ಪ್ರೀತಿಯೆಂಬ ತೈಲವೇ ಆಸರೆ
ನೆನಪಿನ ದೋಣಿಯನ್ನು ನಡೆಸಲು
ಸ್ನೇಹ ಎಂಬ ನಾವಿಕನೆ ಆಸರೆ
ಹೊತ್ತಿ ಉರಿಯುವ ಕಾಡ್ಗಿಚ್ಚಿಗೆ
ವರುಣ ದೇವನ ಕೃಪೆಯೇ ಆಸರೆ
ಭವಿಷ್ಯದ ಕನಸುಗಳಿಗೆ
ವಾಸ್ತವದ ಪರಿಶ್ರಮವೇ ಆಸರೆ
ನಕ್ಷತ್ರಗಳಿಗೆ ಆಕಾಶವೇ ಆಸರೆ
ಭೂಮಿಗೆ ಇರುಳಲಿ ಬೀಳುವ ಚಂದ್ರನ ಬೆಳಕೇ ಆಸರೆ
ಆದರೆ ಶಶಿಯೇ ನನಗೆ ನಿನ್ನ
ಬೆಳದಿಂಗಳೇ ಆಸರೆ
ಮುಗಿಲ ಕಾರ್ಮೋಡ ಕರಗಳು
ಸೂರ್ಯನ ಕಿರಣಗಳೇ ಆಸರೆ
ನನ್ನ ಮನದ ದುಗುಡ ತಿಳಿಯಾಗಲು
ನಿನ್ನ ಒಲವಿನ ಮಾತುಗಳೇ ಆಸರೆ
No comments:
Post a Comment