Friday, 3 January 2014

ಪ್ರೇಮಗೀತೆ

ಭಾವನೆಗಳೇ ಇಲ್ಲದ ಮನದಲ್ಲಿ ಭಾವಗೀತೆಯಂತೆ 
ಹರಿಯುತ್ತ ಬಂದೆ ನೀ ಅಂದು 
ಏನಾದರೂ ಉಡುಗೊರೆ ಕೊಡುವ ಆಸೆಯಿಂದ 

ಬರೆಯುತಿರುವೆ ಪ್ರೇಮಗೀತೆ ನಿನಗಿಂದು

ಈ ಜೀವ ಸಹಿಸದು ನೀ ಒಂದು ಕ್ಷಣ ನೊಂದರು
ಅಪ್ಪಿತಪ್ಪಿ ಒಂದು ಹನಿ ಕಣ್ಣೀರು ಬಂದರೂ
ಮುದ್ದಿನ ಮಾತಾಡದಿದ್ದರೂ ಚಿಂತೆಯಿಲ್ಲ ನನಗೆ
ನಿನ್ನ ಮೌನದ ರೂಪವೇ ಸಾಕು ಅದುವೇ ಎಲ್ಲ ಎನಗೆ

ಒಲವಿನ ಮುತ್ತನು ಸುರಿಸುವೆಯಾ ಎಂದು ಆಸೆಯಾಗಿ
ಮನಸಾರೆ ಬರೆದೆ ಈ ಕವನ ನಿನಗಾಗಿ
ನಿನ್ನ ತುಟಿಯಂಚು ನನ್ನ ಕಣ್ಣರೆಪ್ಪೆಯ ಸೋಕಿ ಜಾರುವ ಮುತ್ತಿಗೂ ಮುನ್ನ
ನನ್ನ ಭಾವನೆಗಳನ್ನೆಲ್ಲ ಕವಿತೆಯಲಿ ಪೋಣಿಸಿ ಮಾಡಿದ
ಮುತ್ತಿನ ಹಾರವನ್ನು ನೀನು ಕೊರಳಿಗೆ ಧರಿಸಿದರೆ ಎಷ್ಟು ಚೆನ್ನ

1 comment:

Badarinath Palavalli said...

ಇತ್ತೀಚೆಗೆ ಇಂತಹ ಸಂಪೂರ್ಣ ಭಾವತೀವ್ರತೆಯ ಪ್ರೇಮಗೀತೆಗಳನ್ನು ನಾನು ಓದಿಯೇ ಇರಲಿಲ್ಲ.