ಮರೆಯಬೇಕೆಂದಿರುವೆ ನಿನ್ನ ನೆನಪನು
ಬೇಡವೆಂದರೂ ಹರಿದು ಬರುತಿದೆ ಆ ನೆನಪಿನ ಅಲೆಗಳು
ನಾ ಅಂದು ತಿಳಿದಿದ್ದೆ ನೀನು ಸವಿನೆನಪಿನ ಕಡಲೆಂದು
ಆದರೆ ಇಂದು ಗೊತ್ತಯಿತು ನೀನು ಕಹಿನೆನಪಿನ ಸುಳಿಯೆಂದು
ಸುಳಿಯಲಿ ಸಿಕ್ಕಿ ಒದ್ದಾಡಿ ಸಾಕಾಗಿದೆ ನನಗೆ
ಖುಷಿಯ ಕಡಲಲ್ಲಿ ಈಜಬೇಕೆಂದು ಅನಿಸುವುದಿಲ್ಲವೇ ನಿನಗೆ
ದಿನದಿಂದ ದಿನಕ್ಕೆ ಕೊರಗುತ್ತಲೇ ಕರಗುತಿದೆ ನನ್ನ ಶಕ್ತಿ
ಬೇಕೆನಗೆ ನಿನ್ನ ನೆನಪೆಂಬ ಹಿಂಸೆಯಿಂದ ಮುಕ್ತಿ
No comments:
Post a Comment