ನನಗಾಗಿ ಯಾರಿಲ್ಲ ಯಾರಿಗಾಗಿಯೂ ನಾನಿಲ್ಲ
ನನಗೆ ನಾನೇ ಎಲ್ಲ ನಿನಗೆ ನೀನೆ ಎಲ್ಲ
ಹೀಗಂದೆ ಬದುಕುವುದು ಸರಿಯಲ್ಲ
ಪ್ರೀತಿಯೋ ಸ್ನೇಹವೋ ಕೋಪವೋ ದ್ವೇಷವೋ
ಏನಾದರಿಲಿ ಹೇಗಾದಿರಲಿ ಯಾರಿಗೂ ಯಾರಿಲ್ಲ
ಎಂದುಕೊಳ್ಳಬೇಡ ಅವರಿಗೆ ಅವರೇ ಎಲ್ಲ
ಕವಿತೆಯೋ ಕವನವೋ ಕಥನವೋ ಅದಕ್ಕೆ
ಕಲ್ಪನೆ ಭಾವನೆಯೇ ಎಲ್ಲ ಅದಕೆ ಒಳ್ಳೆಯ
ಮನಸಿನ ಹೊರತು ಬೇರೇನೂ ಬೇಕಿಲ್ಲ
ರಾಗವೋ ತಾಳವೋ ಭಾವವೋ ಅದಕ್ಕೆ
ಆಲಿಸುವ ಶ್ರವಣಗಳೇ ಎಲ್ಲ ಸಂಗೀತದ
ಸ್ವರಗಳ ಸಂಚಲನದ ಹೊರತು ಬೇರೇನೂ ಬೇಕಿಲ್ಲ
ಇವುಗಳ ನಡುವೆ ಬದುಕುವ ಮನುಜರು ನಾವು
ನಿಸರ್ಗದ ನಿಯಮಗಳ ಮೀರುವ ಹಾಗಿಲ್ಲ
ಇರುವುದನ್ನು ಸ್ವೀಕರಿಸದ ಹೊರತು ಬೇರೆ ದಾರಿ ಇಲ್ಲ
1 comment:
ಸಮ ಬಾಳು ಸಮ ಪಾಲು ಎಂದು ಎಷ್ಟು ಭಾವನಾತ್ಮಕವಾಗಿ ಬರೆದುಕೊಟ್ಟಿದ್ದೀರಾ ಕವಿಯತ್ರೀ.
http://www.badari-poems.blogspot.in/
Post a Comment