Tuesday, 26 February 2013

ನೆನಪು


ಇಂದೇಕೋ ಕಾಡುತಿದೆ 
ನಿನ್ನ ನೆನಪು ಬಹಳ 
ಮರೆಯಬೇಕೆಂದರೂ ಮರೆಯಲು 
ಆಗುತ್ತಿಲ್ಲ ನಿನ್ನ ಒಲವ 

ಏಕೆ ಹೀಗೆ ಕಾಡುತಿದೆ ಈ ನೆನಪು 
ಕಾಣುತಿದೆ ಕೇವಲ ನಿನ್ನ ನಗೆಯ ಹೊಳಪು 
ಕಪ್ಪು ಮೋಡ ತುಂಬಿರುವ ಆಕಾಶದಂತೆ 
ನಿನ್ನ ಪ್ರೀತಿಯಿಂದಲೇ ತುಂಬಿರುವ ನನ್ನ ಮನಸಾಗಿದೆ 

ಕಾರ್ಮೋಡ  ಕರಗಿದರೆ ಬಾನು ಸುಂದರ 
ಹೊಳೆಯುವುದು ಭೂಮಿ ಫಳ  ಫಳ 
ನಿನ್ನ ಒಲವಲ್ಲಿ ನನ್ನ ಬದುಕು ಬೆರೆತರೆ 
ಮಿಂಚುವುದು  ನನ್ನ ಮನಸು ಥಳ ಥಳ 

ಆ ಭೂಮಿ ಬಾನುವಿನಷ್ಟು ನಾವು 
ದೂರವಿದ್ದರೂ ಚಿಂತೆ ನನಗಿಲ್ಲ 
ನಿನ್ನ ಪ್ರೇಮದ ಸವಿನೆನಪೇ ಸಾಕೆನಗೆ 
ಅದರಲ್ಲೇ ಸಾಗಿಸುವೆ ನನ್ನ ಬದುಕೆಲ್ಲ 



ಅಗಲಿಕೆಯ ನೋವು


ನಿನ್ನ ಅಗಲಿಕೆಯ ಅರಗಿಸಿಕೊಳ್ಳಲಾರೆ  
ಏನು ಮಾಡಲಿ ಹೇಳು ಈ ನೋವ ಮರೆಯಲು 

ಕಣ್ಮುಚ್ಚಿದರೂ ನೀನೆ ಕಣ್ತೆರೆದರೂ  ನೀನೆ 
ಕಣ್ಣೇರು ಬಂದರೂ ಅಳಲು ಭಯವಾಗುತ್ತಿದೆ 
ಕಣ್ಣಲ್ಲೇ ತುಂಬಿರುವ ನೀನು ಅತ್ತರೆ ಎಲ್ಲಿ ನನ್ನಿಂದ 
ಜಾರಿ ಹೋಗುವೆಯೋ ಎಂಬ ಭಯ ನನಗೆ 

ಪ್ರೀತಿಯೆಂಬುದು ಪವಿತ್ರ ಬಂಧನವಾಗಿರಬೇಕೇ 
ಹೊರತು ಪ್ರೀತಿಸುವ ಮನಸನ್ನು ಕೊಲ್ಲಬಾರದು  
ಎರಡು ಮನಸುಗಳ ಮಿಲನವೇ  ಪ್ರೇಮ 
ಆ  ಮನಸುಗಳ  ಅಗಲಿಕೆಯೇ ನೋವಿನ ಹೋಮ 

ನಿನ್ನ ಪ್ರೀತಿಯ ಬಂಧನದಲ್ಲೇ ಬಾಳಿಸು ನನ್ನ ಹೀಗೆ 
ದೂರಾಗಿ ನೋವಿನ ಹೋಮದಲ್ಲಿ ಬೇಯಿಸದಿರು ನನ್ನ 
ತಾಳೆನು ಇನಿಯ ಬೇಡೆನಗೆ ಈ ಅಗಲಿಕೆಯ ನೋವು 
ಕಾಯುತಿರುವೆ ಯಾವಾಗ ಬರುವುದೋ ನನ್ನ ಸಾವು 

