ನೀ ಉರಿಯುವ ಬೆಂಕಿಯಾದರೆ
ನಾ ಅದನು ತಣಿಸುವ ನೀರಾಗುವೆ
ನೀ ಹರಿಯುವ ಕಡಲಾದರೆ
ನಾ ನಿನ್ನ ಸೇರುವ ನದಿಯಾಗುವೆ
ನೀ ಫಲ ಕೊಡುವ ಧರೆಯಾದರೆ
ನಾ ಸುರಿಯುವ ಮಳೆಯಾಗುವೆ
ನೀ ಹೇಗೆ ಇರು ಎಲ್ಲೇ ಇರು
ಯಾವುದೇ ರೂಪದಲ್ಲಿದ್ದರೂ
ನಾ ಸದಾ ನಿನ್ನ ಬೆಂಬಿಡದೆ ಕಾಯುವ
ನೆರಳಾಗಿರುವೆ
No comments:
Post a Comment