ನನ್ನ ಜೀವನದ ಪ್ರತಿ ಕ್ಷಣ
ಬಯಸುವುದು ನಿನ್ನ ಮನಸಿನ ಮಿಲನ
ನನ್ನ ಜೀವಕ್ಕೆ ಜೀವವಾಗಿರುವೆ ನೀನು
ನಿನ್ನ ಉಸಿರಿಗೆ ಉಸಿರಾಗುವೆ ನಾನು
ನಿನ್ನ ಪ್ರೀತಿಯ ಸೆಳೆತಕ್ಕೆ
ಸಿಕ್ಕಿರುವೆ ನಾನು
ನನ್ನ ಹೃದಯದ ಪ್ರತಿ ಮಿಡಿತದಲ್ಲೂ
ಬೆರೆಯಬೇಕು ನೀನು
ನಾದವ ಹೊಮ್ಮುವ ವೀಣೆಯು ನಾನಾಗಿ
ತಂತಿಯ ಮೀಟುವ ವೈಣಿಕ ನೀನಾಗಬೇಕು
ರಾಗ ತಾಳ ಭಾವ ಸೇರಿದರೆ ಬರುವ
ಅನನ್ಯ ಸಂಗೀತದಂತೆ
ನನ್ನ ನಿನ್ನ ಬಂಧನ ಅನನ್ಯ
ಅನುಬಂಧವಾಗಬೇಕು
ಮಲ್ಲಿಗೆ ಸಂಪಿಗೆ ಸೇರಿದರೆ ಬರುವ
ಅನನ್ಯ ಸುಗಂಧದಂತೆ
ಹೂವು ಶ್ರೀಗಂಧ ಬೀರುವ ಪರಿಮಳದ
ಹಾಗೆ ನನ್ನ ನಿನ್ನ ಪ್ರೀತಿಯ ಕಂಪು
ಈ ಜಗದಲ್ಲಿ ಬೀರಬೇಕು
No comments:
Post a Comment