ನಿನ್ನ ಪ್ರೀತಿಯ ಕರೆಯೋಲೆಗೆ
ನಾನಾಗುವೆ ಹರಿಯುವ ಪ್ರೇಮಗಂಗೆ
ನಿನ್ನ ನವಿರಾದ ಸ್ನೇಹಕ್ಕೆ
ನಾನಾಗುವೆ ಸವಿನೆನಪಿನ ಕಡಲು
ನಿನ್ನ ಅಂತರಾಳದ ನೋವಿಗೆ
ನಾನಾಗುವೆ ಸಂತಸದ ಚಿಲುಮೆ
ನಿನ್ನ ಹೊರಬರದ ಧ್ವನಿಗೆ
ನಾನಾಗುವೆ ಪಿಸುಗುಡುವ ಸವಿಮಾತು
ನಿನ್ನ ಮನಸಿನ ಕನಸಿಗೆ
ನಾನಾಗುವೆ ಭಾವನೆಗಳ ನನಸು
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ
ನಾನಾಗುವೆ ಕಾವಲಿನ ನೆರಳು
No comments:
Post a Comment