾಲೆಯಲಿ ಸದಾ ಜೀಕುತಾ 
ನನ್ನ ಜೀವನದ ಪ್ರತಿಕ್ಷಣ ನಿನ್ನೊಡನೆ ಬೆರೆತರೆ ಸಾಕೆನಗೆ  

ಇದ್ದರೂ ಬಿದ್ದರೂ ಸೋತರೂ ಗೆದ್ದರೂ 
ಏನಾದರೂ ಬಿಡಲಾರೆನು ನಾ ನಿನ್ನ 
ತೆರೆದು ನಿನ್ನ ಹೃದಯ ಕದವ ಶಾಶ್ವತವಾಗಿ 
ಬಂಧಿಸಿಬಿಡು ಓ  ನನ್ನ ಚಿನ್ನ 

Thursday, 21 March 2013

ನೆನಪಿನ ಮೋಡಗಳು

ಚದುರಿದ ಮೋಡಗಳಂತೆ ಆಗಿವೆ 
ನನ್ನ ಮನಸಲಿ ನೆಲೆಸಿದ ನಿನ್ನ ನೆನಪುಗಳು 

ಏಕೆ ಹೀಗೆ ಮಾಡಿದೆ ನೀ ನನಗೆ 
ನೀ ಅಗಲಿದ ಕ್ಷಣವೇ ಛಿದ್ರಗೊಂಡಿದೆ ನನ್ನೀ ಹೃದಯ 

ನಾ ನಿನಗೆ ಕುಡಿಸಿದ ಒಲವಾಮೃತಕೆ 
ನೀ ಕೊಟ್ಟ ವಿರಹ ಸುಖವೇ ಉಡುಗೊರೆಯೇ 

ಅಳಲಾರದೆ ನಗಲಾರದೆ ಮೌನವಾಗಿರುವೆ ನಾ ಇಂದು 
ಮನಸಾರೆ ನಂಬಿ ನಿನ್ನ ಪ್ರೀತಿಸಿದ್ದಕ್ಕೆ ನಾ ಅಂದು 

ಮರಳಿ ಬೇಕೆನಗೆ ನಿನ್ನ ಸವಿನೆನಪುಗಳಿಂದ 
ಒಂದಾದ ಬೆಳ್ಳಿಮೋಡಗಳು 

ಬೇಗನೆ ಮಳೆ ಸುರಿದು ಕರಗಲಿ ಕಹಿನೆನಪುಗಳಿಂದ 
ಕೂಡಿದ ಕಾರ್ಮೋಡಗಳು

ಬಂದೇ ಬಿಟ್ಟಿತು ನಿನ್ನ ಹುಟ್ಟಿದ ದಿನ
ಆಗಲಿ ನಿನಗಿದು ಶುಭದಿನ
ಹಾರೈಸುವೆ ಸದಾ ನಿನ್ನ ಮೊಗದಲ್ಲಿ ತುಂಬಿರಲಿ ಹೂನಗೆ
ತೋಚುತ್ತಿಲ್ಲ ಏನು ಉಡುಗೊರೆ ಕೊಡಲಿ ನಾ ನಿನಗೆ
ಉಡುಗೊರೆಯಾಗಿ ಕಳಿಸಿರುವೆ ಈ ಕವನವ
ಖುಷಿಯಿಂದ ಆಚರಿಸು ನಿನ್ನ ಜನ್ಮ ದಿನವ

Monday, 18 March 2013

ಒಲವಿನ ಭಾವ


ನಿನ್ನೊಲವ ಬಯಸಿ ನಾ ಬಂದೆ ನಿನ್ನ ಹಿಂದೆ 
ಇದನರಿತು ನೀ ಬಂದು  ನಿಂತೇ ನನ್ನ ಮುಂದೆ 

ನಿನ್ನ ನೋಡಿದ ಖುಷಿಯಲ್ಲಿ  ತಡೆಯದೆ 
ಬಂತು  ಕಣ್ಣೀರ ಬಿಂದು ಒಂದು 
ಅದನು ಜಾರದೆ ಕೈಯಲ್ಲೇ ಹಿಡಿದೇ ನೀ ಅಂದು 
ಏನು ಪ್ರೀತಿಯೋ ಕಾಳಜಿಯೋ  ನಿನ್ನದು 