ಏನು ಮಾಡಲಿ ಹೇಳು ಈ ನೋವ ಮರೆಯಲು 
ಪ್ರಾರ್ಥಿಸುವೆ ಆ ನಿನ್ನ ದೇವರಿಗೆ ನಾ ಬೇಗ ಸಾಯಲು 



Monday, 25 February 2013



ತಂಪಾಗಿ ಮಳೆಸುರಿದಾಗ ಧರೆಯಲ್ಲಿ
ಮೂಡಿತೊಂದು ಮಂದಹಾಸ ಮುಖದಲ್ಲಿ
ಬೆಳೆಯುವ ರೈತನ ಹರುಷಕ್ಕೆ ಪಾರವೆಲ್ಲಿ
ಸುಖವಾಗಿ ಬಾಳುವನು ಭೂತಾಯಿಯ ಮಡಿಲಲ್ಲಿ

Friday, 22 February 2013

ಸ್ನೇಹದ ಸಂಕೋಲೆ


ನಿನ್ನ ನಯನದಲ್ಲಿ ಕಂಡ ಆ ನಗುವೇ 
ನನಗಿಂದು ಹೇಳುತಿದೆ ನಗುತ ನಲಿಯೆಂದು  
ಮನದಲ್ಲಿ ಅಡಗಿದ್ದ ಸಾವಿರ ನೋವನ್ನು 
ಮರೆಸಿದೆ ಆ ನಿನ್ನ ಪ್ರೀತಿ ತುಂಬಿದ ಕಂಗಳು 

ಹೃದಯಾಂತರಾಳದಲಿ ಹುದುಗಿದ್ದ 
ನೋವಿನ ಕಡಲಲ್ಲಿ ನಿನ್ನ ಸಾಂತ್ವನದ  
ಅಲೆ ಬೀಸಿದೆ ನೋವಿನ ಬಿರುಗಾಳಿಯ 
ಸಂತಸದ ತಂಗಾಳಿಯನ್ನಾಗಿ ಮಾಡಿದೆ 

ಅದೆಂತಹ ಸ್ನೇಹ ಭಾವ ನಿನ್ನದು 
ಜೀವನವೆಲ್ಲ ನೋವನ್ನುಂಡ ನನಗೆ 
ಕ್ಷಣದಲ್ಲೇ ಸಂತಸದ ಸಿಹಿ ಉಣಿಸಿದೆ 
ಬದುಕನ್ನೆಲ್ಲ ನಿನ್ನ ಸ್ನೇಹದಲ್ಲೇ ಬೆರೆಸಿದೆ 

ನನ್ನ ನಿನ್ನ ಸಂಬಂಧಕ್ಕೆ ಏನೆಂದು ಹೆಸರಿಡಲಿ  
ಪ್ರೀತಿ ಪ್ರೇಮವ ಮೀರಿದ ಈ ಪವಿತ್ರ ಬಂಧನಕ್ಕೆ   
ಬೇರೇನು ಬೇಡೆನು ನಾ ನಿನಗೆ 
ನಿನ್ನ ಸ್ನೇಹದ ಸಂಕೋಲೆಯೇ  ಸಾಕೆನಗೆ 

Friday, 15 February 2013

ಬಂಧನ



ನೀ ಬಂದ ಕ್ಷಣದಿಂದ  ಮನಸಲ್ಲಿ 
ಒಲವೆಂಬ ಜಲಪಾತವು ಹರಿಯುತ್ತಿದೆ 
ಅದರಲ್ಲಿ ಈಜಲು ಮನವು  ತುಡಿಯುತ್ತಿದೆ 
ಕಾಮನಬಿಲ್ಲಿನಂತ  ನಿನ್ನಂದ ಕಾಡುತ್ತಿದೆ 

ಯಾರನ್ನು ಬಯಸದ ಮನದಲ್ಲಿ ನಿನ್ನ ಆಗಮನ 
ಆಗುತ್ತಿದೆ ಸುಂದರ  ಆಸೆ ಕನಸುಗಳ ಉಗಮ 
ಸುಮಗಳು ನಕ್ಕಂತೆ ಬಳ್ಳಿಗಳು ಬಳಕುವಂತೆ 
ನನ್ನ ಮನಸಿಂದು ನಗುತ್ತಿದೆ ನಿನ್ನತ್ತ ಬಳಕುತ್ತಿದೆ 

ಏನೆಂದು ವರ್ಣಿಸಲಿ ನಾ ನಿನಗೆ ಈ 
ಸುಂದರ ಭಾವನೆಯ ಪದಗಳೇ ಸಿಗದು 
ಕ್ಷಣದಿಂದ ಕ್ಷಣಕ್ಕೆ ಉಸಿರಲ್ಲಿ ಬೆರೆಯುತ್ತಿರುವೆ 
ನಿನ್ನ ಪ್ರೇಮದಲ್ಲಿ ನನ್ನ ಬದುಕು ಹೂವಾಗುತ್ತಿದೆ 

ನನ್ನ ಮೌನವು ಮಾತಾಗಿ ಹೇಳುವ ಮುನ್ನ 
ಸ್ವೀಕರಿಸು ನೋಟದಲ್ಲೇ ಹಾಡುವ ಭಾವನೆಯನ್ನ 
ಕಣ್ತುಂಬ ನೀನೆ ತುಂಬಿರುವ ನನಗೆ ದಾರಿ ತೋರಿ 
ನಿನ್ನ ಬದುಕಲ್ಲೇ  ನನ್ನ ಬಂಧಿಸು ಓ ನನ್ನ ಒಲವೇ 










Thursday, 14 February 2013

ನಿನಗೊಂದು ಬಿನ್ನಹ

ಮನಸಲ್ಲೇ ನಿನ್ನಲ್ಲಿ ಮಾತಾಡಿ 
ಕನಸಲ್ಲಿ ಅರಳಿದ ಅನುರಾಗವ ಹಂಚುವೆ 
ನಾ ಅನುಭವಿಸುವ ಏಕಾಂತದಲ್ಲಿ ನಿನ್ನ 
ಸವಿನೆನಪುಗಳ ಅಲೆಯೊಂದಿಗೆ ಆನಂದಿಸುವೆ 

ಎಲ್ಲಿಂದಲೋ ಅಲೆಯುತ್ತ  ನಿನ್ನ ದಾರಿಯ 
ಮರೆತು ನನ್ನ ಹೃದಯದಲ್ಲಿ ಬಂದು ನೆಲೆಸಿರುವೆ 
ನಾ ಎಲ್ಲೇ ನಡೆದರೂ ಎಲ್ಲೇ ಹೋದರು 
ನಿನ್ನ ಪಿಸುದನಿಯ ಕೇಳುತಿರುವೆ 

ಸದ್ದಿಲ್ಲದೇ ಬಂದು ಮನಸಲ್ಲೇ ಮನೆ ಮಾಡಿದ ನಿನ್ನ
ನನ್ನ ಎದೆಗೂಡಲಿ ಪ್ರೀತಿಯಿಂದ ಬಚ್ಚಿಡುವೆ  
ಮೌನವಾಗಿ ಹುಟ್ಟಿದ ನನ್ನ ಪ್ರೇಮದ ಕಾವ್ಯವ 
ನಿನಗೆಂದೇ ನಾ ಹಾಡಲು ಕಾದಿರುವೆ 

ಮೈಮನಗಳ ಆವರಿಸಿರುವ ನಿನಗೆ 
ಪ್ರೀತಿಯ ಬಿನ್ನಹ ತಲುಪಿಸುವ ಕಾತರ ನನಗೆ 
ನಿನ್ನ ಹೃದಯಕ್ಕೆ ನಾನು ಬಡಿತವಾಗುವ ಆ 
ಸುಮಧುರ ಕ್ಷಣಕ್ಕಾಗಿ  ಕಾಯುತಿರುವೆ  

