Tuesday 30 August 2016

ಸಂಗೀತ ವಾದ್ಯದಿಂದ ಮಧುರ ನಾದ ಬರಲು 
ಬೇಕೊಂದು ವಾದಕನ  ಮೃದು ಸ್ಪರ್ಶ 
ಮೊಗದ ಮೇಲೆ ಸುಂದರ ನಗೆ ಮೂಡಲು 
ಇರಬೇಕು ಪ್ರೀತಿ ತುಂಬಿದ ಹೃದಯದಲ್ಲಿ ಹರ್ಷ 

Thursday 25 August 2016

ಜೀವನವೊಂದು ಸಮುದ್ರವಾದರೆ 
ಭರವಸೆ ಎನ್ನುವುದು ಸೂರ್ಯನಂತೆ 
ಬೆಳಗ್ಗೆ ಸಮುದ್ರದಿಂದ ಉದಯಿಸಿ ಪ್ರಖರವಾಗಿ ಬೆಳಗಿದರೂ 
ಸಂಜೆ ಅದೇ ಸಮುದ್ರದಲ್ಲಿ ಮುಳುಗಿ ಕತ್ತಲಕ್ಕೆ ತಿರುಗುವುದು 
ಭರವಸೆಯ ಬೆಳಕು ಒಮ್ಮೆ ಮೂಡಿದರೂ 
ಹತಾಶೆಯ ಕತ್ತಲು ಮತ್ತೊಮ್ಮೆ ಕಾಡುವುದು 
ಆಸೆ ನಿರಾಸೆಗಳು ಸೂರ್ಯೋದಯ ಸೂರ್ಯಾಸ್ತದಂತೆ 
ಬರುವುದೆಂದು ಅರಿತರೆ ನಿನಗಿಲ್ಲ ಯಾವುದೇ ಚಿಂತೆ 

Wednesday 24 August 2016

ಲೇಖನಿ

ಮೆದುಳಿನ ನಾಲಿಗೆ ಮಾಡುವುದು ಬುದ್ಧಿಯ ಸುಲಿಗೆ 
ಕವಿಯ ಕಲ್ಪನೆಯ ಸೃಷ್ಟಿ ತನ್ನೆಡೆಗೆ ಸೆಳೆಯುವುದು ಎಲ್ಲರ ದೃಷ್ಟಿ 
ಕತ್ತಿಗಿಂತ ಹರಿತ ನೀಡುವುದು ಚೂಪಾದ ತಿವಿತ 
ಚಿತ್ರಗಾರನ ಜೀವ ಪತ್ರಕರ್ತನ ಪ್ರೇಮ 
ಸಾವಿರಾರು ಅಕ್ಷರಗಳ ಖನಿ ಸುಂದರ ಚಿತ್ತಾರಗಳ ಗಣಿ 
ಬರೆದು ಬರೆದು ಸಾಕಾಗಿ ಪದ್ಯ 
ಬರೆಯಲು ಕುಳಿತೆ ಗದ್ಯ 
ಬರೆಯಲಾಗದೆ ಸೋತು ಕುಳಿತಾಗ 
ನೋಡಿ ನಕ್ಕಿತು ಆ ಗದ್ಯ 
ಕೊನೆಗೂ ನಿನಗೆ ನಾನೇ ಗತಿ ಎಂದು 
ಗೆದ್ದು ಬೀಗಿತು ನನ್ನ ಪದ್ಯ 

Tuesday 23 August 2016

ಸಿಕ್ಕಿತು ಕಿಟಕಿಯ ಪಕ್ಕದ ಆಸನ 
ಆರಂಭವಾಗಿದೆ ಸುಂದರ ಪ್ರಕೃತಿಯಲಿ ಪಯಣ 
ಆ ಕ್ಷಣ ಕಿವಿಗಳಿಗಿದ್ದರೆ ಇಂಪಾದ ಗಾಯನ 
ಆಗುತಿತ್ತು ಮೈ ಮನವೆಲ್ಲ ರೋಮಾಂಚನ 
ಎಷ್ಟು ದೂರ ಸಾಗಿದರೂ ಪಯಣ 
ಮುಗಿಯದಿರಲಿ ಎಂದು ಮಾಡುತಿರುವೆ ಪ್ರಾರ್ಥನೆ 
ಅರ್ಪಿಸುತ್ತಾ ಸೌಂದರ್ಯದ ಗಣಿಯಾಗಿರುವ 
ಪ್ರಕೃತಿಮಾತೆಗೆ ನನ್ನ ಮನದಾಳದ ವಂದನೆ 

Friday 19 August 2016

ನಿನ್ನ ಪ್ರೀತಿಸದ ವ್ಯಕ್ತಿಯನ್ನು ಪ್ರೀತಿಸುವುದು 
ವಿಮಾನ ನಿಲ್ದಾಣದಲ್ಲಿ ಹಡಗಿಗಾಗಿ ಕಾದಂತೆ 
ನಿನ್ನ ಪ್ರೀತಿಸುವ ವ್ಯಕ್ತಿಯನ್ನು ನಿರಾಕರಿಸುವುದು 
ಮರಳುಗಾಡಿನ ಓಯಾಸಿಸ್ ಮರೆಯಾದಂತೆ 

Tuesday 16 August 2016

ನಿನ್ನ ಹೃದಯವೇ ನನ್ನ ಮನೆ 
ಅಲ್ಲಿ ಸದಾ ಪ್ರೀತಿ ಸುರಿಸುವುದು ನಿನ್ನ ಹೊಣೆ 
ಮಾಡುವೆ ನಿನ್ನ ಒಲವಿನ ಕೆತ್ತನೆ 
ಅದೇ ನಮ್ಮಿಬ್ಬರ ಪ್ರೀತಿಯ ಪರಿಕಲ್ಪನೆ 

ತುಂಬಿರಲಿ ನಿನ್ನ ಕಂಗಳಲಿ ಸದಾ ಹರ್ಷ 
ಅದ ನೋಡುತಾ ಕಾಯುವೆ ವರುಷ ವರುಷ 
ಬೇಕಿಲ್ಲ ನನಗೆ ಸದಾ ನಿನ್ನ ಸನಿಹ 
ಬಯಸುವೇ ಸದಾ ನಿನ್ನ ಪ್ರೀತಿ ತುಂಬಿದ ಹೃದಯ 

ನಿನಗಾಗಿ ಮಿಡಿಯುತಿದೆ ನನ್ನ ಮನ 
ಕಾಯುತಾ ನಿನ್ನ ಕೈಹಾರದಲಿ ಬಂಧಿಯಾಗುವ ಕ್ಷಣ 
ಆ ಕೈಗಳ ಹೊರತು ಬೇಡೆನಗೆ ಬೇರಾವ ಬಂಧೀಕಾನೇ 
ನಿನ್ನೊಲವ ಹೊರತು ಬೇರಾವ ಸುಖ ಕಾಣೆ 





Wednesday 10 August 2016

ನನ್ನ ಮನಸು ನೀಲಿ ಆಕಾಶದಂತೆ ನಿರ್ಮಲ 
ಬೆಳ್ಳಿ ಮೋಡಗಳಂತೆ ನಿನ್ನೊಲವು ತೇಲಿದಾಗಲೆಲ್ಲ 
ಅಲ್ಲಿ ನೂರಾರು ಭಾವಗಳ ಸಿಂಚನ 
ಸಿಂಚನದ ಸುಳಿಯಲ್ಲಿ ಸಿಲುಕಿದ ಮೋಡಗಳ ನರ್ತನ 
ಆ ನರ್ತನದ ಫಲವೇ ನವಿರಾದ ಪ್ರೇಮದ ಮಿಲನ 