ನಿನ್ನ ಈ ಪ್ರೇಮದ ಕಾರಂಜಿಯಲಿ 
ದಿನವೂ ನೆನೆಯುವಾಸೆ ನನಗೆ 
ನಿನ್ನ ಈ ಒಲವಿನ ಬಂಧನದಿಂದ 
ಎಂದಿಗೂ ಬಿಡುಗಡೆ ಬೇಡೆನಗೆ 

ಅಂದು ಬಂದ ಕಣ್ಣೀರ  ಬಿಂದುವ ನೀ ಹಿಡಿದು 
ಆನಂದ ಭಾಷ್ಪವ ಹರಿಸುವಂತೆ ಮಾಡಿದೆ 
ಈ ಜಗದಲ್ಲಿ ಬೇರೇನೂ ಬಯಸೆನು ನಾನು 
ನಿನ್ನ ಒಲವಿನ ಬಾಹುಬಂಧನವೇ ಸಾಕಿನ್ನು  

Thursday, 14 March 2013


ಹಕ್ಕಿಯಂತೆ ಹಾರಾಡುವುದು ಈ  ಮನಸು 
ಪ್ರತಿಕ್ಷಣವೂ ಕಾಣುವುದು  ಸುಂದರ ಕನಸು 
ಅದು ಮಾಡಿಕೊಳ್ಳುವುದಿಲ್ಲ ಯಾರಮೇಲೂ ಮುನಿಸು 
ಈ ಮನಸು ಯಾವಾಗಲೂ ಹೇಳುವುದು ಎಲ್ಲರನ್ನು ನಗಿಸು 

Wednesday, 13 March 2013

ಅಮ್ಮ


ನಗುವ ಕಂದನ ನೋಡಿ ಮರೆವಳು 
ತನ್ನ ನೋವ ಆ ತಾಯಿ 
ತನ್ನ ಮಡಿಲು  ತುಂಬಿದ  ಆ ಮಗುವ 
ಒಡನಾಟವೇ ಆ ತಾಯಿಗೆ ಉಸಿರು 
ಅತ್ತರೂ ನಕ್ಕರೂ ಬಿದ್ದರೂ ಎದ್ದರೂ 
ಕಂದನ ಬಾಯಿಂದ ಬರುವುದು 
ಕೇವಲ ಅಮ್ಮ ಅಮ್ಮ ಅಮ್ಮ 
ಏನು ಬಂಧವೋ ಏನು ಮಮತೆಯೋ 
ಅಮ್ಮ ನಿನ್ನದು ದೇವರಿಗಿಂತ ದೊಡ್ಡ 
ದೇವತೆಯು ನೀನು ನಿನಗಾರು ಸಾಟಿ 
ಓ ಅಮ್ಮ ನಿನ್ನ ಮಮತೆಯ ಮಡಿಲಲ್ಲಿ 
ಸದಾ ಸುಖಿಯಾಗಿರುವುದು ನಿನ್ನ ಕಂದ 

ಸ್ನೇಹದ ಬಂಧನ


ಏನೆಂದು ಬರೆಯಲಿ ನಿನಗಾಗಿ 
ಬರೆದು ಬರೆದು ಪದಗಳೇ ಸವೆದವು 
ಆದರೆ ಹೋಲಿಕೆಯಾಗುತ್ತಿಲ್ಲ  ನಿನ್ನ 
ಸ್ನೇಹಕ್ಕೆ ಯಾವುದೇ ಪದವೂ 

ಪದಗಳ ಹುಡುಕಾಟವೇ ಸಾಗಿದೆ 
ಶಬ್ಧ ಭಂಡಾರದಲ್ಲೇ ಮುಳುಗಿದೆ 
ಏನು ಮಾಡಲಿ ಹೇಗೆ ಹೇಳಲಿ ನಿನ್ನ 
ಸ್ನೇಹದ ಪರಿಯ ಏನೆಂದು ಬರೆಯಲಿ 

