ಹಾರಾಡುವ ಹಕ್ಕಿಯಂತೆ ನಾನಿದ್ದೆ
ಬೆಳ್ಳಿ ಮೋಡದಂತೆ ತೇಲುತಿದ್ದೆ
ಪ್ರೀತಿ ಪ್ರೇಮದ ಬಂಧನಕ್ಕೆ ಸಿಲುಕದೆ
ಸ್ವಚ್ಚಂದವಾಗಿ ಸಂಚರಿಸುತ್ತಿದ್ದೆ
ಏನು ಮೋಡಿ ಮಾಡಿದೆಯೋ ನೀನು
ನಿನ್ನ ಒಲವಿನ ಬಲೆಯಲ್ಲಿ ಬಂಧಿಯಾದೆ ನಾನು
ನನ್ನ ಜೀವ ಮತ್ತು ಜೀವನದ ಪ್ರತಿಕ್ಷಣಕ್ಕೂ
ಉಸಿರಾಗುತ್ತಾ ಮೈಮನಗಳ ಆವರಿಸಿದೆ ನೀನು