ತ ರಾ ಸು ಅವರ "ಸಾಕು ಮಗಳು" ಪುಸ್ತಕದಲ್ಲಿ ತುಂಬಿರುವುದು ಬರೀ ಗೋಳು:( ಹಾಗಂತ ಓದುವಾಗ ನೀರಸ ಎನಿಸುವುದಿಲ್ಲ... ಆದರೆ ಕಥೆಯ ಕೊನೆ ದುಃಖಾಂತ್ಯ ಆಗಿದ್ದಕ್ಕೆ ಬೇಸರ ಆಗುವುದಂತೂ ನಿಜ. ಮುನ್ನುಡಿಯಲ್ಲಿ ಹೇಳಿದಂತೆ ಬರೀ ದುಃಖ, ದುಗುಡಗಳೇ ಹೆಚ್ಚು ತುಂಬಿರುವ ಕಾದಂಬರಿ ಇದು.
ಈ ಕಾದಂಬರಿಯ ಮೊದಲ ನಾಯಕಿ ನಾಗಮ್ಮ, ಅವಳು ಕೂಸಿದ್ದಾಗಲೇ ಅಪ್ಪ ಅಮ್ಮನ ಕಳಕೊಂಡ ನತದೃಷ್ಟ ಕೂಸು. ಹಳ್ಳಿಯ ಜನರೆಲ್ಲಾ ಅವ್ಳನ್ನು ಅನಿಷ್ಟ, ದರಿದ್ರ ಎಂದೂ ಮೂದಲಿಸಿದರೂ ಅವರ ಮಾತಿಗೆ ಕೆಡಿಸಿಕೊಳ್ಳದೆ ಹನುಮಕ್ಕ ಎಂಬ ಮಾತೃ ಹೃದಯಿ ನಾಗಮ್ಮಳನ್ನು ಬೆಳೆಸುತ್ತಾಳೆ. ಆದರೆ ಹಣೆಬರಹವೋ ನಾಗಮ್ಮಳದೂ ೫ ವರ್ಷದವಳಾಗಿದ್ದಾಗಲೇ ಹನುಮಕ್ಕನನ್ನು ಕಳಕೊಂಡು ಅನಾಥಳಾಗಿ ಉಡಲು, ಉಣ್ಣಲು ಯಾರ ಸಹಾಯವಿಲ್ಲದೆ ಬೇಡುತ್ತಾ ಬದುಕಿದಳು.
ಆಗ ನೀಲಮ್ಮ ಎಂಬ ಮತ್ತೊಬ್ಬ ಹುಡುಗಿಯ ಆಗಮನ ನಾಗಮ್ಮನ ಬಾಳನ್ನು ಮತ್ತೆ ಹಸನು ಮಾಡಿ ಸುಖವಾಗಿ ಬೆಳೆಯುತ್ತಾ ಯವ್ವನಕ್ಕೆ ಕಾಲಿಡುತ್ತಾಳೆ. ಆದರೂ ದುರಾದೃಷ್ಟ ಅವಳನ್ನು ಬಿಡದೆ ಆ ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತದೆ. ಇದಕ್ಕೆ ಕಾರಣವಾದ ಸನ್ನಿವೇಶವನ್ನು ಓದಿಯೇ ತಿಳಿಯಬೇಕು. ಹೀಗೆ ಅವಳು ಎಲ್ಲೆಲ್ಲೋ ಅಲಿಯುತ್ತಾ ಮಗುವಿಗೆ ಜನ್ಮವಿಟ್ಟು ಸಾಯುತ್ತಾಳೆ ಅವಳೇ ಲಕ್ಷ್ಮಿ.. ಎರಡನೇ ಸಾಕು ಮಗಳು...
ಸಾಯುವ ಮುನ್ನ ನಾಗಮ್ಮ ಚಿತ್ರಹಳ್ಳಿಯ ಪಂಡಿತರಿಗೆ ತನ್ನ ಮಗಳನ್ನು ಒಪ್ಪಿಸಿ ಸಾಯುತ್ತಾಳೆ. ಆ ಮಗುವನ್ನು ಕರೆದುಕೊಂಡು ಹೋದಾಗ ಪಂಡಿತರು ತನ್ನ ಹೆಂಡತಿ ಸುಂದರಮ್ಮ ಮತ್ತು ಮಗಳು ರಾಧೆಯಿಂದ ಏನೇನು ನೋವು ಅನುಭವಿಸುತ್ತಾರೆ... ಕೊನೆಗೆ ಅವರು ತಮ್ಮ ಸಾಕು ಮಗಳಿಗಾಗಿ ತೆಗೆದುಕೊಂಡ ನಿರ್ಧಾರ ಎಲ್ಲವೂ ಓದುಗರ ಮನ ಮುಟ್ಟುತ್ತದೆ... ಒಂದು ಸಲ ಓದಬಹುದಾದ ಕಾದಂಬರಿ.
No comments:
Post a Comment