ಅಮೃತದಷ್ಟು ಅಮೂಲ್ಯವೆನ್ನಲೇ  
ಪರ್ವತದಷ್ಟು ಎತ್ತರ ಎನ್ನಲೇ 
ಆಕಾಶದ ನಕ್ಷತ್ರಕ್ಕಿಂತ ಹೊಳಪೆನ್ನಲೇ 
ಏನೆಂದು ಹೇಳಲಿ ನಿನ್ನ ಸ್ನೇಹಕೆ 

ತಂದೆ ತಾಯಿಯ ಪ್ರೀತಿಯ 
ಸೋದರತೆಯ ಅನುಬಂಧವ 
ನಲ್ಲ ನಲ್ಲೆಯ ಪ್ರೇಮವ ಮರೆಸುವ 
ಈ ಪವಿತ್ರ  ಸ್ನೇಹವ  ಏನೆಂದು ವರ್ಣಿಸಲಿ  

Tuesday, 12 March 2013

ನಿನ್ನ ನೆನಪುಹೀಗೇಕೆ ಮೌನವಾಗಿರುವೆ ಗೆಳೆಯ ಮಾತಿಲ್ಲದೆ 
ಈ ಗೆಳತಿಯ ನೆನಪಿಲ್ಲವೇ

ನಿನ್ನೊಲುಮೆಯ ಕರೆಯ ಕೇಳದೆ 
ನಿನ್ನೊಡನೆ ಮಾತಾಡದೆ ನನ್ನ ಧ್ವನಿ ನನಗೆ ಮರೆತಂತಿದೆ 

ನೀ ಪಿಸುಗುಟ್ಟಿದ ಪ್ರತೀ ಸವಿಮಾತು 
ಸ್ವಾತಿಮುತ್ತಂತೆ ನನ್ನ ಸುತ್ತಲೇ ಸುತ್ತುತ್ತಿದೆ 

ಬೇಡವೆಂದರೂ ಬರುತಿದೆ ನಿನ್ನ ನೆನಪು 
ಬಂದು ಕಾಡುತಿದೆ ಪ್ರತಿಕ್ಷಣವೂ 

ತುಂತುರು ಮಳೆಯಂತೆ ಸವಿಯಬೇಕೆಂದಿರುವೆ 
ನಿನ್ನ ಆ ಚಂದ ನೆನಪುಗಳನು 

ಧಾರಾಕಾರ ಮಳೆಯಲಿ ಕೊಚ್ಚಿಹೋಗುವ ಹಾಗೆ 
ಮಾಡದಿರು ನನ್ನ ಭಾವನೆಯನು 

ಈ ಮೌನವ ತಡೆಯಲು ನನಗಿಲ್ಲ ಶಕ್ತಿ 
ಹೇಗಾದರೂ ಕೊಟ್ಟುಬಿಡು ಈ ವಿರಹದಿಂದ ಮುಕ್ತಿ 


Monday, 4 March 2013

ಏನಿದು ಮಾಯೆ ನಾ ಅರಿಯೇ


ಅವಳಿಲ್ಲದಿದ್ದರೆ ಇವನಿಲ್ಲ  ಇವನಿಲ್ಲದಿದ್ದರೆ ಅವಳಿಲ್ಲ 
ಎನ್ನುತಿರುವರು ಆ ಪ್ರೇಮಿಗಳು 
ಎಲ್ಲ ಇದ್ದರೂ ಏನು ಇಲ್ಲದವರಂತೆ 
ಬಾಳುವರು ಪ್ರೀತಿಯಲ್ಲಿ ಸಿಲುಕಿದ ಪ್ರೇಮಿಗಳು 

