ಒಲವಿನ ಮಳೆಯ ಸುರಿಸಲು
ಓಡಿ ಬರುವೆ ನೀನು
ನಿನ್ನ ಪ್ರೀತಿಯ ಮಳೆಯಲಿ
ನೆನೆಯಲು ಕಾದಿರುವೆ ನಾನು
ಕಡಲ ಮುತ್ತುಗಳ ತಂದು
ಪೋಣಿಸಿ ಕೊಡುವೆ ನೀನು
ನಿನ್ನ ಕೈಯ ಹಾರವೇ
ಸಾಕೆಂದು ಇರುವೆ ನಾನು
ಪ್ರೇಮದ ಕಾದಂಬರಿಯ
ಬರೆಯೆಂದು ಹೇಳುವೆ ನೀನು
ಪ್ರೀತಿ ತುಂಬಿದ ಕವನಗಳ
ಗೀಚುತ್ತಿರುವೆ ನಾನು
ಸ್ನೇಹದ ಕಡಲನ್ನು ತುಂಬಿ
ಹರಿಸುತ್ತಿರುವೆ ನೀನು
ಪ್ರೀತಿಯ ಕುಡಿಯ ಬೆಳೆಸಿ ಪ್ರೇಮದ
ಕಾರಂಜಿಯ ಹರಿಸುವೆ ನಾನು
No comments:
Post a Comment