ನಿನ್ನ ನಯನದಲ್ಲಿ ಕಂಡ ಆ ನಗುವೇ
ನನಗಿಂದು ಹೇಳುತಿದೆ ನಗುತ ನಲಿಯೆಂದು
ಮನದಲ್ಲಿ ಅಡಗಿದ್ದ ಸಾವಿರ ನೋವನ್ನು
ಮರೆಸಿದೆ ಆ ನಿನ್ನ ಪ್ರೀತಿ ತುಂಬಿದ ಕಂಗಳು
ಹೃದಯಾಂತರಾಳದಲಿ ಹುದುಗಿದ್ದ
ನೋವಿನ ಕಡಲಲ್ಲಿ ನಿನ್ನ ಸಾಂತ್ವನದ
ಅಲೆ ಬೀಸಿದೆ ನೋವಿನ ಬಿರುಗಾಳಿಯ
ಸಂತಸದ ತಂಗಾಳಿಯನ್ನಾಗಿ ಮಾಡಿದೆ
ಅದೆಂತಹ ಸ್ನೇಹ ಭಾವ ನಿನ್ನದು
ಜೀವನವೆಲ್ಲ ನೋವನ್ನುಂಡ ನನಗೆ
ಕ್ಷಣದಲ್ಲೇ ಸಂತಸದ ಸಿಹಿ ಉಣಿಸಿದೆ
ಬದುಕನ್ನೆಲ್ಲ ನಿನ್ನ ಸ್ನೇಹದಲ್ಲೇ ಬೆರೆಸಿದೆ
ನನ್ನ ನಿನ್ನ ಸಂಬಂಧಕ್ಕೆ ಏನೆಂದು ಹೆಸರಿಡಲಿ
ಪ್ರೀತಿ ಪ್ರೇಮವ ಮೀರಿದ ಈ ಪವಿತ್ರ ಬಂಧನಕ್ಕೆ
ಬೇರೇನು ಬೇಡೆನು ನಾ ನಿನಗೆ
ನಿನ್ನ ಸ್ನೇಹದ ಸಂಕೋಲೆಯೇ ಸಾಕೆನಗೆ
No comments:
Post a Comment