Wednesday, 13 February 2013

ಪ್ರೀತಿಯ ದಿನ



ಬಂದೇ  ಬಿಟ್ಟಿತು ಪ್ರೇಮಿಗಳ ದಿನ 
ಎಲ್ಲರ ಮನದಲ್ಲಿ ಒಂಥರ  ರೋಮಾಂಚನ  

ಪ್ರೀತಿಸುವ ಮನಸುಗಳ ಮಿಲನ 
ಒಲವ ಸುಧೆಯ ಹರಿಸಲು ಕಾತರ 

ಸುಂದರ ಹೂಗಳ ತೋರಣ 
ಮನದಿಂದ ಮನಕ್ಕೆ ಪ್ರೀತಿಯ ಸಂಚಲನ 

ಆಹಾ ಏನು ಪ್ರೀತಿಯೋ ಏನು ಪ್ರೇಮವೋ 
ಅಗಲಿ  ನಿಮ್ಮ ಒಲವಿನ  ಶುಭಮಿಲನ 

ದೇವರು ಕೊಟ್ಟ ಈ ಪ್ರೀತಿ ಎಂಬ 
ಸುಂದರ ಉಡುಗೊರೆಗೆ  ನನ್ನದೊಂದು ನಮನ 



Friday, 8 February 2013

ಪ್ರೀತಿಯ ಸೆಳೆತ

ಒಲವಿನ  ಮಳೆಯ ಸುರಿಸಲು 
ಓಡಿ ಬರುವೆ ನೀನು 
ನಿನ್ನ ಪ್ರೀತಿಯ ಮಳೆಯಲಿ 
ನೆನೆಯಲು ಕಾದಿರುವೆ ನಾನು 

ಕಡಲ ಮುತ್ತುಗಳ ತಂದು 
ಪೋಣಿಸಿ ಕೊಡುವೆ ನೀನು 
ನಿನ್ನ ಕೈಯ ಹಾರವೇ 
ಸಾಕೆಂದು ಇರುವೆ ನಾನು 

ಪ್ರೇಮದ ಕಾದಂಬರಿಯ 
ಬರೆಯೆಂದು  ಹೇಳುವೆ ನೀನು 
ಪ್ರೀತಿ ತುಂಬಿದ ಕವನಗಳ 
ಗೀಚುತ್ತಿರುವೆ ನಾನು 

ಸ್ನೇಹದ ಕಡಲನ್ನು ತುಂಬಿ 
ಹರಿಸುತ್ತಿರುವೆ ನೀನು 
ಪ್ರೀತಿಯ ಕುಡಿಯ ಬೆಳೆಸಿ ಪ್ರೇಮದ 
ಕಾರಂಜಿಯ ಹರಿಸುವೆ ನಾನು 

Tuesday, 5 February 2013

ತಳಮಳ

ನೀ ಆಡಿದ ಆ ಮಾತು 
ನನಗಾಯಿತು ಸ್ವಾತಿಮುತ್ತು 
ನೀ ನೋಡಿದ ಆ ನೋಟ 
ನನಗಿಂದು ಕೊಡುತಿದೆ ಕಾಟ 
ಓ ನನ್ನ ಪ್ರೀತಿಯೇ ನನಗೆ 
ಎಂದು ದಕ್ಕುವೆ ನೀನು...?????????

ನಿನ್ನ ಪ್ರೀತಿಯ ಮೋಡಿಗೆ
ಸಿಕ್ಕಿಬಿದ್ದೆ ನಾನು
ನಿನ್ನ ಮನಸ್ಸಿನ ಮೂಲೆಯಲ್ಲಿ
ಇದ್ದು ಬಿಡಲೇ ನಾನು..??????

ಸಿಕ್ಕ ಪ್ರೀತಿಯನ್ನು ಬಿಟ್ಟು
ಸಿಗದೇ ಇರುವದನ್ನು ಹುಡುಕಿ
ಕೊನೆಗೆ ಸಿಗುವುದನ್ನು ಕಳೆದುಕೊಂಡು
ಕಳೆದುಹೋದ ಪ್ರೀತಿಯ ಬೆಲೆಯನ್ನು
ಅಳೆಯುವುದು ನ್ಯಾಯವೇ.
ಓ ನನ್ನ ಪ್ರೀತಿಯೇ....?????

ಕವನಕ್ಕೆ ಸ್ಪೂರ್ತಿ

ಸೂರ್ಯನಂತೆ ಪ್ರಕಾಶಿಸುವ 
ಚಂದಿರನಂತೆ ನಗುವ 
ತಾರೆಯಂತೆ ಮಿನುಗುವ 
ಹೂವಿನಂತೆ ಕೋಮಲವಾದ 
ಆಕಾಶದಂತೆ ವಿಶಾಲವಾದ
ನಿಮ್ಮೆಲ್ಲರ ಸ್ನೇಹ ಮತ್ತು ಪ್ರೋತ್ಸಾಹವೇ 
ನನ್ನ ಕವನಗಳಿಗೆ ಸ್ಪೂರ್ತಿ

ಚಂಚಲ ಮನಸು

ಈ ಮನಸು ಚಂಚಲ 
ಆಯಿತು ಅಲ್ಲಿ ಒಂದು ಸಂಚಲನ 
ಚಂಚಲಕ್ಕು ಸಂಚಲನಕ್ಕು ಏನು 
ವ್ಯತ್ಯಾಸ ಎಂದು ತಿಳಿಯುವ ಹೊತ್ತಿಗೆ 
ಆಯಿತು ಒಂದು ಭೂಕಂಪನ 
ಇನ್ನು ಹೇಗೆ ನಡಿಯುವುದು ಜೀವನ ...???????

ಈ ಮನಸಿನ ಭಾವನೆಗಳ ಲೋಕದಲ್ಲಿ
ಇರುವುದು ನೂರಾರು ಭಾವನೆಗಳು
ಆದರೆ ಅವುಗಳಿಗಿಲ್ಲ ಪ್ರತಿಸ್ಪಂದನಗಳು
ಈ ಮನಸು ಬಯಸುವುದು ಒಂದು
ಸಾಂತ್ವನ ನೀಡುವ ಮನಸನ್ನು
ಕರಗುವ ಮನಸಿಗೂ ಕೊರಗುವ ಮನಸಿಗೂ
ಸಿಗುವುದೇ ಮರಗುವ ಮನಸು...????

ಕನಸಲ್ಲಿ ಕಂಡದ್ದು ಮನಸಲಿ ಬರುವುದೋ
ಮನಸಲ್ಲಿ ಬಂದಿದ್ದು ಕನಸಲ್ಲಿ ಕಾಣುವೆವೋ
ತಿಳಿಯದು ಆದರೆ
ಈ ಮನಸು ಕನಸುಗಳ ಮಧ್ಯೆ ಸಿಲುಕಿದ
ನಮ್ಮ ಜೀವನಕ್ಕೆ ಬೇಕೊಂದು
ಅರ್ಥಪೂರ್ಣವಾದ ಒಂದು ಸೂರು ಅಲ್ಲವೇ..????

ಅಮ್ಮ

ಇರುಳ ಸವಿನಿದ್ದೆಯಲ್ಲಿದ್ದೆ ನಾನು 
ಲಾಲಿಯ ಸಿಹಿಗಾಳಿ ಬೀಸುತಿದ್ದೆ ನೀನು 
ಆ ಕ್ಷಣದಲ್ಲಿ ಕಂಡೆ ಒಂದು ಕನಸನ್ನು ನಾನು 
ಆ ಕನಸಲ್ಲಿ ನಿನ್ನ ಮಡಿಲಲ್ಲಿ ಮಗುವಾಗಿ ಮಲಗಿದ್ದೆ 
ಆಹಾ ಎಂತಹ ಪ್ರೀತಿ ಕಂಡೆ ನಿನ್ನ ಕಂಗಳಲ್ಲಿ 
ಎಂತಹ ರೋಮಾಂಚನ ನಿನ್ನ ಸ್ಪರ್ಶದಲ್ಲಿ
ಎಂತಹ ಆನಂದ ನಿನ್ನ ಪ್ರೀತಿಯಲ್ಲಿ
ನಿನ್ನ ಮಡಿಲಲ್ಲಿ ಹಾಗೆ ಕೊನೆಯವರೆಗೂ
ಮಲಗಬೇಕು ಎಂಬ ಆಸೆ ನನ್ನದು
ಮತ್ತೆ ಮಗುವಾಗಿ ನಿನ್ನ ಮಡಿಲು ಸೇರಿ
ನಿನ್ನ ಪ್ರೀತಿಯನ್ನು ಅನುಭವಿಸಬೇಕೆಂಬ
ಕನಸು ನನ್ನದು ಅಮ್ಮ...
ನಿನ್ನ ಪ್ರೀತಿಗೆ ಸಾಟಿಯುಂಟೆ...???????
ಮನಸ್ಸಿನ ಕನ್ನಡಿಯ ಮುಂದೆ 
ಎಲ್ಲರೂ ಸುಂದರ 
ಗಾಜಿನ ಕನ್ನಡಿಯ ಮುಂದೆ 
ಕೆಲವರು ಸುಂದರ 

ದೇವರ ಸೃಷ್ಟಿಯಲ್ಲಿ
ಎಲ್ಲರೂ ಒಂದೇ
ಆದರೆ ಮನುಷ್ಯರ ಮಧ್ಯ
ಕೆಲವರು ಹಿಂದೆ ಮುಂದೆ

ಪ್ರೀತಿಯ ಅಪ್ಪ ಅಮ್ಮನಿಗೆ
ಎಲ್ಲ ಮಕ್ಕಳು ಒಂದೇ
ಆದರೆ ಕೆಲವು ಮಕ್ಕಳಿಗೆ
ದುಡ್ಡು ಮಾತ್ರ ಕಾಣುವುದು ಮುಂದೆ

ಈ ಒಂದೇ ಹಿಂದೆ ಮುಂದೆ
ಮೇಲು ಕೀಳು ಭಾವಗಳ
ಮಧ್ಯೆ ನಮ್ಮ ಬದುಕು ಯಶಸ್ವಿಯಾಗಿ
ಸಾಗುವುದೇ ಮುಂದೆ.....????????

ಓಲೆ


ನಾ ಬರೆದಿರುವೆ ನಿನಗಾಗಿ ಒಂದು ಓಲೆ ಅದನ್ನು ಓದಿ ನೋಡು ನೀ ಬಾಲೆ ಅಲ್ಲಿರುವುದು ನನ್ನ ಭಾವನೆಗಳ ಅಲೆನನಗೆ ಗೊತ್ತು ನಿನಗಿದೆ ನನ್ನ ಅರ್ಥಮಾಡಿಕೊಳ್ಳುವ ಕಲೆ ಅದಕ್ಕಾಗಿಯೇ ನೀ ಕಳಿಸು ನನಗೊಂದು ನಿನ್ನ ಮನಸಿನ ಕರೆಯೋಲೆ


ಅಮ್ಮ

ಅಳುವ ಕಂದನ ನೋಡಿದರೆ 
ಮುನಿಯುವಳೇ ಅಮ್ಮ 


ನಗುವ ಹೂವ ನೋಡಿದರೆ 
ಬಾಡುವುದೆ ಬಳ್ಳಿ 


ಸಿಡಿಲಿನ ಆರ್ಭಟಕ್ಕೆ
ಬೆದರುವಳೇ ಭೂತಾಯಿ 


ಕರುವಿನ ಅಂಬಾ ಆರ್ತನಾದಕ್ಕೆ
ಕರಗದಿರುವುದೇ ಹಸುವು 


ಓ ಅಮ್ಮ ನಿನ್ನ ಎಷ್ಟು ಕೊಂಡಾಡಿದರೂ
ಬಣ್ಣಿಸಿದರೂ ಸಾಲದಮ್ಮ....


ನಿನಗಿಂತ ಮಿಗಿಲಾದ ದೇವರ ಕಾಣೆ
ನಿನಗಿದೋ ಕೋಟಿ ನಮನ ಅಮ್ಮ....

ಆನಂದ


ಕಲ್ಪನೆಯ ಕನಸಲ್ಲಿ
ಜೀವನದ ಮನಸು ಬೆರೆತರೆ
ಎಂತಹ ಆನಂದ

ಪ್ರಕೃತಿಯ ಮಡಿಲಲ್ಲಿ
ಸಿಡಿಲಿನ ಅರ್ಭಟ ಅಡಗಿದರೆ
ಎಂತಹ ಆನಂದ

ಹಾಲಿನ ಹೊಳೆಯಲ್ಲಿ
ಜೇನಿನ ಮಳೆ ಸುರಿದರೆ
ಎಂತಹ ಆನಂದ

ಈ ಅರಿತು ಬೆರೆತು ಬಾಳುವ
ಸಂಬಂಧ ನಮ್ಮದಾದರೆ
ಆಹಾ ಎಂತಹ ಆನಂದ....!!!!!!!!!!

ಬದುಕಿನ ಮಾಯೆ

ಕಣ್ಣಿನ ನೋಟಕ್ಕೂ ಹೃದಯದ 
ಭಾವಕ್ಕೂ ಎತ್ತನಿಂದೆತ್ತ ಸಂಬಂಧ...??????
ಮನಸಿನ ಮಾತಿಗೂ ಕನಸಿನ 
ಕಲ್ಪನೆಗೂ ಎತ್ತನಿಂದೆತ್ತ ಸಂಬಂಧ...??????

ಮನಸು ನೊಂದರೆ ಕಣ್ಣಲ್ಲಿ
ನೀರು ಬರತ್ತೆ
ಸವಿಗನಸು ಕಂಡರೆ
ಮನಸಿಗೆ ಸಂತಸವಾಗತ್ತೆ

ಮನಸನ್ನು ಕಂಡವರಿಲ್ಲ
ಕನಸನ್ನು ಕಾಣದವರಿಲ್ಲ
ಆದರೂ ಇವೆರಡರ ಬಂಧ
ನಮ್ಮನ್ನು ಎಂದೂ ಬಿಡದ ಅನುಬಂಧ

ಏನಿದು ಬದುಕಿನ ಮಾಯೆ.....???????

