ನೀ ಮೌನಿಯಾದರೆ ನಾ
ಮರೆತುಬಿಡುವೆ ನನ್ನ ದನಿಯ
ಕೊಲ್ಲದಿರು ನೀ ನನ್ನ ಮೌನದಲಿ
ಕೋಪವಿದ್ದರೆ ಬೈದುಬಿಡು ನಿನ್ನ ದನಿಯಲ್ಲಿ
ಮೌನವಾಗಿರುವುದು ಚಂದವೆಂದು
ತಿಳಿದು ಸುಮ್ಮನಿದ್ದೆ ನಾ ಅಂದು
ಆದರೆ ಒಲವಿನ ಹುಡುಗ ಮೌನವಾದರೆ
ಏನಾಗುವುದೆಂಬ ಅರಿವು ನನಗಾಯಿತು ಇಂದು
ಭಾವನೆಯನ್ನೇ ಬಂಡವಾಳವನ್ನಾಗಿಸಿ
ಬದುಕುತಿರುವೆ ನಾ ಪ್ರತಿಕ್ಷಣ
ಎಂದಾದರೂ ಒಂದು ದಿನ ತಿಳಿಯುವೆಯ
ನೀ ನನ್ನ ಮನಸಿನ ತಲ್ಲಣ
ಬಳಿ ನೀ ಇದ್ದಾಗ ಹರಿಯುತ್ತಿತ್ತು
ಚಂದದ ಪ್ರೀತಿಯ ಭಾವ
ನೀ ದೂರಾದ ಕ್ಷಣದಿಂದ ಎಲ್ಲೇ
ಮೀರಿ ಹರಿಯುತಿದೆ ವಿರಹದ ರಾಗ
ಮನಬಿಚ್ಚಿ ಹೇಳುವೆ ಕಡೆಯ ಮಾತು ನಿನಗೆ
ಈಗಲೇ ನೆನೆಪಿಸುಕೋ ನನ್ನ
ಈ ಜಗವ ಬಿಟ್ಟು ಹೋಗುವ ಮುನ್ನ
ನೀ ನೆನೆದರೆ ಎನ್ನ ಈ ಜೀವನ ಧನ್ಯ
2 comments:
ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕಾದ ವಿಚಾರ:
"ಈಗಲೇ ನೆನೆಪಿಸುಕೋ ನನ್ನ
ಈ ಜಗವ ಬಿಟ್ಟು ಹೋಗುವ ಮುನ್ನ"
ತುಂಬಾ ಒಳ್ಳೆಯ ಕವನ.
"ಭಾವನೆಯನ್ನೇ ಬಂಡವಾಳವನ್ನಾಗಿಸಿ
ಬದುಕುತಿರುವೆ ನಾ ಪ್ರತಿಕ್ಷಣ "..... ಇಷ್ಟವಾಯ್ತು... ಚೆಂದದ ಕವಿತೆ!
Post a Comment