ನಿನ್ನ ನಗುವೇ ಎಷ್ಟು ಸುಂದರ
ಮನಸನ್ನೆ ನೋಯಿಸಿದರು ನೀ ನಗುವೇ
ಪ್ರೀತಿಯ ಮಳೆ ಸುರಿಸಿದರು ನೀ ನಗುವೇ
ಏನಿದು ನಿನ್ನ ನಗುವಿನ ಮಾಯೆ..????
ನಿನ್ನ ತುಟಿಯಂಚಲ್ಲಿ ಒಂದು ಕಿರುನಗೆಯ
ನಾ ಕಂಡರೆ ಸಾಕು ನನ್ನ ಮನಸು ನಲಿಯುವುದು
ಅದರಲ್ಲಿಯ ನೋವು ಮರೆಮಾಚುವುದು
ಏನಿದು ನಿನ್ನ ನಗುವಿನ ಮಾಯೆ..????
ಅರಳುತಿರುವ ಹೂವಲ್ಲಿ ಹರಿಯುತಿರುವ ನೀರಲ್ಲಿ
ನಾ ಕಾಣಲು ಪರಿತಪಿಸುವೆ ಆ ನಿನ್ನ ನಗುವ
ಕನಸಲ್ಲೂ ಕಾಡುತಿದೆ ಆ ಮುದ್ದಾದ ನಗು
ಏನಿದು ನಿನ್ನ ನಗುವಿನ ಮಾಯೆ...????
ಇರುಳ ಚಂದ್ರನಲ್ಲೂ ಕಾಣುತಿದೆ ನಿನ್ನ ಮೊಗವು
ಆ ಚಂದ್ರನಿಗೂ ಸಾಟಿಯಾಗುತ್ತಿಲ್ಲ ನಿನ್ನ ನಗುವು
ನಿನ್ನ ನಗುವಿಗೆ ನಾನೇ ಅಭಿಮಾನಿಯಾಗಿರುವೆ
ಏನಿದು ನಿನ್ನ ನಗುವಿನ ಮಾಯೆ....????