ನಿನ್ನೊಲವ ಬಯಸಿ ನಾ ಬಂದೆ ನಿನ್ನ ಹಿಂದೆ
ಇದನರಿತು ನೀ ಬಂದು ನಿಂತೇ ನನ್ನ ಮುಂದೆ
ನಿನ್ನ ನೋಡಿದ ಖುಷಿಯಲ್ಲಿ ತಡೆಯದೆ
ಬಂತು ಕಣ್ಣೀರ ಬಿಂದು ಒಂದು
ಅದನು ಜಾರದೆ ಕೈಯಲ್ಲೇ ಹಿಡಿದೇ ನೀ ಅಂದು
ಏನು ಪ್ರೀತಿಯೋ ಕಾಳಜಿಯೋ ನಿನ್ನದು
ನಿನ್ನ ಈ ಪ್ರೇಮದ ಕಾರಂಜಿಯಲಿ
ದಿನವೂ ನೆನೆಯುವಾಸೆ ನನಗೆ
ನಿನ್ನ ಈ ಒಲವಿನ ಬಂಧನದಿಂದ
ಎಂದಿಗೂ ಬಿಡುಗಡೆ ಬೇಡೆನಗೆ
ಅಂದು ಬಂದ ಕಣ್ಣೀರ ಬಿಂದುವ ನೀ ಹಿಡಿದು
ಆನಂದ ಭಾಷ್ಪವ ಹರಿಸುವಂತೆ ಮಾಡಿದೆ
ಈ ಜಗದಲ್ಲಿ ಬೇರೇನೂ ಬಯಸೆನು ನಾನು
ನಿನ್ನ ಒಲವಿನ ಬಾಹುಬಂಧನವೇ ಸಾಕಿನ್ನು
No comments:
Post a Comment