ಏನೆಂದು ಬರೆಯಲಿ ನಿನಗಾಗಿ
ಬರೆದು ಬರೆದು ಪದಗಳೇ ಸವೆದವು
ಆದರೆ ಹೋಲಿಕೆಯಾಗುತ್ತಿಲ್ಲ ನಿನ್ನ
ಸ್ನೇಹಕ್ಕೆ ಯಾವುದೇ ಪದವೂ
ಪದಗಳ ಹುಡುಕಾಟವೇ ಸಾಗಿದೆ
ಶಬ್ಧ ಭಂಡಾರದಲ್ಲೇ ಮುಳುಗಿದೆ
ಏನು ಮಾಡಲಿ ಹೇಗೆ ಹೇಳಲಿ ನಿನ್ನ
ಸ್ನೇಹದ ಪರಿಯ ಏನೆಂದು ಬರೆಯಲಿ
ಅಮೃತದಷ್ಟು ಅಮೂಲ್ಯವೆನ್ನಲೇ
ಪರ್ವತದಷ್ಟು ಎತ್ತರ ಎನ್ನಲೇ
ಆಕಾಶದ ನಕ್ಷತ್ರಕ್ಕಿಂತ ಹೊಳಪೆನ್ನಲೇ
ಏನೆಂದು ಹೇಳಲಿ ನಿನ್ನ ಸ್ನೇಹಕೆ
ತಂದೆ ತಾಯಿಯ ಪ್ರೀತಿಯ
ಸೋದರತೆಯ ಅನುಬಂಧವ
ನಲ್ಲ ನಲ್ಲೆಯ ಪ್ರೇಮವ ಮರೆಸುವ
ಈ ಪವಿತ್ರ ಸ್ನೇಹವ ಏನೆಂದು ವರ್ಣಿಸಲಿ
No comments:
Post a Comment