Sunday, 3 February 2013

ಅವಳ ಇವನು

ಅವಳ  ಗೆಜ್ಜೆಯ ನಾದಕೆ 
ಇವನು ಹೆಜ್ಜೆಯ ಹಾಕುತ್ತ 
ಬೆನ್ನು ಬಿಡದ ನೆರಳ ಹಾಗೆ ಸಾಗಿದ 

ಅವಳು ನುಡಿಯದ ವಾಣಿಗೆ  
ಇವನು ದನಿಯಾಗಿ ಪೋಣಿಸಿದ  
ಮಾತಿನ ಮುತ್ತುಗಳನ್ನ 

ಅವಳು ನಾದವ ಹೊಮ್ಮವ ವೀಣೆ 
ಇವನು ತಂತಿಯ ಮೀಟುವ ವೈಣಿಕ 
ಸುರಿಸಿದ ಮಧುರ ನಾದದ ಮಳೆಯ 

ಅವಳ ಮುಗ್ಧ ಕಂಗಳ ಚೆಲುವ ಕಂಡು 
ಇವನಾದನು ಆಕೆಯ ಪ್ರೀತಿಯ ಗೆಳೆಯ 
ಇಬ್ಬರು ನೆನೆದರು ಒಲವಿನ ಮಳೆಯಲಿ 

ಚಿಗುರೊಡೆಯಿತು ಪ್ರೀತಿಯ ಬಳ್ಳಿ
ವರ್ಣಿಸಲು  ಪದಗಳೇ ಸಿಗಲಾರದು  
ಅವಳ ಇವನ ಅನನ್ಯ ಅನುಬಂಧ

No comments: