ಮನಸಲ್ಲೇ ನಿನ್ನಲ್ಲಿ ಮಾತಾಡಿ
ಕನಸಲ್ಲಿ ಅರಳಿದ ಅನುರಾಗವ ಹಂಚುವೆ
ನಾ ಅನುಭವಿಸುವ ಏಕಾಂತದಲ್ಲಿ ನಿನ್ನ
ಸವಿನೆನಪುಗಳ ಅಲೆಯೊಂದಿಗೆ ಆನಂದಿಸುವೆ
ಎಲ್ಲಿಂದಲೋ ಅಲೆಯುತ್ತ ನಿನ್ನ ದಾರಿಯ
ಮರೆತು ನನ್ನ ಹೃದಯದಲ್ಲಿ ಬಂದು ನೆಲೆಸಿರುವೆ
ನಾ ಎಲ್ಲೇ ನಡೆದರೂ ಎಲ್ಲೇ ಹೋದರು
ನಿನ್ನ ಪಿಸುದನಿಯ ಕೇಳುತಿರುವೆ
ಸದ್ದಿಲ್ಲದೇ ಬಂದು ಮನಸಲ್ಲೇ ಮನೆ ಮಾಡಿದ ನಿನ್ನ
ನನ್ನ ಎದೆಗೂಡಲಿ ಪ್ರೀತಿಯಿಂದ ಬಚ್ಚಿಡುವೆ
ಮೌನವಾಗಿ ಹುಟ್ಟಿದ ನನ್ನ ಪ್ರೇಮದ ಕಾವ್ಯವ
ನಿನಗೆಂದೇ ನಾ ಹಾಡಲು ಕಾದಿರುವೆ
ಮೈಮನಗಳ ಆವರಿಸಿರುವ ನಿನಗೆ
ಪ್ರೀತಿಯ ಬಿನ್ನಹ ತಲುಪಿಸುವ ಕಾತರ ನನಗೆ
ನಿನ್ನ ಹೃದಯಕ್ಕೆ ನಾನು ಬಡಿತವಾಗುವ ಆ
ಸುಮಧುರ ಕ್ಷಣಕ್ಕಾಗಿ ಕಾಯುತಿರುವೆ
No comments:
Post a Comment