ಕೆ.ಎಸ್ ನಾರಾಯಣಾಚಾರ್ಯರ "ಆಚಾರ್ಯ ಚಾಣಕ್ಯ" ನಿಜಕ್ಕೂ ಅದ್ಬುತ ಕೃತಿ. ಇದನ್ನು ಓದುವ ಮುನ್ನ ನನ್ನ ಮನಸಲ್ಲಿ ಇದ್ದ ಕಲ್ಪನೆಯೇ ಬೇರೆ, ಓದಿದ ಮೇಲೆ ಅನಿಸಿದ್ದೆ ಬೇರೆ.
ವಾಸ್ತವದಲ್ಲೇ ಮಾತಾಡುವಾಗ ಎಷ್ಟೋ ಸಲ ನಾವು ಕೇಳಿರುತ್ತೀವಿ ಅವನು ಬಹಳ ಚಾಣಾಕ್ಷ , ಅವಳು ಬಹಳ ಚಾಣಾಕ್ಷೆ ಅಂದರೆ ಅಸಾಮಾನ್ಯ ಬುದ್ದಿವಂತರನ್ನು ಚಾಣಕ್ಯನಿಗೆ ಹೋಲಿಸಿ ಹೇಳುತ್ತಾರೆ.. ಆದರೆ ಹಾಗೇಕೆ ಹೇಳುತ್ತಾರೆ ಎನ್ನುವುದು ಈ ಪುಸ್ತಕ ಓದಿದ ಮೇಲೆ ತಿಳಿಯಿತು. ನಿಜಕ್ಕೂ ಇದರ ಬಗ್ಗೆ ವಿಮರ್ಶೆ ಬರೆಯುವುದು ನನ್ನಿಂದ ಅಸಾಧ್ಯ. ಹಾಗಾಗಿ ಚಾಣಕ್ಯನ ಬಗ್ಗೆ ಹೇಳುವುದಕ್ಕಿಂತ ನನ್ನ ಅನುಭವಗಳನ್ನು ಹೇಳಲು ಪ್ರಯತ್ನಿಸುತ್ತೇನೆ.
ಅಧ್ಯಾಯಗಳ ಆರಂಭದ ಮೊದಲು ತರಂಗಕ್ಕಾಗಿ ಹಿರಿಯ ಸಾಹಿತಿ ಎನ್ಕೆ ಬರೆದ ಚಾಣಕ್ಯ ಕೃತಿಯ ಅಂಶಗಳನ್ನು ಪ್ರಕಟಿಸಿದ್ದಾರೆ. ನಿಜಕ್ಕೂ ಅದನ್ನು ಓದಿದಮೇಲೆ ಹೀಗೂ ಸಾಧ್ಯಾನ ಅನ್ನುವಷ್ಟು ಆಶ್ಚರ್ಯ ಎನಿಸದೆ ಇರದು. ಇದರ ಜೊತೆಗೆ ಲೇಖಕನ ಮಾತು ಅಂಕಣದ ಪುಟಗಳಷ್ಟು ಒಂದಕ್ಕಿಂತ ಒಂದು ರೋಚಕ ಅಂಶಗಳಿಂದ ಕೂಡಿವೆ. ನನ್ನ ಅನುಭವ ಹೇಳಬೇಕಂದರೆ ಬೇಗ ಓದಿಸಿಕೊಂಡು ಹೋಗುವ ಕೃತಿಯಂತೂ ಅಲ್ಲ, ಕಾರಣ ಇತಿಹಾಸ ಪುರುಷನ ಇತಿಹಾಸಗಳು ಅಷ್ಟು ಆಶ್ಚರ್ಯಕರ ಅಂಶಗಳಿಂದ ಕೂಡಿದ್ದು ಅಲ್ಲದೇ ಕೆಲವೊಂದು ನಂಬಲೂ ಅಸಾಧ್ಯ ಎನಿಸುವುದು. ನಿಧಾನವಾಗಿ ಓದಿದರೆ ಮಾತ್ರ ಚಾಣಕ್ಯನ ಚಾಣಾಕ್ಷಮತಿಯನ್ನು ಆನಂದದಿಂದ ಆಸ್ವಾದಿಸಲು ಸಾಧ್ಯ. ಈ ಪುಸ್ತಕ ಓದಿದ ನಂತರ ಚಾಣಕ್ಯನಿಗೆ ಸಂಬಂಧಪಟ್ಟ ಇನ್ನೂ ಅನೇಕ ಪುಸ್ತಕಗಳ ಮಾಹಿತಿ ಮತ್ತು ವಿಮರ್ಶೆಗಳನ್ನು ಅಂತಜಾಲದಲ್ಲಿ ಓದಿದೆ ತುಂಬಾ ಸಂತೋಷವಾಯ್ತು.
ಕೆಲವರು ಸ್ಪಸಾಮರ್ಥ್ಯದಿಂದ ಸಾರ್ವಭೌಮರಾಗಿ ಸಿಂಹಾಸನ ವನ್ನೇರಿದರೆ, ಮತ್ತೆ ಕೆಲವು ಸಾರ್ವಭೌಮ ಸಿಂಹಾಸನವನ್ನು ಎತ್ತಿ ಹಿಡಿದಿರುವ ಶಕ್ತಿ ಬೇರೆಯೇ ಇರುತ್ತದೆ. ಅದು ಒಂದು ವ್ಯಕ್ತಿಯಾಗಿರಬಹುದು ಅಥವಾ ಸಮುದಾಯವಾಗಿರಬಹುದು. ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಬಣ್ಣಿಸಲ್ಬಟ್ಟಿಧುವ ಮೌರ್ಯ ಸಾಮ್ರಾಜ್ಯದ ಜಾತಕ ಬರೆದ ನೆನ್ನಲಾ ದ ಆಚಾರ್ಯ ಪುರುಷನೇ ಚಾಣಕ್ಯ.ಅರ್ಥಶಾಸ್ತ್ರ ಬರೆದ ಕೌಟಿಲ್ಯ, ಕಾಮಸೂತ್ರ ರಚಿಸಿದ ವಾತ್ಸ್ಯಾಯನ ಕೂಡಾ ಈತನೇ ಎಂದು ಎಷ್ಟೋ ವಿದ್ವಾಂಸರ ಅಭಿಪ್ರಾಯ. ರೋಷಾವೇಶ ಗಳಿರುವಲ್ಲಿ ಮುತ್ಸದ್ಧಿತನ, ದೂರದೃಷ್ಟಿಗಳಿರುವುದಿಲ್ಲ ಎಂಬುದು ಬಹುಮಟ್ಟಿಗೆ ನಿಜ. ಚಾಣಕ್ಕೆನಾದರೋ ಮಹಾಕೋಪಿಷ್ಠನಾಗಿದ್ದಂತೆಯೇ ಮೇಧಾವಿ ಮತ್ತು ಪರಿಣತ ರಾಜಕಾರಣಿಯಾಗಿ ಕಂಡುಬರುವುದು ಆತನ ವ್ಯಕ್ತಿ ವಿಶೇಷ.
No comments:
Post a Comment