Saturday, 6 October 2012

ಜೀವನ ಏಕೆ ಹೀಗೆ..??

ನಾವಂದುಕೊಂಡ ಹಾಗೆ ಏನು ಆಗದು
ಇರುವ ವಾಸ್ತವವನ್ನು ಈ ಮನಸು ಒಪ್ಪದು
ಏನಿದು ಈ ಹುಚ್ಚು ಮನಸಿನ ಆಟ
ಇದು ಎಂದಿಗೆ ಕಲಿಯುವುದು ಜೀವನದ ಪಾಠ .

ಸಂಕಟದಲ್ಲಿರುವ ಮನಸಿಗೆ ಸಂತಸದಿಂದಿರುವ 
ಮನಸನ್ನು ಕಂಡರೆ ಆಗದು ಅದು ಕೇಳುವುದು 
ಈ ಜಗದಲಿ ನನಗೆ ಏಕೆ ದುಃಖ ಅನ್ಯರೆಲ್ಲ 
ಖುಷಿಯಾಗಿರುವವರಲ್ಲ ನನಗೆ ಏಕೆ ಈ ದುಃಖ 

ಆದರೆ ಆ ನೊಂದ ಮನಸಿಗೇನು ಗೊತ್ತು ಅದು 
ಅಂದುಕೊಂಡ ಅನ್ಯರಿಗೆ ತಾನೂ ಕೂಡ ಅವರಿಗೆ 
ಅನ್ಯ ಎಂದು..ಓ ಮನಸೇ ಮರುಗಬೇಡ ಇಲ್ಲಿ ಯಾರು 
ಸುಖಿಗಳಲ್ಲ ಎಲ್ಲರೂ ದುಖಿಗಳಲ್ಲ ಎಲ್ಲವು ಕ್ಷಣಿಕ ಅಷ್ಟೇ 

ನೀನರಿಯದ ಜೀವನವನ್ನು ಅರಿತು ಬಾಳಿದರೆ
ನಿನಗಿರುವುದಿಲ್ಲ ಯಾವುದೇ ದುಃಖ 
ಪರರ ಬಾಳಿಗೆ ನಿನ್ನ ಬಾಳನ್ನು ಹೋಲಿಸದೆ 
ನಿನ್ನ ಬಾಳು ಪರರಿಗೆ ಸ್ಪೂರ್ತಿಯಾಗುವಂತೆ ಬಾಳು ಮನಸೇ

ಓ ಮನಸೇ ನೀ ಬಾರದಿರುವ ಅದೃಷ್ಟಕ್ಕೆ ಕಾಯದಿರು 
ನಗುವ ನಯನವನ್ನು ಮೊಗದಲ್ಲಿ ಮನೆ ಮಾಡಿ
ಹೂ ಅರಳಿದಾಗ ಕಾಣುವ ಸೌಂದರ್ಯದಂತೆ 
ನಿನ್ನ ತುಟಿಯನ್ನು ಅರಳಿಸಿ ನಗುತಿರು ಎಂದೆಂದಿಗೂ 

ಬಾರದಿರುವದನ್ನು ಬರಿಸಲು ಸಾದ್ಯವೇ 
ಬರುವುದನ್ನು ತಪ್ಪಿಸಲು ಸಾದ್ಯವೇ 
ಈ ಸತ್ಯ ಅರಿತು ಜೀವನದಲ್ಲಿ ಎಲ್ಲರೊಂದಿಗೆ 
ಬೆರೆತು ಬಾಳಿದರೆ ಸಾರ್ಥಕವಾಗುವುದಲ್ಲವೇ ನಿನ್ನ ಜೀವನ

No comments: