ಯಂಡಮೂರಿ ವೀರೇಂದ್ರನಾಥರ (ಕನ್ನಡಕ್ಕೆ ಅನುವಾದ: ವಂಶಿ) "ಪ್ರಾರ್ಥನಾ" ಗಾತ್ರದಲ್ಲಿ ನಿಜಕ್ಕೂ ದೊಡ್ಡದು. ಇಂತಹ ವಿಷಯದ ಪುಸ್ತಕವನ್ನು ಓದಿದ್ದು ಇದೆ ಮೊದಲು. ನಿಜಕ್ಕೂ ಮೈ ಝುಮ್ ಎನ್ನಿಸುವ ಕಥೆಯಿದು. ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಒಂದು ಹೆಣ್ಣು ಮಗಳ ತಂದೆ ಅವಳನ್ನು ಉಳಿಸುಕೊಳ್ಳಲು ಅನುಭವಿಸುವ ನೋವುಗಳು ನಿಜಕ್ಕೂ ಮನ ಕಲಕುತ್ತದೆ. ಇಲ್ಲಿ ರಸಾಯನ ಶಾಸ್ತ್ರ, ಜೀವ ಶಾಸ್ತ್ರ ಮತ್ತು ವೈದ್ಯಕೀಯ ವಿಜ್ಞಾನದ ಸುತ್ತಾ ಕಥೆ ಹೆಣೆಯಲಾಗಿದೆ. ಕೆಲವೊಂದು ಕಡೆ ಶಬ್ಧಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇಲ್ಲಿ ಮನಸಿಟ್ಟು ಓದಿದರೆ ಮಾತ್ರ ಕೆಲವೊಂದು ವಿಷಯಗಳು ಅರ್ಥವಾಗುತ್ತವೆ . ಜೊತೆಗೆ ದುಡ್ಡಿನ ಆಸೆಗೆ ಔಷಧಿ ಕಂಪನಿಗಳು ಮಾಡುವ ಮೋಸವೂ ಇದರಲ್ಲಿ ಮುಖ್ಯವಾಗಿ ಚಿತ್ರಿಸಿದ್ದಾರೆ.
ಕ್ಯಾನ್ಸರ್ ಇಂದ ನರಳುವ ೧೨ ವರ್ಶದ ಹುಡುಗಿ ಪ್ರಾರ್ಥನಾ ಆಕೆಯ ತಂದೆ ಭಾರ್ಗವ ಒಬ್ಬ ಮೆಡಿಕಲ್ ರಿಸೆರ್ಚ್ ಮಾಡುವ ವಿಜ್ಞಾನಿ ಜೊತೆಗೆ ಒಬ್ಬ ವೈದ್ಯನೂ ಕೂಡ. ಆ ಕಾಲದಲ್ಲಿ ಕ್ಯಾನ್ಸರ್ ಗೆ ಕಂಡು ಹಿಡಿದಿರುವ ಔಷಧಿ ಅವನ ರೆಸೆರ್ಚ್ ಇಂದ ಅಕಸ್ಮಾತ್ ಆಗಿ ಕಂಡು ಹಿಡಿಯುತ್ತಾನೆ ಆ ಸಮಯದಲ್ಲಿ ತನ್ನ ಮಗಳಿಗೆ ಕ್ಯಾನ್ಸರ್ ಇರುವುದು ಇನ್ನು ಬೆಳಕಿಗೆ ಬಂದಿರುವುದಿಲ್ಲ. ಅವನು ತನ್ನ ಇನ್ಸ್ಟಿಟ್ಯೂಟ್ ವಿರುದ್ಧವೇ ತಿರುಗಿ ಬಿದ್ದು ವಾದ ಮಾಡಿತ್ತಾನೆ ಆದರೆ ಯಾರು ಅವನನ್ನು ನಂಬುವುದಿಲ್ಲ. ಇದೆ ಸಮಯದಲ್ಲಿ ತಾಯಿ ಇಲ್ಲದ ಪ್ರಾರ್ಥನಾಳ ಟೀಚೆರ್ ವಸುಮತಿ ಆಕೆಯ ಮೇಲಿನ ಅತೀಯಾದ ಪ್ರೀತಿಯಿಂದ ಹಾಗೂ ಕಾಳಜಿಯಿಂದ ಭಾರ್ಗವನ ಹೆಂಡತಿಯಾಗುತ್ತಾಳೆ. ಮದುವೆಯಾದ ದಿನವೇ ಈ ಕ್ಯಾನ್ಸರ್ ಸುದ್ದಿ ಬೆಳಕಿಗೆ ಬಂದು ಆ ಇಡೀ ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ.
ಇಲ್ಲಿಂದ ಶುರುವಾಗುತ್ತದೆ ಹೊಸ ಔಷಧಿಯನ್ನು ಕಂಡು ಹಿಡಿಯುವ ಭಾರ್ಗವನ ಧೃಡ ನಿರ್ಧಾರ... ತನ್ನ ಮಗಳು ಸತ್ತರೂ ಪರವಾಗಿಲ್ಲ ಆಕೆಯ ಮೇಲೆ ಪ್ರಯೋಗ ಮಾಡಿಯಾದರೂ ಈ ಮಾರಕ ರೋಗಕ್ಕೆ ಔಷಧಿ ಕಂಡು ಹಿಡಿದು ಕ್ಯಾನ್ಸರಿನಿಂದ ಸಾಯುವವರನ್ನು ಕಾಪಾಡಬೇಕು ಎಂದು ಕಷ್ಟಪಡುತ್ತಾನೆ. ಅವನು ಕಂಡುಹಿಡಿಯುವ ರೀತಿ ಆ ಸಮಯದಲ್ಲಿ ಅನುಭವಿಸುವ ನರಕ ಯಾತನೆ, ಕೊನೆಗೆ ಅವನು ಹೇಗೆ ವಿಜಯಿಯಾಗುತ್ತಾನೆ ಇದನ್ನೆಲ್ಲ ಈ ಪುಸ್ತಕವನ್ನು ಓದಿಯೇ ಅನುಭವಿಸಬೇಕು. ಆದರೆ ಈ ಎಲ್ಲದರ ಹೋರಾಟದಲ್ಲಿ ತನ್ನ ಮಲಮಗಳ ಪ್ರಾಣ ಉಳಿಸುವ ಸಲುವಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವಸುಮತಿಯ ತ್ಯಾಗಕ್ಕೆ ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗೆ ಈ ಪುಸ್ತಕ ಹಲವಾರು ರೀತಿಯ ವಿಷಯಗಳನ್ನು ಅಳಗೊಂಡಿವೆ. ಕೊನೆಗೆ "ಪ್ರಾರ್ಥನಾ" ಉಳಿಯುತ್ತಾಳೋ ಇಲ್ಲವೋ ಎನ್ನುವ ಕುತೂಹಲ ಕೊನೆಯ ಪುಟದವರೆಗೆ ಎಳೆದುಕೊಂಡು ಹೋಗುತ್ತದೆ .
ಇದನ್ನು ಓದಿದ ಮೇಲೆ ನನಗೊಂದು ವಿಭಿನ್ನ ಅನುಭವ ಆಗಿದ್ದು ನಿಜ.
No comments:
Post a Comment