Monday, 27 January 2014

ಶುಭೋದಯ

ಚಂದದ ಮನೆಯ ಅಂಗಳದಲ್ಲಿ ಮುದ್ದಾದ 
ರಂಗೋಲಿಯ ಬಿಡಿಸುತ್ತಾ  
ಇಬ್ಬನಿಯ ಹನಿಗಳಿಂದ ಅಲಂಕೃತಗೊಂಡ 
ಹೂಗಳ ಬಿಡಿಸುತ್ತಾ 
ಬಂಗಾರದ ನೀರನ್ನು ಆಗಸದಲ್ಲಿ ಸುರಿಸಿದ 
ನೇಸರನ ಪೂಜಿಸುತ್ತಾ 
ಅರುಣೋದಯವನ್ನು ಆಸ್ವಾದಿಸುತ್ತಾ 
ಹೇಳಬಯಸುತ್ತಿದೆ ಈ ಮನಸು ಶುಭೋದಯ 

1 comment:

Badarinath Palavalli said...

ಶುಭೋದಯವನ್ನು ಸಾದೃಶ್ಯ ಮಾಡಿಬಿಟ್ಟಿರಿ :)