ನೀನೊಂದು ಕವಿತೆಯಂತೆ
ಎಷ್ಟು ಬರೆದರೂ ಸಾಲದು ನಿನ್ನ ಬಗ್ಗೆ
ಕಡಲ ಆಳದ ಒಳಗೆ ಇರುವ
ಮುತ್ತಿಗೆ ಚಿಪ್ಪಿನ ಕಾವಲಿನಂತೆ
ನಿನ್ನ ಪ್ರತಿ ಹೆಜ್ಜೆಗೂ ನೆರಳಾಗಿ ನಾನಿರುವೆ
ಮುಗಿಲಿನ ಮೋಡಕ್ಕೆ ಕೈ ಚಾಚಿದರೆ
ನಿನ್ನ ಪ್ರೀತಿಯ ಮಳೆಯೇ ಸುರಿಯುತ್ತದೆ
ಎಲ್ಲಿದ್ದರೂ ಹೇಗಿದ್ದರೂ ಬಂದು ಬಿಡು ನೀ ಬೇಗ
ಬಾನಿನ ಅಂಚಿಂದ ನೀ ಬರುತಿರುವ
ಕ್ಷಣವ ಒಮ್ಮೆ ನೋಡುವ ಮಹದಾಸೆ ನನ್ನದು
ಈ ಆಸೆಯ ಬೇಗನೆ ಪೂರೈಸುವ ಕರ್ತವ್ಯ ನಿನ್ನದು
1 comment:
ಬೇಗನೆ ಆ ಕಾಲವೂ ಬರಲಿ, ಸಿಗಲಿ ನಮಗೂ ಸಿಹಿಯು.
Post a Comment