ಜೋಗಿ ಅವರ "ದೇವರ ಹುಚ್ಚು" ಮುಗಿದು ೩ ದಿನವಾದರೂ ಕೆಲಸದ ಒತ್ತಡದಿಂದಾಗಿ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಆಗಿರಲಿಲ್ಲ. :( ಇದೊಂದು ಆಸ್ತಿಕ ಮತ್ತು ನಾಸ್ತಿಕರ ನಡುವೆ ನಡೆಯುವ ವಾದ ವಿವಾದಗಳ ಚಿತ್ರಣ ಎಂದು ಒಮ್ಮೆ ಎನಿಸಿದರೆ ಮತ್ತೊಮ್ಮೆ ಮೇಲ್ಜಾತಿ ಮತ್ತು ಕೀಳುಜಾತಿ ಎನ್ನುವ ಜಾತಿ ಪದ್ಧತಿಗಳಲ್ಲಿ ಒದ್ದಾಡುವ ಜನಗಳ ಬದುಕುವ ಚಿತ್ರಣ ಎಂದು ಎನಿಸುವುದು. "ದೇವರ ಹುಚ್ಚು" ಎನ್ನುವ ಹೆಸರೇ ನನ್ನನ್ನು ಈ ಪುಸ್ತಕ ಆಕರ್ಷಿಸಲು ಕಾರಣ.
ಈ ಕಥೆಯ ಮುಖ್ಯ ಪಾತ್ರಧಾರಿ ರಂಗನಾಥ, ರಾಜಶೇಖರ, ಅಚ್ಯುತ, ಬಾಳಣ್ಣ ಇತ್ಯಾದಿ. ಈ ಕಾದಂಬರಿಯಲ್ಲಿ ಒಟ್ಟು ೩ ಭಾಗಗಳಿದ್ದು ಮೊದಲ್ನೇ ಭಾಗದಲ್ಲಿ ರಂಗನಾಥನ ಸಾವು, ಎರಡನೇ ಭಾಗದಲ್ಲಿ ಅವನ ದೇವರ ಬಗ್ಗೆ ಇದ್ದ ವಿತಂಡ ವಾದಗಳು, ಮೂರನೇ ಭಾಗದಲ್ಲಿ ವಿಚಿತ್ರ ಎನಿಸುವ ರಂಗನಾಥನ ಸಾವಿನ ಕಾರಣಗಳು ಹೀಗೆ ಓದುಗರಿಗೂ ಕೆಲವೊಮ್ಮೆ ಹುಚ್ಚು ಎನಿಸುವಂತೆ ಈ ಕಥೆಯನ್ನು ಬರೆದಿದ್ದಾರೆ. ಈ ಕಥೆಯ ಬಗ್ಗೆ ಹೆಚ್ಚು ಬರೆಯಲು ಕಷ್ಟ ಎನಿಸುವುದು ಏಕೆಂದರೆ ಇದೊಂದು ಭಕ್ತಿ, ನಂಬಿಕೆ, ಅಪನಂಬಿಕೆ, ಜಾತೀಯತೆ ಇತ್ಯಾದಿ ವಾಸ್ತವಗಳನ್ನೇ ತುಂಬಿರುವ ಪುಸ್ತಕ. ಓದುತ್ತಾ ಹೋದಂತೆ ಕೆಲವೊಮ್ಮೆ ನೀರಸ ಎನಿಸಿದ್ದು ಉಂಟು. ಆದರೆ ಒಮ್ಮೆ ಓದಬಹುದಾದ ಒಳ್ಳೆಯ ಪರಿಕಲ್ಪನೆ ಇರುವ ಪುಸ್ತಕ ಎನ್ನುವುದು ನನ್ನ ಅಭಿಪ್ರಾಯ.
No comments:
Post a Comment