ನೀನಿರದ ಬಾಳು ಊಹಿಸಲು ಆಗುತ್ತಿಲ್ಲ
ಎಲ್ಲಿ ನೋಡಿದರೂ ಕಾಣುತ್ತಿರುವೆ ನೀನೆ ಎಲ್ಲ
ಅಂದುಕೊಂಡ ಹಾಗೆ ಏನು ಆಗದು
ಆಗುತ್ತಿರುವುದು ಏನು ಎಂದು ನನಗೆ ತಿಳಿಯದು
ಈ ಜಗದಲ್ಲಿ ನನಗೆಂದು ಯಾರೂ ಇಲ್ಲ
ಇದ್ದ ನೀನೊಬ್ಬನೇ ನನಗೆಲ್ಲ
ಹೇಳದೆ ನನ್ನ ಬದುಕನ್ನು ಪ್ರವೇಶಿಸಿದೆ
ಕೇಳದೆ ಮಾತ್ರ ದೂರ ಹೋಗಬೇಡ
ಆಗದು ನನಗೆ ನಿನ್ನ ಅಗಲಿ ಇರಲು
ಬೇಕೆನಗೆ ಕೊನೆವರೆಗೂ ನಿನ್ನ ಪ್ರೀತಿಯ ಸೂರು
ನಿನ್ನ ನೆನಪಿನ ರಂಗೋಲಿಯೇ ಹರಿಯುತ್ತಿದೆ ಎದೆಯಲ್ಲಿ
ಅದಕ್ಕೆ ಬಣ್ಣಗಳಿಂದ ಅಲಂಕರಿಸುವೆಯ ನಿನ್ನ ಕೈಯಲ್ಲಿ
No comments:
Post a Comment