ನೀ ಯಾರೋ ನಾ ಯಾರೋ
ಎಲ್ಲಿಂದಲೋ ನೀ ಬಂದೆ ಹೊಸ ಭಾವ ತರಿಸಿದೆ
ನಿನ್ನ ನೆನೆದು ಗೀಚಿದ ಪದಗಳೆಲ್ಲ
ಹಾಡಿನಂತೆ ಹರಿಯುವುದೇಕೆ...???
ನಿನ್ನ ಕಂಡ ಕ್ಷಣಗಳೆಲ್ಲ
ನನ್ನ ಮುಖ ತಾರೆಗಳಂತೆ ಮಿನುಗುವುದೇಕೆ...??
ನೀ ದೂರಾದ ಕ್ಷಣ ನನ್ನ
ಕಣ್ಣಲ್ಲಿ ಕಂಬನಿ ಮಿಡಿಯುವುದೇಕೆ...???
ನೀ ಎದುರಿಗೆ ಬಂದಾಗ ನೂರಾರು ಮಾತುಗಳು
ಹೊರಬರದೆ ಮೌನವಾಗುವುದೇಕೆ...???
ಈ ಏಕೆ ಅನ್ನುವ ಪ್ರಶ್ನೆಗಳಿಗೆ ಉತ್ತರ ಸಿಗದೇ
ಸದಾ ಕಾಲ ನನ್ನ ಕಾಡುತ್ತಿದೆ ಹೀಗೇಕೆ...??
1 comment:
ಪುಳಕಗಳೇ ಹಾಗೇ ಅವು ಎದುರು ಬಂದಾಗ ಧಾವಡವಿಸೋ ಎದೆ
Post a Comment