Saturday, 30 June 2012

ನಿನ್ನ ನೆನಪ ಕಾಡುತಿದೆ

ಈಗಲೇ ನೆನಪಿಸಿಕೋ ಎನ್ನ ,
ನಾ ಮರೆಮಾಚಿ ಮಾಯವಾಗುವ ಮುನ್ನ .....
ಆಮೇಲೆ ವ್ಯಥೆ ಪಡಬೇಡ ಚಿನ್ನ 
ನೀ ನೆನದರೆ ಎನ್ನ ನನ್ನ ಜೀವನ ಧನ್ಯ


ಮನಸು ಬಿಚ್ಚಿ ನಾ ಹೇಳುವೆ 
ನನ್ನ ಭಾವನೆಗಳು ನೂರು 
ಆ ಸವಿನೆನಪಲ್ಲಿ ನಾ ನಿನಗಾಗಿ 
ಕಟ್ಟುವೆ ಸ್ನೇಹವೆಂಬ ತೇರು 


ನಾನು ಮನಬಿಚ್ಚಿ ಹೇಳುತೀನಿ 
ನೀನು ಕಿವಿಗೊಟ್ಟು ಕೇಳುತೀಯ 
ನಾನೊಬ್ಬಳು ಭಾವಜೀವಿ ಜೊತೆಜೊತೆಗೆ 
ನಿನ್ನ ಸ್ನೇಹಕ್ಕಾಗಿ ಕಾದಿರುವ ಸ್ನೇಹಜೀವಿ 


ತೆರೆದ ಹೃದಯದಲ್ಲಿ ನಿನಗೆ ಹೇಳುವೆ 
ಈಗಲೇ ನೆನಪಿಸಿಕೋ ಎನ್ನ ,
ಕಡೆಯದಾಗಿ ನಾ ಕಣ್ಣು ಮುಚ್ಚಿ 
ಮಣ್ಣಲ್ಲಿ ಮಣ್ಣಾಗುವ ಮುನ್ನ 
ನೀ ನೆನದರೆ ಎನ್ನ ನನ್ನ ಜೀವನ ಧನ್ಯ

2 comments:

ಜಲನಯನ said...

ತೆರೆದ ಹೃದಯ ಎಲ್ಲ ಹೇಳುತ್ತೆ... ಆದರೆ ಅದನ್ನ ಅರ್ಥ ಮಾಡ್ಕೊಳ್ಳೋ ಮನಸು ಬೇಕು...ಚನ್ನಾಗಿದೆ ಕವನ

Shwetha Hoolimath said...

dhanyavdagalu... :)