Monday 8 August 2016

ಗ್ರಂಥಾಲಯವೊಂದು ಅದ್ಭುತ ವ್ಯಕ್ತಿಯಂತೆ 
ನೋಡಲು ಶಾಂತಸ್ವರೂಪ ಮಾಹಿತಿ ಮಾತ್ರ ಅಪರಿಮಿತ 
ಅದೊಂದು ವಿಭಿನ್ನ ಆಕರ್ಷಣೆಯ ಆಗರ 
ನಂಬಿ ಹೋದರೆ ಹರಿಸುವುದು ಜ್ಞಾನದ ಸಾಗರ 

ಮಮತೆಯ ಮಡಿಲು
ನಿಸ್ವಾರ್ಥದ ಕಡಲು 
ಅವಳೇನಮ್ಮ ನಮ್ಮಮ್ಮ
ಅವಳಿದ್ದರೆ ನನ್ನ ಗೂಡು ನೆಮ್ಮದಿಯ ಸೂರು
ಅವಳಿಲ್ಲದ ಬಾಳು ಎ0ದೂ ಬತ್ತದ ಗೋಳು

Saturday 6 August 2016

ಜೀವನ ಸಂಗೀತವಾದರೆ 
ಪ್ರೀತಿಯೇ ಸಾಹಿತ್ಯ 
ಸ್ನೇಹವೆಂಬ ಶೃತಿಯಿಂದ 

ವಿಶ್ವವಾಸವೆಂಬ ಪಲ್ಲವಿಯ ಬರೆದರೆ 
ಪ್ರೀತಿ , ಸ್ನೇಹ , ವಿಶ್ವವಾಸಗಳ 

ಸಂಗಮದ ಚರಣ 
ಸರಾಗವಾಗಿ ಹರಿದರೆ ನಾದಗಂಗೆಯಾಗಿ 

ಹೊಮ್ಮುವುದು ಜೀವನ

Thursday 4 August 2016

ನನ್ನ ನಿನ್ನ ಒಲವಿನ ಹೋಲಿಕೆ ಮಾಡಲು 
ನಡೆಯುತ್ತಿದೆ ಪದಪುಂಜಗಳ ಹೋರಾಟ 
ಪದವೂ ಸಿಕ್ಕರೂ ಸಿಗದಿದ್ದರೂ ನೀನಿಲ್ಲದ ಕ್ಷಣ 
ಯಾರೂ ತಿಳಿಯರು ನನ್ನ ಮನಸಿನ ಪರದಾಟ 

Tuesday 2 August 2016

ಉಸಿರಾಡುವ ಶವದಂತಾದ ಮನಸಿಗೆ ಸಾವೂ ಇಲ್ಲ ನೋವೂ ಇಲ್ಲ 
ಬೇಡವೆಂದರೂ ಬಂದು ಕಾಡುವ ನೆನಪುಗಳಿಗೆ ಕರುಣೆಯೂ ಇಲ್ಲ 
ಬೇಡದ ನೆನಪಲಿ ಬೇಯುತ್ತಾ ಸಾಯದ ಮನಸೊಂದಿಗೆ ಹೆಣಗುತ್ತಾ 
ಬದುಕಿನ ಬಂಡಿಯ ತಳ್ಳದೇ ಬೇರೆ ದಾರಿಯೂ ನಿನಗಿಲ್ಲ 

Monday 1 August 2016

ಪುಸ್ತಕವೆನ್ನುವುದು ಸುಂದರವಾದ ಸುಮದಂತೆ 
ಪ್ರತೀ ಪುಟವೂ ಕೋಮಲವಾದ ದಳಗಳಂತೆ 
ಅವುಗಳನ್ನು  ಮೃದುವಾಗಿ ಮುಟ್ಟಿ ಮನಸಿಗೆ ಕಟ್ಟಿ 
ಸ್ವಾರಸ್ಯಗಳನ್ನೆಲ್ಲ ಹೂವಿನ ಸುಗಂಧದಂತೆ ಆಸ್ವಾದಿಸಿದರೆ 
ಹೂಮಳೆಯಂತೆ ಪುಸ್ತಕಗಳನ್ನು ಅಪ್ಪುವುದು  ಈ ಧರೆ