ಪ್ರೀತಿ ಕುರುಡೆಂದು ಹೇಳುವರು ದೊಡ್ಡವರು 
ಪ್ರೀತಿಯೇ ದೈವ ಎಂದು ನಂಬುವರು ಈ ಪ್ರೇಮಿಗಳು 

ಒಲವ ಮಳೆಯಲಿ ನೆನೆಯುವ ಮನಸುಗಳಿಗೆ 
ಪ್ರೀತಿಯೇ ಎಲ್ಲ ಹೆತ್ತವರ  ಚಿಂತೆ ಅವರಿಗಿಲ್ಲ 
ಪ್ರೀತಿಗಿಂತ ಜಾತಿ ಕುಲವೇ ದೊಡ್ಡದು ಎನ್ನುವ 
ದೊಡ್ಡವರ ಮನಸುಗಳಿಗೆ ಅವರ ಪ್ರತಿಷ್ಥೆಯೇ 
ಎಲ್ಲ ಮಕ್ಕಳ ಭಾವನೆಯ ಅರಿವು ಅವರಿಗಿಲ್ಲ 

ಪ್ರೀತಿಯು ಮನಗಳ ಬೆಸೆಯುವ ಸವಿಬಂಧವಾಗಬೇಕೇ 
ಹೊರತು ಮನುಷ್ಯರ ಜೀವ ತೆಗೆಯುವ ಆಯುಧವಲ್ಲ 

ಪ್ರೀತಿಯನ್ನು ಪ್ರೀತಿಸುವ ಪ್ರೇಮಿಗಳೇ ಪ್ರೀತಿಸಿ 
ನಿಮ್ಮ ಹೆತ್ತವರನ್ನು ತೊರೆಯದಿರಿ ಯಾರನ್ನು 
ಜಾತಿ ಕುಲವೆಂದು ಹೊಡೆದಾಡುವ ಹೆತ್ತವರೇ ಗೌರವಿಸಿ 
ಮಕ್ಕಳ ಭಾವನೆಯನ್ನು ಕೊಲ್ಲದಿರಿ ಅವರ ಪ್ರೀತಿಯನ್ನು Saturday, 2 March 2013

ದೂರಾಗದಿರು ಗೆಳೆಯ


ಕಾಣದ ಪ್ರೀತಿಯ ಹುಡುಕುತ್ತಾ 
ಕಣ್ಣೆದುರೇ ನಿನಗಾಗಿ ಕಾಯುತ್ತಿರುವ 
ಪ್ರೀತಿಯ ಕಳೆಯದಿರು 

ಮುಖ ನೋಡಿ ಹುಟ್ಟಿದ ಪ್ರೀತಿಗಾಗಿ 
ಹೃದಯದಲ್ಲಿ ನಿನಗಾಗಿ ಹುಟ್ಟಿದ 
ಪ್ರೀತಿಯ ಕೊಲ್ಲದಿರು 

ನನ್ನ ಭಾವನೆಗೆ  ಬಣ್ಣವಿಲ್ಲ ಪ್ರೀತಿಗೆ 
ಕಣ್ಣಿಲ್ಲ ಜೊತೆಗೆ ನಿನ್ನನ್ನೇ  ಪ್ರೀತಿಸುವ ನನ್ನ 
ಮನಸಿಗೆ ನಿನ್ನ ಸ್ಪಂದನವಿಲ್ಲ 

ನನ್ನ ಒಲವಿನ ಗೆಳಯನೇ ಏನೆಂದು ಹೇಳಲಿ 
ನಿನ್ನ ಪ್ರೀತಿಯ ಕನಸನ್ನೇ ಕಾಣುವ ನನಗೆ 
ಬೇರೇನೂ ಬೇಕಿಲ್ಲ ನಿನ್ನ ಪ್ರೇಮದ ವಿನಹ 

ನೀ ಓಡುತ್ತಿರುವೆ ನನ್ನಿಂದ ದೂರ 
ತಾಳಲಾಗುತ್ತಿಲ್ಲ ನನ್ನ ಮನಸಿನ ಭಾರ 
ನನ್ನ ಸನಿಹ ಬೇಗನೇ ನೀ ಬಾರ