ನೀ ಬಂದ ಕ್ಷಣದಿಂದ ಮನಸಲ್ಲಿ
ಒಲವೆಂಬ ಜಲಪಾತವು ಹರಿಯುತ್ತಿದೆ
ಅದರಲ್ಲಿ ಈಜಲು ಮನವು ತುಡಿಯುತ್ತಿದೆ
ಕಾಮನಬಿಲ್ಲಿನಂತ ನಿನ್ನಂದ ಕಾಡುತ್ತಿದೆ
ಯಾರನ್ನು ಬಯಸದ ಮನದಲ್ಲಿ ನಿನ್ನ ಆಗಮನ
ಆಗುತ್ತಿದೆ ಸುಂದರ ಆಸೆ ಕನಸುಗಳ ಉಗಮ
ಸುಮಗಳು ನಕ್ಕಂತೆ ಬಳ್ಳಿಗಳು ಬಳಕುವಂತೆ
ನನ್ನ ಮನಸಿಂದು ನಗುತ್ತಿದೆ ನಿನ್ನತ್ತ ಬಳಕುತ್ತಿದೆ
ಏನೆಂದು ವರ್ಣಿಸಲಿ ನಾ ನಿನಗೆ ಈ
ಸುಂದರ ಭಾವನೆಯ ಪದಗಳೇ ಸಿಗದು
ಕ್ಷಣದಿಂದ ಕ್ಷಣಕ್ಕೆ ಉಸಿರಲ್ಲಿ ಬೆರೆಯುತ್ತಿರುವೆ
ನಿನ್ನ ಪ್ರೇಮದಲ್ಲಿ ನನ್ನ ಬದುಕು ಹೂವಾಗುತ್ತಿದೆ
ನನ್ನ ಮೌನವು ಮಾತಾಗಿ ಹೇಳುವ ಮುನ್ನ
ಸ್ವೀಕರಿಸು ನೋಟದಲ್ಲೇ ಹಾಡುವ ಭಾವನೆಯನ್ನ
ಕಣ್ತುಂಬ ನೀನೆ ತುಂಬಿರುವ ನನಗೆ ದಾರಿ ತೋರಿ
ನಿನ್ನ ಬದುಕಲ್ಲೇ ನನ್ನ ಬಂಧಿಸು ಓ ನನ್ನ ಒಲವೇ
No comments:
Post a Comment