ಕಾಣದ ಪ್ರೀತಿಯ ಹುಡುಕುತ್ತಾ
ಕಣ್ಣೆದುರೇ ನಿನಗಾಗಿ ಕಾಯುತ್ತಿರುವ
ಪ್ರೀತಿಯ ಕಳೆಯದಿರು
ಮುಖ ನೋಡಿ ಹುಟ್ಟಿದ ಪ್ರೀತಿಗಾಗಿ
ಹೃದಯದಲ್ಲಿ ನಿನಗಾಗಿ ಹುಟ್ಟಿದ
ಪ್ರೀತಿಯ ಕೊಲ್ಲದಿರು
ನನ್ನ ಭಾವನೆಗೆ ಬಣ್ಣವಿಲ್ಲ ಪ್ರೀತಿಗೆ
ಕಣ್ಣಿಲ್ಲ ಜೊತೆಗೆ ನಿನ್ನನ್ನೇ ಪ್ರೀತಿಸುವ ನನ್ನ
ಮನಸಿಗೆ ನಿನ್ನ ಸ್ಪಂದನವಿಲ್ಲ
ನನ್ನ ಒಲವಿನ ಗೆಳಯನೇ ಏನೆಂದು ಹೇಳಲಿ
ನಿನ್ನ ಪ್ರೀತಿಯ ಕನಸನ್ನೇ ಕಾಣುವ ನನಗೆ
ಬೇರೇನೂ ಬೇಕಿಲ್ಲ ನಿನ್ನ ಪ್ರೇಮದ ವಿನಹ
ನೀ ಓಡುತ್ತಿರುವೆ ನನ್ನಿಂದ ದೂರ
ತಾಳಲಾಗುತ್ತಿಲ್ಲ ನನ್ನ ಮನಸಿನ ಭಾರ
ನನ್ನ ಸನಿಹ ಬೇಗನೇ ನೀ ಬಾರ
No comments:
Post a Comment