ಮನಸೇಕೋ ಚಡಪಡಿಸುತ್ತಿದೆ ಇನಿಯ
ನೀನಿಲ್ಲವೆಂದು ನನ್ನ ಸನಿಹ
ಕಾಣಿಸದೆ ನಿನಗೆ ಈ ಅಗಲಿಕೆಯ ನೋವ
ತಡೆಯಲಾಗುತ್ತಿಲ್ಲ ನನಗೆ ಈ ಮನಸಿನ ಭಾರ
ಇನ್ನೆಷ್ಟು ದಿನ ಕಾಯಲಿ ನಿನಗೆ ನಾನು
ನಿನ್ನನ್ನು ಕನವರಿಸುತ್ತಲೇ ಜೀವನ ಸವಿಸಲೇ ನಾನು
ಮಾತಿಲ್ಲದೆ ಮೌನವಾದರೆ ನನ್ನ ಕಂಬನಿ ನಿಲ್ಲುವುದೇ
ಹೀಗೇಕೆ ಕೊಲ್ಲುತಿರುವೆ ನೀ ನನ್ನ
ಭಾವನೆಗಳ ಲೋಕದಲ್ಲೇ ಬದುಕುತಿರುವೆ ನಾನು
ನಿನ್ನ ಪ್ರತಿಸ್ಪಂದನವನ್ನು ಕಾಯುತ್ತ
ಆದರೆ ಈ ನಿನ್ನ ಮೌನವನ್ನು ಹೇಗೆ ಸಹಿಸಲಿ
ನಿನ್ನ ಹೃದಯಕ್ಕೆ ಅರ್ಥವಾಗುತ್ತಿಲ್ಲವೇ ನನ್ನ ವೇದನೆ
ಬರಿದಾದ ನನ್ನ ಬಾಳಲೀ ಪ್ರೀತಿಯ ಸುಖವನ್ನು
ನೀನೇಕೆ ತಂದೆ ಆ ಪ್ರೀತಿಯ ಆನಂದವನ್ನು ಅನುಭವಿಸುವ
ವೇಳೆಗೆ ನೀನೇಕೆ ಮತ್ತೆ ನನ್ನಿಂದ ದೂರವಾಗುತ್ತಿರುವೆ
ನನ್ನ ಭಾವನೆಗಳಿಗೆ ನಿನ್ನಲ್ಲಿ ಬೆಲೆಯೇ ಇಲ್ಲವೇ
ನೀನಿಲ್ಲದ ನನ್ನ ಬಾಳು ಕಲ್ಪನೆಗೂ ಎಟುಕದು
ಆಗದು ಗೆಳೆಯ ನೀನಿರದೇ ನಾನು ಬಾಳಲು
ಈಗಲೇ ನೆನಪಿಸಿಕೊ ನನ್ನ
ನಾನು ಮಣ್ಣಲ್ಲಿ ಮಣ್ಣಾಗುವ ಮುನ್ನ
No comments:
Post a Comment