ನನ್ನೆದೆಯ ಗೂಡಲ್ಲಿ ಬಚ್ಚಿಟ್ಟ ಪ್ರೀತಿಯ
ಕಿತ್ತಿಟ್ಟು ಇಡಬೇಕೆನಿಸಿದೆ ನಿನ್ನ ಹೃದಯದಲ್ಲಿ
ನೀನೆಲ್ಲಿದ್ದರೂ ಹೇಗಿದ್ದರೂ ನನ್ನೆದೆಯ
ಭಾವನೆಯ ಬೆಳಕಲ್ಲಿ ಫಳ ಫಳ ಹೊಳೆಯುವೆ
ಬರಿದಾದ ಕಣ್ಣಲ್ಲಿ ನವಿರಾದ ಕನಸು ತುಂಬಿದೆ
ಭಾವನೆಗಳಿಲ್ಲದ ಮನಸಲ್ಲಿ ಪ್ರೀತಿ ತುಂಬಿದೆ
ಒಲವಿನ ಬೀಜವ ಬಿತ್ತಿ ಹೋದರೆ ಸಾಕೇ
ಅದಕ್ಕೆ ಪ್ರೀತಿಯ ನೀರೆರೆಯಬಾರದೇ
ನೀನೇ ಬಿತ್ತಿದ ಈ ಪ್ರೀತಿಯ ಬೀಜವ ನಾ ಬೆಳೆಸುವೆ
ಮರವಾದ ಮೇಲೆ ನಿನಗೆಂದೇ ಸದಾ ನೆರಳಾಗಿರುವೆ
1 comment:
ಕರುಣಾಮಯಿ ಪ್ರೇಮಿಯ ಈ ಅಮಿತ ಒಲವಿನೋತ್ಸಾಹವು ಮನಸೂರೆಗೊಂಡಿತು.
http://badari-poems.blogspot.in
Post a Comment