ಆಗಸದಲಿ ಕಪ್ಪು ಮೋಡ ಕವಿದಿದೆ
ಮಳೆ ನಿರೀಕ್ಷೆಯಲಿ ಭೂಮಿ ಕಾದಿದೆ
ಬೆಳ್ಳಿ ಮೋಡ ಕಾಣಲು ಸುಂದರ
ಕಾರ್ಮೋಡ ಈ ಧರೆಗೆ ಜೀವಾಳ
ಹೃದಯವೆಂಬ ಬಾನಲ್ಲಿ ನೀ ಬಿತ್ತಿದೆ ಒಲವಿನ ಮೋಡವ
ಕಾಯುತ್ತಿರುವೆ ನಾ ಸುರಿಯುವ ಆ ಪ್ರೀತಿಯ ಮಳೆಗೆ
ಈ ಸುಂದರ ಪ್ರೀತಿಗೆ ಬೆಳ್ಳಿ ಮೋಡವೇ ಸ್ಫೂರ್ತಿ
ಭಾವಗಳ ಸಂಯೋಜನೆಗೆ ಕಾರ್ಮೊಡವೇ ಸ್ಫೂರ್ತಿ
ಗಾಳಿಗೆ ಹಾರುವ ಸುಂದರ ಬೆಳ್ಳಿ ಮೋಡಕ್ಕಿಂತ ತಂಪಾಗಿ ಮಳೆ ಸುರಿಸಿ
ಶಾಶ್ವತವಾಗಿ ಧರೆ ಸೇರುವ ಕಾರ್ಮೊಡವೇ ಚಂದ
ಆ ಕಾರ್ಮೋಡ ನೀನಾಗಿ ಇಳೆಯು ನಾನಾಗಿ ನಡುವೆ ಇರುವ ಅಂತರದಲ್ಲಿ
ಒಲವೆಂಬ ಮಳೆಯ ಸುರಿಸಿದರೆ ಇನ್ನೂ ಚಂದ
No comments:
Post a Comment