Monday, 24 September 2012

ಮಿತಿಯೇ ಇಲ್ಲದ ಪ್ರೀತಿ

ನಿನ್ನ ನಗುವನ್ನು ನನ್ನ ಬಾಳ ಬೆಳಕು ಮಾಡಿ
ನಿನ್ನ ಸ್ನೇಹದ ಕಡಲಲ್ಲಿ ಮೈಮರೆತು 
ಈಜಾಡಿ ನನ್ನ ಮನದ ನೋವನ್ನು 

ಮರೆತು ಸಂತಸವಗಿರುವ ಆಸೆ

ನಿನ್ನ ಮನದ ತಿಳಿನೀರ ಸರೋವರದಲ್ಲಿ
ನನ್ನ ಭಾವನೆಗಳ ಪ್ರತಿಬಿಂಬ ಕಂಡು
ಆ ಪ್ರತಿಬಿಂಬಕ್ಕೆ ನೀನು ಬಣ್ಣ ತುಂಬಿ ಅದರ
ರೂಪವನ್ನು ನಾನು ನೋಡುವ ಆಸೆ

ನಿನ್ನ ಕಣ್ಣಿಗೆ ನಾನು ರೆಪ್ಪೆಯಾಗಿ
ನಿನ್ನ ತುಟಿಗಳಿಗೆ ನಾನು ನಗುವಾಗಿ
ನಿನ್ನ ನೋವಿನ ಕಣ್ಣೀರಿಗೆ
ನಾನು ಅನಂದಭಾಷ್ಪವಾಗಿ ಹರಿಯುವ ಆಸೆ

ನಿನ್ನ ಕಣ್ಣಲ್ಲಿ ನಾನು ಕಂಡ ಆ ಪ್ರೀತಿ
ನನ್ನ ಮನಸಿನ ಪ್ರೀತಿಯೊಂದಿಗೆ ಮಿಲನವಾಗಿ
ನಿನ್ನ ಮನದ ಕೊಳದಲ್ಲಿ ನನ್ನ ಮನ ಹರಿದು
ಅದು ಪ್ರೀತಿಯ ಸಾಗರವಾಗಿ ಆ ಪ್ರೀತಿಯ
ಸಾಗರದಲ್ಲಿ ನಾವಿಬ್ಬರೂ ಮಿಂದು ಪ್ರೀತಿಯ
ಸಾರ್ಥಕ ಜೀವನ ಅನುಭವಿಸುವ ಆಸೆ

No comments: