ಕೆಂದುಟಿ ಅಲ್ಲಿ ಸೂಸಿದ ಹೂನಗೆಯ ಬೆರೆಸಿ
ಮಧುರ ಭಾವನೆಯ ನೋಟವನ್ನು ಮನಸಲಿ ತರಿಸಿ
ನಿನ್ನ ಹೃದಯ ತುಂಬಲಿ ಒಲವಿನ ಆಸರೆಯಲ್ಲಿ
ಅಂದದ ಮೊಗದಲ್ಲಿ ಚಂದದ ನಗುವಿರಲಿ
ನಿರ್ಮಲವಾದ ಮನಸಲ್ಲಿ ಸ್ನೇಹ ಸದಾ ಇರಲಿ
ಕಪಟವಿಲ್ಲದ ಮಾತಿನಲ್ಲಿ ಪ್ರೀತಿಯ ಛಾಯೆ ಹರಿಯಲಿ
ನಿನ್ನ ಜೀವನದ ಸುತ್ತ ಪ್ರೀತಿ ಸ್ನೇಹ ಎಂಬ
ಸುಳಿಗಳು ಸದಾ ಸುತ್ತುತ್ತಿರಲಿ
ನೋವು ಸಂಕಟ ದುಖಗಳನ್ನು
ಸಹಿಸುವ ಸಂಯಮ ಇರಲಿ
ಜೀವಕ್ಕೆ ಜೀವನಕ್ಕೆ ಉಸಿರಾಗುವ
ಬಾಳಸಂಗಾತಿ ಸಿಗಲಿ
ಸದಾ ಹರುಷದ ಹೊನಲಲ್ಲಿ
ತೇಲಲಿ ನಿನ್ನ ಜೀವನ
ಆ ನಿನ್ನ ಸಂಗಾತಿ ನಿನ್ನ ಒಲವಲ್ಲಿ
ನಿನ್ನ ಪ್ರೇಮದ ಸಾಗರದಲಿ
ಮಿಂದು ಪ್ರೀತಿಯ ಕರಗಳಲ್ಲಿ
ಕರಗಿ ಉಸಿರಿಗೆ ಉಸಿರಾಗಿ
ಕನಸಿಗೆ ನನಸಾಗಿ ಕಣ್ಣೀರಿಗೆ
ಅನಂದಭಾಷ್ಪವಾಗಿ
ದುಃಖಕ್ಕೆ ಸುಖವಾಗಿ ಬಾಳಲಿ
No comments:
Post a Comment