ನೀ ನಕ್ಕಾಗ ಆ ಸುಂದರ ಮೊಗವ
ನೋಡಲು ಸಾಲದೆನಗೆ ಎರಡು ಕಂಗಳು
ನೀ ಸುಳಿದಾಗ ಆ ಚಂದದ ಪುಳಕವ
ವರ್ಣಿಸಲು ಅಸಾಧ್ಯ ನನಗೆ
ನೀ ಸ್ಪರ್ಶಿಸಿದರೆ ನನ್ನ ಆಗುವುದು
ರೋಮಾಂಚನ ನನ್ನ ಮೈ ಮನ
ನಿನ್ನ ಅಂದದ ಮೊಗದ ಚಂದದ ನಗುವಿಗೆ
ಸೋತುಹೋಗಿದೆ ನನ್ನ ಮನ
ನೀ ನನ್ನ ಬಳಿಯಿದ್ದರೆ
ಹಗಲಲಿ ಶಶಿಯ ಬೆಳದಿಂಗಳ ಕಾಣುವೆ
ಇರುಳಲಿ ರವಿಯ ಬೆಳಕ ಕಾಣುವೆ
ಪ್ರತಿಕ್ಷಣವೂ ಮಂದಹಾಸ ಬೀರುವೆ
No comments:
Post a Comment