ಇಂದೇಕೋ ಕಾಡುತಿದೆ
ನಿನ್ನ ನೆನಪು ಬಹಳ
ಮರೆಯಬೇಕೆಂದರೂ ಮರೆಯಲು
ಆಗುತ್ತಿಲ್ಲ ನಿನ್ನ ಒಲವ
ಏಕೆ ಹೀಗೆ ಕಾಡುತಿದೆ ಈ ನೆನಪು
ಕಾಣುತಿದೆ ಕೇವಲ ನಿನ್ನ ನಗೆಯ ಹೊಳಪು
ಕಪ್ಪು ಮೋಡ ತುಂಬಿರುವ ಆಕಾಶದಂತೆ
ನಿನ್ನ ಪ್ರೀತಿಯಿಂದಲೇ ತುಂಬಿರುವ ನನ್ನ ಮನಸಾಗಿದೆ
ಕಾರ್ಮೋಡ ಕರಗಿದರೆ ಬಾನು ಸುಂದರ
ಹೊಳೆಯುವುದು ಭೂಮಿ ಫಳ ಫಳ
ನಿನ್ನ ಒಲವಲ್ಲಿ ನನ್ನ ಬದುಕು ಬೆರೆತರೆ
ಮಿಂಚುವುದು ನನ್ನ ಮನಸು ಥಳ ಥಳ
ಆ ಭೂಮಿ ಬಾನುವಿನಷ್ಟು ನಾವು
ದೂರವಿದ್ದರೂ ಚಿಂತೆ ನನಗಿಲ್ಲ
ನಿನ್ನ ಪ್ರೇಮದ ಸವಿನೆನಪೇ ಸಾಕೆನಗೆ
ಅದರಲ್ಲೇ ಸಾಗಿಸುವೆ ನನ್ನ ಬದುಕೆಲ್ಲ
No comments:
Post a Comment