Tuesday, 26 February 2013

ಅಗಲಿಕೆಯ ನೋವು


ನಿನ್ನ ಅಗಲಿಕೆಯ ಅರಗಿಸಿಕೊಳ್ಳಲಾರೆ  
ಏನು ಮಾಡಲಿ ಹೇಳು ಈ ನೋವ ಮರೆಯಲು 

ಕಣ್ಮುಚ್ಚಿದರೂ ನೀನೆ ಕಣ್ತೆರೆದರೂ  ನೀನೆ 
ಕಣ್ಣೇರು ಬಂದರೂ ಅಳಲು ಭಯವಾಗುತ್ತಿದೆ 
ಕಣ್ಣಲ್ಲೇ ತುಂಬಿರುವ ನೀನು ಅತ್ತರೆ ಎಲ್ಲಿ ನನ್ನಿಂದ 
ಜಾರಿ ಹೋಗುವೆಯೋ ಎಂಬ ಭಯ ನನಗೆ 

ಪ್ರೀತಿಯೆಂಬುದು ಪವಿತ್ರ ಬಂಧನವಾಗಿರಬೇಕೇ 
ಹೊರತು ಪ್ರೀತಿಸುವ ಮನಸನ್ನು ಕೊಲ್ಲಬಾರದು  
ಎರಡು ಮನಸುಗಳ ಮಿಲನವೇ  ಪ್ರೇಮ 
ಆ  ಮನಸುಗಳ  ಅಗಲಿಕೆಯೇ ನೋವಿನ ಹೋಮ 

ನಿನ್ನ ಪ್ರೀತಿಯ ಬಂಧನದಲ್ಲೇ ಬಾಳಿಸು ನನ್ನ ಹೀಗೆ 
ದೂರಾಗಿ ನೋವಿನ ಹೋಮದಲ್ಲಿ ಬೇಯಿಸದಿರು ನನ್ನ 
ತಾಳೆನು ಇನಿಯ ಬೇಡೆನಗೆ ಈ ಅಗಲಿಕೆಯ ನೋವು 
ಕಾಯುತಿರುವೆ ಯಾವಾಗ ಬರುವುದೋ ನನ್ನ ಸಾವು 

ಏನು ಮಾಡಲಿ ಹೇಳು ಈ ನೋವ ಮರೆಯಲು 
ಪ್ರಾರ್ಥಿಸುವೆ ಆ ನಿನ್ನ ದೇವರಿಗೆ ನಾ ಬೇಗ ಸಾಯಲು 



No comments: