ಕೈ ಹಿಡಿದು ನಡೆಸಿದೆ ನಿನ್ನ ಜೊತೆಯಲಿ
ನಗುವೆಂಬ ಹೂವ ನೀ ಇಟ್ಟೆ ನನ್ನ ಮುಡಿಯಲಿ
ಕಮರಿದ ಮೊಗಕೆ ಬಂದಿತು ಅಂದ
ನೀ ನನಗೆ ಮುಡಿಸಿದ ಆ ಹೂವಿಂದ
ಭೂಮಿಯ ನೀರು ಅವಿಯಾದಾಗಲೇ
ಬಾನಲಿ ಆಗುವುದು ಮೋಡ
ಬಾನಲಿರುವ ಮೋಡ ಕರಗಿದರೆ
ಸುರಿಯುವುದು ಮಳೆ ಧರೆಗೆ
ಬಾನು ಭೂಮಿಯ ಬಂಧ ಬಿಡಿಸಲಾಗದ ಸವಿಬಂಧ
ಲೆಕ್ಕವಿಲ್ಲ ಅವುಗಳಿಗೆ ಮದ್ಯದಲ್ಲಿರುವ ಅಂತರ
ಹಾಗೆ ನಾನು ನೀನು ಬೇರೆಯಾಗಿ ಬದುಕಿದರೂ
ಮನಸೆರಡೂ ಬೆರೆತು ಬಾಳುತಿವೆ ಹತ್ತಿರ
ಕಣ್ಣೀರ ಕೋಡಿಯಲಿ ಕೊಚ್ಚಿ ಹೋಗುತಿದ್ದೆ ನಾನು
ಪ್ರೀತಿಯ ಪನ್ನೀರಲಿ ತೇಲುವಂತೆ ಮಾಡಿದೆ ನೀನು
ಹೇಗೆ ಕೊಂಡಾಡಲಿ ನಿನ್ನ ಉಪಕಾರವ
ಏನೆಂದು ಬಣ್ಣಿಸಲಿ ನೀ ಸುರಿಸಿದ ಒಲವ
1 comment:
ಅಮಿತ ಒಲವಿನ ಅಪ್ರಣಾ ಭಾವದ ಕವನ. ನೆಚ್ಚಿಗೆಯಾಯಿತು.
http://badari-poems.blogspot.in
Post a Comment