ಎಲ್ಲಿಂದಲೋ ನೀ ಬಂದೆ
ಪ್ರೀತಿಯೆಂಬ ಹೊಸ ಅಲೆಯ ಎಬ್ಬಿಸಿದೆ
ಆ ಅಲೆಯ ರಭಸಕ್ಕೆ ನಿನ್ನ ನೆನಪೆಂಬ ಸುಳಿಯಲ್ಲಿ
ಕೊಚ್ಚಿ ಹೋಗುತಿದೆ ನನ್ನ ಬದುಕು
ಜೀವಕ್ಕೂ ಜೀವನಕ್ಕೂ ನೀನೆ ಉಸಿರೆಂದು ನಂಬಿದೆ
ಕೊಂಚವೂ ಕರುಣೆಯಿಲ್ಲದೆ ಆ ನಂಬಿಕೆಯ ನೀ ಕೊಂದೆ
ಹೇಗೆಂದು ಅರ್ಥೈಸಲಿ ನನ್ನ ನೋವು ನಿನಗೆ
ಬದುಕಿನ ಪ್ರತಿಕ್ಷಣವೂ ನರಕವೇ ಆಗುತಿದೆ ನನಗೆ
ಹೂವು ಮುಳ್ಳಿನಂತೆ ಆಗಿದೆ ನಿನ್ನೊಲವ ಹಾದಿ
ಒಮ್ಮೆ ಮುಟ್ಟಿದರೆ ನೋವು ಮತ್ತೊಮ್ಮೆ ಅಪ್ಪಿದರೆ ನಲಿವು
ಬೇಡವೆಂದರೂ ಬರುತಿರುವೆ ನೀ ನನ್ನ ಮನಸಲಿ
ಬಂದು ದಿನವೂ ಕೊಲ್ಲುತಿರುವೆ ನನ್ನ ಕನಸಲಿ
ನಾ ನಿನಗೆ ಬೇಡವೆಂದರೆ ಹೇಳಿಬಿಡು ನಿನ್ನಿಂದ
ಶಾಶ್ವತವಾಗಿ ದೂರಾಗಿ ಹೋಗುವೆ
ಬೇಕೆಂದರೆ ಒಮ್ಮೆ ಕರೆದುಬಿಡು ನಿನ್ನೊಲವಿನ ಕರೆಗೆ
ಖುಷಿಯಿಂದ ಜನ್ಮಪೂರ್ತಿ ನಿನಗಾಗಿ ಕಾಯುವೆ
1 comment:
ಮುಳ್ಳನ್ನು ಸಹಿಸಿಕೊಂಡು ಒಪ್ಪಿಕೊಳ್ಳುವ ಸಗೃದಯ ಮನಸು ಹೂವಿನದು.
Post a Comment