ಬೆಳ್ಳಂಬೆಳಗ್ಗೆ ಬೀಸುತ್ತಿತ್ತು ತಂಗಾಳಿ
ಕುಣಿದಾಡುತಿದ್ದವು ಇಬ್ಬನಿಯೆಂಬ ಸುಂದರ
ಮುತ್ತಿನ ಹನಿಗಳು ಹಸಿರೆಲೆಯ ಮೇಲೆ
ಚಂದದ ಪುಷ್ಪವು ಮೈದುಂಬಿ ಸುರಿದಿತ್ತು
ಮನೆ ಮುಂದಿನ ನಂದನದಲ್ಲಿ, ಮುಂಜಾವಿನ
ಸುಂದರ ಪ್ರಕೃತಿಯ ಆಸ್ವಾದಿಸುತ್ತಿದ್ದ ಸಮಯ
ಮನವು ಬಿಡಿಸಲು ಬಯಸುತ್ತಿದೆ ಬಣ್ಣದ ರಂಗೋಲಿಯ
No comments:
Post a Comment