ಮೋಹ


ಇರುಳ ಕತ್ತಲೆಯಲ್ಲಿ ಹೇಗೆ 
ಹುಡುಕಲಿ ನಿನ್ನ ನೆರಳನ್ನು 

ಮನ ಸಾಗರದ ಪ್ರಳಯದಲ್ಲಿ ಹೇಗೆ 
ಹುಡುಕಲಿ ಪ್ರೀತಿಯ ಮುತ್ತನ್ನು 

ತತ್ತರಿಸುವ ಬಿರುಗಾಳಿಯ ಭಯದಲ್ಲಿ
ಹೇಗೆ ಬಯಸಲಿ ತಂಗಾಳಿಯನ್ನು

ಕಾರಿರುಳು ಕಳೆದು ಹೊಸ ಉದಯ ಮುಡಿ
ಕಡಲು ಶಾಂತವಾಗಿ ತೆಳು ಆಲೆಯು ಕಾಡಿ

ಬಿರುಗಾಳಿ ಹೋಗಿ ತಂಗಾಳಿ ಬಂದರೂ
ನನ್ನೀ ನೆನಪಿನ ಸೆಲೆ ಕಾತರ ನಿನಗಾಗಿಯೇ

ನಿನ್ನ ಜೊತೆಯನ್ನು ಬಯಸುವೆ
ನಿನ್ನ ಸಹಚಾರಿಣಿಯಾಗಿರುವೆ

Sunday, 3 February 2013

ಅವಳ ಇವನು

ಅವಳ  ಗೆಜ್ಜೆಯ ನಾದಕೆ 
ಇವನು ಹೆಜ್ಜೆಯ ಹಾಕುತ್ತ 
ಬೆನ್ನು ಬಿಡದ ನೆರಳ ಹಾಗೆ ಸಾಗಿದ 

ಅವಳು ನುಡಿಯದ ವಾಣಿಗೆ  
ಇವನು ದನಿಯಾಗಿ ಪೋಣಿಸಿದ  
ಮಾತಿನ ಮುತ್ತುಗಳನ್ನ 

ಅವಳು ನಾದವ ಹೊಮ್ಮವ ವೀಣೆ 
ಇವನು ತಂತಿಯ ಮೀಟುವ ವೈಣಿಕ 
ಸುರಿಸಿದ ಮಧುರ ನಾದದ ಮಳೆಯ 

ಅವಳ ಮುಗ್ಧ ಕಂಗಳ ಚೆಲುವ ಕಂಡು 
ಇವನಾದನು ಆಕೆಯ ಪ್ರೀತಿಯ ಗೆಳೆಯ 
ಇಬ್ಬರು ನೆನೆದರು ಒಲವಿನ ಮಳೆಯಲಿ 

ಚಿಗುರೊಡೆಯಿತು ಪ್ರೀತಿಯ ಬಳ್ಳಿ
ವರ್ಣಿಸಲು  ಪದಗಳೇ ಸಿಗಲಾರದು  
ಅವಳ ಇವನ ಅನನ್ಯ ಅನುಬಂಧ


ಜೀವನ 
************************
ಸ್ನೇಹ ಎಂಬುದು ಅಮರ 
ಪ್ರೀತಿ ಎಂಬುದು ಮಧುರ 
ಸುಖ ಎಂಬುದು ಕ್ಷಣಿಕ 
ದುಃಖ  ಎಂಬುದು ಅಲ್ಪ 
ಆದರೆ ಇವೆಲ್ಲವುಗಳ ಮಿಶ್ರಣ 
ಎಂಬ ಜೀವನವೇ ಶಾಶ್ವತ 

ಅಮ್ಮ 
*************
ಅನ್ನ  ನೀಡುವ ಅಮ್ಮ ಭೂಮಿಯಮ್ಮ 
ಮಾತು ಕಲಿಸುವ ಅಮ್ಮ ಕನ್ನಡವಮ್ಮ 
ದಾಹ ನೀಗುವ ಅಮ್ಮ ಕಾವೇರಮ್ಮ 
ಇಂತಹ ಅಮ್ಮಂದಿರ ಪಡೆದ 
ನಾವೇ ಪುಣ್ಯವಂತರಮ್ಮ 

ಪ್ರೀತಿ 
************
ಬಾಳಲ್ಲಿ ಇರಬೇಕು ಪ್ರೀತಿ 
ಅದೇ ಬಾಳಿಗೆ ಸ್ಪೂರ್ತಿ 
ಬಾಳಲ್ಲಿ ಇದ್ದರೆ ಪ್ರೀತಿ 
ಆಗುವುದು ನಮ್ಮ ಬಾಳು ನಿರ್ಭೀತಿ 

ಸ್ನೇಹ ಪ್ರೀತಿ 
***************
ಸ್ನೇಹಕ್ಕೆ ಶರಣಾಗದವರಿಲ್ಲ 
ಪ್ರೀತಿಗೆ ಸೋಲದವರಿಲ್ಲ 
ಸ್ನೇಹ ಪ್ರೀತಿ ಅನುಭವಿಸುವವರ 
ಬಾಳು  ಹಸನಾಗದಿರುವುದಿಲ್ಲ 

ಪ್ರೀತಿಯ ಹುಡುಕಾಟ 
************************
ಹುಡುಕುತ್ತ ಹೋದೆ ನನ್ನ ಪ್ರೀತಿಯನ್ನು 
ಅದು ಸಿಗುವ ಲಕ್ಷಣ ಇಲ್ಲ ನನಗಿನ್ನೂ 
ಆದರೆ ಬಿಡುವುದಿಲ್ಲ ನನ್ನ ಪ್ರೀತಿಯನ್ನು 
ಆ ಪ್ರೀತಿ ಸಿಗುವುದೇ ನನಗಿನ್ನೂ ...?????