ಏನಾಗಿದೆಯೋ ಈ ಮನಸಿಗೆ ನಾ ಅರಿಯೆ
ಆಗದಿರುವುದನ್ನೇ ಸದಾ ಪರಿತಪಿಸುತಿದೆ
ಇರುವ ಭಾಗ್ಯವ ಒಪ್ಪದೇ ಬರದಿರುವ
ಅದೃಷ್ಟವ ನೆನೆದರೆ ಸಿಗುವುದೇ ನೆಮ್ಮದಿ
ಕಟ್ಟಲಾಗುವುದೇ ಈ ಬದುಕಿಗೆ ಬುನಾದಿ
ಓ ಹುಚ್ಹು ಮನವೇ ಓಡಬೇಡ ಯಾರ ಹಿಂದೆ
ಬರುವುದನ್ನು ಸ್ವೀಕರಿಸು ನಿನ್ನ ಮುಂದೆ
ಇದ್ದರೆ ನಿನಗೆ ನಿನ್ನ ಮೇಲೆ ಹಿಡಿತ
ಹಾಕಲಾಗದು ಯಾರಿಗೂ ನಿನ್ನ ಮೇಲೆ ತುಡಿತ
ಜೀವನದ ಅರ್ಥ ಅರಿತರೆ ಬಾಳುವೆ ನೀ ಹಾಯಾಗಿ
ಚಂಚಲವಾದರೆ ಹೋಗುವೆ ನೀ ಹಾಳಾಗಿ
No comments:
Post a Comment