ನಿನ್ನ ಧ್ವನಿಯ ಕೇಳದೆ ಕಂಗಾಲಾಗಿದ್ದೆ ನಾ ಇಷ್ಟು ದಿನ
ಎನ್ನ ಅಗಲಿ ಎಲ್ಲಿ ಹೋದೆಯೋ ಎಂದು ಚಡಪಡಿಸುತ್ತಿತ್ತು ಈ ಮನ
ಮುಂಜಾನೆಯ ಮಂಪರು ಬೆಳಕಲ್ಲಿಯೂ
ಹುಡುಕುತ್ತಿದ್ದೆ ನಿನ್ನ ಸುಂದರ ದನಿಯ
ಹಸಿರೆಲೆ ಮೇಲಿನ ಇಬ್ಬನಿ ಕರಗಿದರೂ
ಮೋಡಗಳ ಬಂಗಾರ ಬಣ್ಣ ಹೋಗಿ
ಬೆಳ್ಳಿಯ ಬಣ್ಣ ಬಂದರೂ ನಿನ್ನ ಸುಳಿವಿಲ್ಲದೇ ಹೋಯಿತು
ನನ್ನ ಎಲ್ಲ ನೋವನ್ನೂ ಮರೆಸುತಿದ್ದೆ
ನಿನ್ನ ಇಂಪಾದ ದನಿಯಿಂದ
ಸುಖವೋ ದುಖವೋ ಒಮ್ಮೆ
ನಿನ್ನ ಸ್ವರವನ್ನು ಕೇಳಿದರೆ ಸಾಕು
ಮನ ಹಗುರಾಗಿ ಹಕ್ಕಿಯಂತೆ ಹಾರಾಡುತಿದ್ದೆ ನಾ
ನಿನಗೆ ಕಾದು ಕಾದು ಸಾಕಾಗಿ
ನಾನೇ ಹಾಡಲು ಕಲಿತಿರುವೆ
ನಿನಗೆಂದೇ ಬರೆದು ಹಾಡುತ್ತ
ಕಾಯುತಿರುವೆನು ಕೇಳೆ ಕೋಗಿಲೆ
ಈ ಹಾಡನು ಕೇಳಿಯಾದರೂ ಬರುವೆ ಏನು ನೋಡುವೆ
ಕುಹೂ ಕುಹೂ ಹಾಡುವೆ ನೀ ಕೋಗಿಲೆ
ನನಗೆ ಯಾವಾಗ ಕಲಿಸುವೆ ನೀ ಹೇಳೆಲೆ
ಕುಹೂ ಕುಹೂ ಎಂದು ಹಾಡುತ್ತಲೇ ಬೇಗನೆ
ಬಂದು ನೊಂದ ಈ ಮನಸನು ಸಂತೈಸು ಬಾರೆಲೆ
ಎನ್ನ ಅಗಲಿ ಎಲ್ಲಿ ಹೋದೆಯೋ ಎಂದು ಚಡಪಡಿಸುತ್ತಿತ್ತು ಈ ಮನ
ಮುಂಜಾನೆಯ ಮಂಪರು ಬೆಳಕಲ್ಲಿಯೂ
ಹುಡುಕುತ್ತಿದ್ದೆ ನಿನ್ನ ಸುಂದರ ದನಿಯ
ಹಸಿರೆಲೆ ಮೇಲಿನ ಇಬ್ಬನಿ ಕರಗಿದರೂ
ಮೋಡಗಳ ಬಂಗಾರ ಬಣ್ಣ ಹೋಗಿ
ಬೆಳ್ಳಿಯ ಬಣ್ಣ ಬಂದರೂ ನಿನ್ನ ಸುಳಿವಿಲ್ಲದೇ ಹೋಯಿತು
ನನ್ನ ಎಲ್ಲ ನೋವನ್ನೂ ಮರೆಸುತಿದ್ದೆ
ನಿನ್ನ ಇಂಪಾದ ದನಿಯಿಂದ
ಸುಖವೋ ದುಖವೋ ಒಮ್ಮೆ
ನಿನ್ನ ಸ್ವರವನ್ನು ಕೇಳಿದರೆ ಸಾಕು
ಮನ ಹಗುರಾಗಿ ಹಕ್ಕಿಯಂತೆ ಹಾರಾಡುತಿದ್ದೆ ನಾ
ನಿನಗೆ ಕಾದು ಕಾದು ಸಾಕಾಗಿ
ನಾನೇ ಹಾಡಲು ಕಲಿತಿರುವೆ
ನಿನಗೆಂದೇ ಬರೆದು ಹಾಡುತ್ತ
ಕಾಯುತಿರುವೆನು ಕೇಳೆ ಕೋಗಿಲೆ
ಈ ಹಾಡನು ಕೇಳಿಯಾದರೂ ಬರುವೆ ಏನು ನೋಡುವೆ
ಕುಹೂ ಕುಹೂ ಹಾಡುವೆ ನೀ ಕೋಗಿಲೆ
ನನಗೆ ಯಾವಾಗ ಕಲಿಸುವೆ ನೀ ಹೇಳೆಲೆ
ಕುಹೂ ಕುಹೂ ಎಂದು ಹಾಡುತ್ತಲೇ ಬೇಗನೆ
ಬಂದು ನೊಂದ ಈ ಮನಸನು ಸಂತೈಸು ಬಾರೆಲೆ
No comments:
Post a Comment